Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಕರ ಅಪಘಾತ ಒರ್ವ ಸ್ಥಳದಲ್ಲೆ ಸಾವು..!!

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಹೊರವಲಯದಲ್ಲಿರುವ ಕೆ.ಮಿಲನ್ ಹೋಟೆಲ್ ಸಮೀಪ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಟ್ರಕ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ನಡೆದಿದೆ.ತಾಲೂಕಿನ ತಾಳಿಕುಂಬ್ರಿ ನಿವಾಸಿ ವಾಸುದೇವ ಬಾರ್ಕೆಲ್ಯಾ ಸಿದ್ದಿ(35) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿರುತ್ತಾನೆ. ರವಿವಾರ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರದ ಕಡೆಗೆ ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಮಹಾರಾಷ್ಟç ನೋಂದಣಿಯ ಟ್ರಕ್ ಚಲಾಯಿಸಿಕೊಂಡು ಬಂದ ಔರಾದ್ …

Read More »

ಕಾರ್ಯನಿರತ ಪತ್ರಕರ್ತರ ಸಂಘದ ” ಪತ್ರಿಕಾ ದಿನಾಚರಣೆ ” ಸಂಭ್ರಮ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಯಾವುದೇ ಪತ್ರಿಕೆ ಓದುಗರ ಸ್ವತ್ತೇ ಹೊರತು ಬರೆಯುವವರ ಸ್ವತ್ತಲ್ಲ ಎಂಬುದನ್ನು ವರದಿಗಾರರು ಮನಗಾಣಬೇಕಿದ್ದು, ಪತ್ರಕರ್ತರು ತಮ್ಮ ವೃತ್ತಿಗೆ ನ್ಯಾಯ ಒದಗಿಸುವುದೇ ಇಂತಹ ಕಾರ್ಯಕ್ರಮಗಳ ಸಾರ್ಥಕತೆಗೆ ಸಾಕ್ಷಿಯಾಗುತ್ತದೆ. ಅಲ್ಲದೇ ವರದಿಗಳು ಸಮಾಜದ ದೈನಂದಿನ ಆಗು-ಹೋಗುಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ನೀಗಿಸುವ ಮಾರ್ಗಸೂಚಿಯಾಗಿರಬೇಕು ಎಂದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ಪಟ್ಟಣದ ಅಡಿಕೆ ಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವು …

Read More »

ಕಸ್ತೂರಿ ರಂಗನ್ ವರದಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಮರಣ ಶಾಸನ ಜಾರಿಯಾಗಲು ಬಿಡುವುದಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಜನಜೀವನ ಅರಣ್ಯವಾಸಿ ಬುಡಕಟ್ಟು ಜನಾಂಗದವರ ಮೇಲೆ ಗಂಭೀರ ಪರಿಣಾಮ ಬೀರಿ ನನ್ನ ನೆಲಕ್ಕೆ ದಕ್ಕೆಯಾಗಲಿರುವ ಡಾ,ಕೆ.ಕಸ್ತೂರಿ ರಂಗನ್ ವರದಿ ಜಾರಿಗೆ ನನ್ನ ಉಗ್ರ ಹೋರಾಟವಿದೆ – ಹೆಬ್ಬಾರ್ ಪ್ರತಿಧ್ವನಿ,ಯಲ್ಲಾಪುರ : ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಂಡ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ತರಾತುರಿಯಲ್ಲಿ ಡಾ ಕೆ. ಕಸ್ತೂರಿ ರಂಗನ ವರದಿಯನ್ನು ಜಾರಿಗೊಳಸುವ ಬಗ್ಗೆ ತೀರ್ಮಾನಿಸಿರುವುದನ್ನು ನಾನು ಅತ್ಯಂತ ತೀವ್ರವಾಗಿ ವಿರೋದಿಸುತ್ತೇನೆ ಎಂದು ಯಲ್ಲಾಪುರ ವಿಧಾನ …

Read More »

