ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸದ್ದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪರ ಜಯಘೋಷ ಮುಗಿಲು ಮುಟ್ಟಿತ್ತು. ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಮಾತನಾಡಿ ರಾಜ್ಯಕ್ಕಿಂದು ಹಬ್ಬದ ವಾತಾವರಣ ಬಡವರ,ಶೋಷಿತರ, ಅಲ್ಪಸಂಖ್ಯಾತರ, ದಲಿತ, ಹಿಂದುಳಿದ,ಮಧ್ಯಮ ವರ್ಗದ ಜನ ನಾಯಕರಾಗಿ ಗುರುತಿಸುವ ಸಿದ್ದರಾಮಯ್ಯ ಅವರು ರಾಜ್ಯದ ಚುಕ್ಕಾಣಿ ಹಿಡಿದದ್ದು ಕರ್ನಾಟಕದ ಭಾಗ್ಯವಾಗಿದೆ. ಯುವಕರ ಕಣ್ಮಣಿ ಪಕ್ಷವನ್ನು ಸಂಕಷ್ಟದಲ್ಲು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಡಿ.ಕೆ ಶಿವಕುಮಾರ್ ಅವರು …
Read More »ಉತ್ತರ ಕನ್ನಡ ಜಿಲ್ಲೆಯ ವಿದ್ಯಾಕಾಶಿ ಯಲ್ಲಾಪುರದ ವೈಟಿಎಸ್ಎಸ್ ಆಂಗ್ಲ ಮಾದ್ಯಮ ಶಾಲೆಯ ಸಾಧನೆ – ಗುಣಾತ್ಮಕ ಫಲಿತಾಂಶದಲ್ಲಿ ತಾಲೂಕಿಗೆ ಮೊದಲ ಸ್ಥಾನ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವೈ.ಟಿ.ಎಸ್.ಎಸ್ ಸಂಸ್ಥೆಯ ಆಂಗ್ಲಮಾಧ್ಯಮ ಪ್ರೌಢಶಾಲೆಯು 92.55 ಗುಣಾತ್ಮಕ ಫಲಿತಾಂಶ ದಾಖಲಿಸಿ ತಾಲೂಕಿನ ಒಟ್ಟೂ 25 ಪ್ರೌಡಶಾಲೆಗಳಲ್ಲಿ ಮೊದಲ ಸ್ಥಾನದಲ್ಲಿದೆ.ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ಸಹ 100% ಫಲಿತಾಂಶ ದಾಖಲಿಸಿದ್ದು ಗುಣಾತ್ಮಕ ಫಲಿತಾಂಶದಲ್ಲೂ ತಾಲೂಕಿಗೆ ಮೊದಲ ಸ್ಥಾನ ಪಡೆದಿರುವುದರಿಂದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Read More »ಪಾದಚಾರಿ ಸಂಚಾರಕ್ಕೆ ಫುಟ್ ಪಾಥ್ ಮುಕ್ತವಾಗಿರಲಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಎಲ್ಲೆಂದರಲ್ಲಿ ಪಾದಚಾರಿ ಮಾರ್ಗವನ್ನು ಗೂಡಂಗಡಿಕಾರರು ಅತಿಕ್ರಮಣ ಮಾಡಿದ್ದು ಸಂಚರಿಸಲು ರಸ್ತೆಯನ್ನೇ ಅವಲಂಬಿಸಬೇಕಾದ ಸ್ಥಿತಿ ಒದಗಿ ಬಂದಿದೆ. ವಯೋವೃದ್ಧರು, ಮಹಿಳೆಯರು, ಮಕ್ಕಳು ವಿಶೆಷವಾಗಿ ಅಂಗವಿಕಲರು ಪಟ್ಟಣದಲ್ಲಿ ಸಂಚರಿಸಲು ಭಯ ಪಡುವ ವಾತಾವರಣವಿದೆ. ಪಟ್ಟಣಕ್ಕೆಂದೇ ಇರುವ ಮೊಳ ಉದ್ದದ ರಸ್ತೆಯಲ್ಲಿ ಗೂಡಂಗಳಿಗಳ ಆರ್ಭಟವೇ ಹೆಚ್ಚಾಗಿದ್ದು ಸಂಚರಿಸಲು ಸ್ಥಳವೇ ಇಲ್ಲದಂತಾಗಿದೆ. ಗಾಂಧಿ ಚೌಕದಿಂದ ಬಸ್ ನಿಲ್ದಾಣದವರೆಗೆ , ಬೆಲ್ ರಸ್ತೆ, ಬಸ್ …
Read More »ಕೊಟ್ಟ ಭರವಸೆ ಈಡೇರಿಸಿ-ರಾಮು ನಾಯ್ಕ್.
