
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ – ಜನಜೀವನದಿಂದ ಕಣ್ಮರೆಯಾಗಿದ್ದ ಕೊರೊನ ಹೆಮ್ಮಾರಿ ಶುಕ್ರವಾರ ಯಲ್ಲಾಪುರದಲ್ಲಿ ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು ಶನಿವಾರ ಮತ್ತೆ 5 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ.

ಚುನಾವಣೆ ಕಾರ್ಯಕ್ಕಾಗಿ ರಾಜಸ್ಥಾನ ದಿಂದ ಬಂದಿರುವ ಯುವಕನೋರ್ವನಲ್ಲಿ ಸೋಂಕು ಕಾಣಿಸಿದ್ದು ಆತನ ಸಂಪರ್ಕದಲಿದ್ದ ಸುಮಾರು 70 ಮಂದಿ ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು ಶನಿವಾರ ಅದರ ಪಲಿತಾಂಶ ಬಂದಿದ್ದು ಮತ್ತೆ 5 ಜನರಲ್ಲಿ ಸೋಂಕು ದೃಡಪಟ್ಟಿದೆ.
ಕೊರೊನ ತೊಲಗಿತೆಂಬ ನಿರಾತಂಕದಲಿದ್ದ ಯಲ್ಲಾಪುರದ ಜನರಿಗೆ ಚುನಾವಣೆಯ ಕಾರಣದಿಂದ ಮತ್ತೆ ಕೋವಿಡ್ ಭೂತ ಎಲ್ಲಿ ವಕ್ಕರಿಸಿ ಬಿಡುವುದೊ ಎಂಬುದೆ ದೊಡಚಿಂತೆಯಾಗಿದೆ.
Prathidvani Yellapura