ತರಕಾರಿ ತುಂಬಾ ದುಬಾರಿ – ಸಂಕಷ್ಟದಲ್ಲಿ ಹೊಟೆಲ್ ಉದ್ಯಮ

ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಮಾರ್ಕೆಟ್ ರಾಣಿಯಾಗಿ ಟೊಮ್ಯಾಟೊ ಮೆರೆಯುತ್ತಿದ್ದರೆ ಇತರೆ ತರಕಾರಿಗಳು ನಾವು ಕಡಿಮೆ ಇಲ್ಲ ಎಂಬಂತೆ ಪೈಪೋಟಿಗೆ ಬಿದ್ದಂತಿದೆ ನಿದಾನವಾಗಿ ಇತರೆ ತರಕಾರಿಗಳು ದುಬಾರಿಯಾಗಿವೆ. ಇದರಿಂದ ಜನ ಸಾಮಾನ್ಯರು ಕಂಗಾಲಾಗಿದ್ದು ಹೊಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಎಣ್ಣೆಬೆಲೆ ಹೆಚ್ಚಾಯ್ತು. ತರಕಾರಿ ಬೆಲೆ ಹೆಚ್ಚಾಯ್ತು. ಗ್ಯಾಸ್ ಬೆಲೆ ಹೆಚ್ಚಾಯ್ತು ಎಂದು ಹೊಟೆಲ್ ತಿಂಡಿತಿನಿಸುಗಳ ಬೆಲೆ ಏಕಾಏಕಿ ಹೆಚ್ಚಿಸಲು ಬರುವುದಿಲ್ಲ. ಹಾಗೆಂದು ನಿತ್ಯ ಲುಕ್ಸಾನ ಅನುಭವಿಸಲು ಸಾದ್ಯವಿಲ್ಲ. …

Read More »

ಸೋರುತಿದೆ,ಕರೆಂಟ್ ಶಾಕ್, ಸಂಬಳವಿಲ್ಲ.ಏನೀ ಅವಾಂತರ ಇಂದಿರಾ ಕ್ಯಾಂಟೀನ್ ಗೆ ಗಂಡಾಂತರ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕಾರ‌ ಗದ್ದುಗೆ ಏರುತ್ತಲೆ ಜನ ಮಾನಸದಲ್ಲಿ ಅಂದುಕೊಂಡದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಅವರೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗೆ ಮತ್ತಷ್ಟು ಬಲತುಂಬಿ ರಾಜ್ಯಾದ್ಯಂತ ಇನ್ನಷ್ಟು ಕ್ಯಾಂಟಿನ್ ಗಳು ತಲೆ ಎತ್ತಲಿವೆ ಎನ್ನುವುದಾಗಿತ್ತು. ಆದರೆ ಯಲ್ಲಾಪುರದಲ್ಲಿ ಇರುವ ಕ್ಯಾಂಟಿನ್ ಕಟ್ಟಡ ಮಳೆ ನೀರು ಸೋರಿ ಕಟ್ಟಡವೆಲ್ಲಾ ವಿದ್ಯುತ್ ಪ್ರವಹಿಸಲು ಪ್ರಾರಂಭವಾಗಿ ಒಂದುವಾರಗಳ ಕಾಲ ಮುಚ್ಚಲಾಗಿತ್ತು …

Read More »

12 ಅಡಿ ಉದ್ದದ ಕಾಳಿಂಗ ಸರ್ಪ ಸುರಕ್ಷಿತವಾಗಿ ಕಾಡಿಗೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ: ತಾಲೂಕಿನ ಬಿಳಕಿ ಸಮೀಪದ ಬಸವನಗುಂಡಿ ಬಳಿ ಕಾಣಿಸಿಕೊಂಡ ಕಾಳಿಂಗ ಸರ್ಪವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಬಿಳಕಿ ಬಳಿಯ ಬಸವನಗುಂಡಿ ಗ್ರಾಮದಲ್ಲಿ ಹೊಲದ ಪಕ್ಕದಲ್ಲಿ ಒಣಗಿದ ಮರದ ಪೊಟರೆಯೊಂದರಲ್ಲಿ ಕಳೆದ 15 ದಿವಸಗಳಿಂದ ಕಾಳಿಂಗ ಸರ್ಪ ವಾಸವಾಗಿತ್ತು. ಸ್ಥಳೀಯ ರೈತರು ಹೊಲದತ್ತ ಹೋಗಲು ಭಯಪಡುವಂತಾಗಿತ್ತು.ನಿಮ್ಮ ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಶಿರಸಿಯ ಉರಗಪ್ರೇಮಿ ಸೈಯ್ಯದ್ …

Read More »