ಪ್ರತಿಧ್ವನಿ,ಯಲ್ಲಾಪುರ : ಕಾರಣಗಳೇನೇ ಇರಲಿ ಇಂದಿನಿಂದ ಅಧಿಕಾರಕ್ಕೆ ಬರಲಿರುವ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಹಾಗೂ ಜನಪರ ಆಡಳಿತ ನೀಡಲಿ ಎಂದು ನಾಗರೀಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪತ್ರಿಕಾ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಡುಗಳು ಹಾಗೂ ಅನೇಕ ಉಚಿತ ಕೊಡುಗೆಗಳು ಮತದಾರರ ಮೇಲೆ ಸಾಕಷ್ಟು ಪರಿಣಾಮ ಬೀರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 135 ಸ್ಥಾನಗಳಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ ಮತದಾರ ಪ್ರಭು ತನ್ನ ಕೆಲಸ ಮಾಡಿದ್ದಾನೆ. ಇನ್ನೇನಿದ್ದರೂ ನೀಡಿದ …
Read More »ಭರತನಳ್ಳಿ ” ಹಝರತ್ ಸೈಯ್ಯದ್ ಮರ್ದಾನ್ ಷಾ ಖಾದ್ರಿ ವಲಿಅಲ್ಲಾ ದರ್ಗಾ ” ದಲ್ಲಿ ನಡೆದ ಭಾವೈಕ್ಯತಾ ಉರುಸ್…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಹಝರತ್ ಸೈಯ್ಯದ್ ಮರ್ದಾನ್ ಷಾ ಖಾದ್ರಿ ವಲಿಅಲ್ಲಾ ದರ್ಗಾದಲ್ಲಿ ಪ್ರತಿವರ್ಷದಂತೆ 2 ದಿನಗಳ ಭಾವೈಕ್ಯತಾ ಉರುಸ್ (ಜಾತ್ರೆ) ನಡೆಯಿತು.22 ನೆಯ ವರ್ಷದ ಈ ಕಾರ್ಯಕ್ರಮ ಮೇ.16 ರಂದು ರಾತ್ರಿ ಗೌಸಿಯಾ ಧ್ವಜಾರೋಹಣದೊಂದಿಗೆ ಆರಂಭವಾಯಿತು. ಮೇ.17 ರಂದು ರಾತ್ರಿ ಬೆಂಗಳೂರಿನ ಉಲ್ಮಾ ಎ ಕರಾಮ್ ಮೌಲಾನಾ ಶಾರಿಬ್ ಝಿಯಾ ಮಿಸ್ವಾಹಿ ಮತ್ತು ಮಂಗಳೂರಿನ …
Read More »ಚುನಾವಣೆ ನಂತರ ಶಾಸಕ ಹೆಬ್ಬಾರ್ ನಡೆಸಿದ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಅಧಿಕಾರಿಗಳು ಚುನಾವಣ ನೀತಿ ಸಂಹಿತೆ ಮುಕ್ತಾಯವಾಗಿದೆ ಎಂಬ ವಿಷಯವನ್ನು ತಲೆಗೆ ತುಂಬಿಕೊAಡು ಸಾರ್ವಜನಿಕ ಸೇವಾ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರಸ್ತುತ ವರ್ಷದಲ್ಲಿ ಬಿಸಿಲಿನ ತಾಪಕ್ಕೆ ನೀರಿನ ಸಮಸ್ಯೆ ಎದುರಾಗುತ್ತಿದ್ದು ಮುನ್ನೆಚ್ಚರಿಕೆ ವಹಿಸಬೇಕಿದೆ. ದೈವಾನುಗ್ರಹದಿಂದ ಈ ಬಾರಿ ಯಲ್ಲಾಪುರ ತಾಲೂಕಿನಲ್ಲಿ ಇಲ್ಲಿಯವರೆಗೆ ದೊಡ್ಡ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಎಲ್ಲಾ ಇಲಾಖೆಗಳಿಗು ನನ್ನದೊಂದು ಪ್ರಮುಖ ಸೂಚನೆ ಯಾವುದೆ ಕಾರಣಕ್ಕು ಶಾಲಾ …
Read More »ಸಂಸ್ಕಾರ ಮಾನವನ ಔನ್ನತ್ಯದ ಅಡಿಪಾಯ….
ಸಂಸ್ಕಾರದಲ್ಲಿ ಎರಡು ರೀತಿಯ ಸಂಸ್ಕಾರವನ್ನು ಕಾಣಬಹುದು . ಒಂದು ಹಿಂದೂ ಧರ್ಮದಲ್ಲಿ ಬರುವ ನಾಮಕರಣ , ಅನ್ನಪ್ರಾಶನ , ಉಪನಯನ , ಕನ್ಯಾ ಸಂಸ್ಕಾರ, ವಿವಾಹ , ಇತ್ಯಾದಿ. ಇನ್ನೊಂದುಸತ್ಯ , ಧರ್ಮ, ನೀತಿ , ಕರುಣೆ, ಶಾಂತಿ,ನಂಬಿಕೆ , ಸ್ನೇಹ, ತ್ಯಾಗ, ಆಚಾರ ಇವು ಜಾತಿ , ಧರ್ಮ, ಅಂತಸ್ತುಗಳ ಮೀರಿದ ಭಾರತೀಯ ಪರಂಪರೆಯ ಶ್ರೇಷ್ಠ ಸಂಸ್ಕೃತಿಯೆನ್ನಬಹುದು . ಸಂಸ್ಕಾರವೆನ್ನುವುದು ಮಗುವಿಗೆ ತಾಯಿಯ ಗರ್ಭದಲ್ಲಿಂದಲೇ ಪ್ರಾರಂಭವಾಗುವ ಕ್ರಿಯೆ. ಮಹಾಭಾರತದಲ್ಲಿ …
Read More »ಮತದಾರರ ಪ್ರೀತಿ, ಕಾರ್ಯಕರ್ತರ ಶ್ರಮ, ದೈವ ಬಲ, ಅಭಿವೃದ್ಧಿ ನನ್ನ ಗೆಲುವಿಗೆ ಕಾರಣ; ಹೆಬ್ಬಾರ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರತಿ ಚುನಾವಣೆಯಲ್ಲೂ ಒಂದಲ್ಲ ಒಂದು ವಿಚಾರದ ಅಲೆ ಸೃಷ್ಟಿಯಾಗಿರುತ್ತದೆ. ಅದೇ ರೀತಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದದ್ದು ಮಹಾ ಗೆಲುವಿಗೆ ಕಾರಣವಾಗಿದೆ. ಇಂತಹ ಅಲೆಯಲ್ಲೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭು ಕೈಹಿಡಿದು ಗೆಲುವಿನ ದಡ ತಲುಪಿಸಿದ್ದಾರೆ. ಇದರ ಹಿಂದೆ ದೈವ ದುರ್ಲಭ ಕಾರ್ಯಕರ್ತರ ಶ್ರಮ, ಅಭಿವೃದ್ಧಿ ಕಾರ್ಯಗಳು, ಹೆಚ್ಚಾಗಿ ನನ್ನ …
Read More »ಗಟ್ಟಿಮುಟ್ಟಾದ ಬ್ರಿಟಿಷ್ ಸೇತುವೆ ಮುಂಜಾಗ್ರತೆಗೆ ಪಕ್ಕದಲ್ಲೆ ನಿರ್ಮಾಣವಾಗುತ್ತಿದೆ ಇನ್ನೊಂದು ಸೇತುವೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ -ಯಲ್ಲಾಪುರ ಮತ್ತು ಹಳಿಯಾಳ ತಾಲೂಕಿನ ಗಡಿ ಪ್ರದೇಶವಾದ ತಾಟವಾಳ ಸಮೀಪ ರಾಜ್ಯ ಹೆದ್ದಾರಿಗೆ ಸೇತುವೆ ನಿರ್ಮಾಣ ಹಂತದಲ್ಲಿದ್ದು ಸರ್ವಜನಿಕ ಸೇವೆಗೆ ಸೆಪ್ಟೆಂಬರ್ ತಿಂಗಳಲ್ಲಿ ದೊರೆಯಬೇಕಿದೆ. ತಾಟವಾಳ ಸಮೀಪ ಯಲ್ಲಾಪುರ ಹಳಿಯಾಳ ಬೆಸೆಯುವ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ತಟ್ಟಿಹಳ್ಳ ಡ್ಯಾಂನಿಂದ ಹೆಚ್ಚಾದ ನೀರನ್ನು ಹೊರಬಿಟ್ಟರೆ ಮಳೆಗಾಲದಲ್ಲಿ ಸೇತುವೆ ತುಂಬಿ ಹರಿಯುತ್ತದೆ. ಕಳೆದೆರಡು ವರ್ಷದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ …
Read More »ಯಲ್ಲಾಪುರದ ಆರ್ತಿಬೈಲ್ ಘಟ್ಟದಲ್ಲಿ ಮದ್ಯದ ಬಾಕ್ಸ್ ತುಂಬಿದ್ದ ಲಾರಿ ಪಲ್ಟಿ
ಪ್ರತಿಧ್ವನಿ,ಯಲ್ಲಾಪುರ- ತಾಲ್ಲೂಕಿನ ಆರ್ತಿಬೈಲ್ ಘಟ್ಟದಲ್ಲಿ ಮದ್ಯದ ಬಾಕ್ಸ್ ತುಂಬಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗಟಾರಕ್ಕೆ ಉರುಳಿಬಿದ್ದ ಘಟನೆ ಮಂಗಳವಾರ ನಡೆದಿದೆ. ಕಲ್ಬುರ್ಗಿಯಿಂದ ಉಡುಪಿಗೆ ವಿವಿಧ ಮಾದರಿಯ ಮದ್ಯದ ಬಾಟಲ್ ಇರುವ ಬಾಕ್ಸ್ ಗಳನ್ನು ಲೋಡ್ ಮಾಡಿಕೊಂಡು ಸಾಗುತ್ತಿದ್ದ ಲಾರಿಯು ತಾಲ್ಲೂಕಿನ ಅರ್ತಿಬೈಲ್ ಘಟ್ಟ ಪ್ರದೇಶದ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ಲಾರಿಯ ಮುಂಬಾಗ ಜಕಂ …
Read More »
Prathidvani Yellapura