ಯಲ್ಲಾಪುರದ ಜನಸ್ನೇಹಿ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಶಿರಸಿಗೆ ವರ್ಗಾವಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ತಾಲೂಕು ದಂಡಾಧಿಕಾರಿಯಾಗಿ ಉತ್ತಮ ಹೆಸರುಗಳಿಸಿ ಜನರಿಗೆ ಹತ್ತಿರವಾಗಿದ್ದ ಶ್ರೀಕೃಷ್ಣ ಕಾಮ್ಕರ್ ಅವರನ್ನು ಚುನಾವಣೆ ನಿಮಿತ್ತ ಸ್ಥಳ ಬದಲಿಸಲಾಗಿತ್ತು. ಚುನಾವಣೆ ಮುಗಿದ ನಂತರ ಇತ್ತೀಚಿಗೆ ಪುನಃ ಯಲ್ಲಾಪುರ ತಾಲೂಕಿನ ದಂಡಾಧಿಕಾರಿಯಾಗಿ ಮುಂದುವರೆದಿದ್ದರು. ಸರ್ಕಾರ ಜು.28 ರಂದು ವರ್ಗಾವಣೆ ಮಾಡಿದ್ದು ಶಿರಸಿಯ ಉಪವಿಭಾಗಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡಿರುತ್ತಾರೆ. ಯಲ್ಲಾಪುರದ ನೂತನ ದಂಡಾಧಿಕಾರಿಯಾಗಿ ಚುನಾವಣಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ಗುರುರಾಜ್ ಅವರನ್ನು ಪುನಃ …

Read More »

ಯಲ್ಲಾಪುರದಲ್ಲಿ ನಡೆದ ಭಾವೈಕ್ಯತೆಯ ಸಂದೇಶ ಸಾರಿದ ಮೊಹರಂ ಆಚರಣೆ

ಯಲ್ಲಾಪುರ : ಮುಸ್ಲಿಂ ಭಾಂಧವರ ಶ್ರೇಷ್ಠ ಹಬ್ಬಗಳಲ್ಲೊಂದಾದ ಮೊಹರಂ ಆಚರಣೆಯು ತಾಲೂಕಿನಾದ್ಯಂತ ವಿಜೃಂಬಣೆಯಿಂದ ಜರುಗಿತು. ಕಳೆದೆರಡು ದಿನಗಳಿಂದ ಮಳೆಯೂ ಕಡಿಮೆಯಾಗಿದ್ದು ಮೊಹರಂ ಮೆರವಣಿಗೆಗೆ ಅಡಚಣೆ ಇಲ್ಲದಂತಾಗಿತ್ತು. ಸುಮಾರು 23 ಮೊಹರಂ ಕಮಿಟಿಗಳು ತಾಲೂಕಿನಲ್ಲಿದ್ದು ಆಯಾ ವ್ಯಾಪ್ತಿಯಲ್ಲಿ ಪಂಜದ ಮೆರವಣಿಗೆಯೊಂದಿಗೆ ನಿಯಮಾನುಸಾರ ಧಾರ್ಮಿಕ ಆಚರಣೆಯನ್ನು ಆಚರಿಸಲಾಯಿತು. ಪಟ್ಟಣದ ತಿಲಕಚೌಕದಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲಾ ಪಂಜಾಗಳು ಮೆರವಣಿಗೆ ನಡೆಸಿದವು. ಈ ಸಂದರ್ಭದಲ್ಲಿ ಮೊಹರಂ ಕುರಿತಾದ ಗೀತೆಯನ್ನು ಹಾಡುವ ತಂಡದ ಗಾನಸುಧೆ ಮೆರವಣಿಗೆಯ ಉದ್ದಕ್ಕೂ …

Read More »

ಯಲ್ಲಾಪುರದಲ್ಲಿ ನಡೆದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕದ ಪತ್ರಿಕಾ ದಿನಾಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪತ್ರಿಕೊದ್ಯಮಕ್ಕೆ ಉತ್ತರಕನ್ನಡದ ಕೊಡುಗೆ ಅತ್ಯಧಿಕ. ಇಲ್ಲಿನವರು ಪತ್ರಿಕೊದ್ಯಮವನ್ನು ವೃತ್ತಿಯಾಗಿಸಿಕೊಂಡವರಲ್ಲ. ನಂತರ ವೃತ್ತಿಯಾಗಿಸಿಕೊಂಡು ಬಹಳಷ್ಟು ಯಶಸ್ಸು ಸಾಧಿಸಿದ್ದಾರೆ. ಪತ್ರಕರ್ತನಾದವನು ಸತ್ಯ ಶೋಧಕನಾಗಿರಬೇಕು, ತಾನು ಅನುಭವಿಸಿ ಅಂತಿಮ ಸತ್ಯವೇನೆಂಬುದನ್ನು ಅರ್ಥ ಮಾಡಿಕೊಂಡು ವರದಿ ಮಾಡಬೇಕು. ಇಂತಹ ವ್ಯಕ್ತಿಗಳನ್ನು ಪತ್ರಕರ್ತರೆನ್ನಬಹುದು. ಪತ್ರಕರ್ತರು ಸಮಾಜದ ಆಗು ಹೋಗುಗಳನ್ನು ಅರಿಯುವಂತಿದ್ದು, ಇವರು ಸಂಚಾರಿಯಾಗಿರಬೇಕಲ್ಲದೇ, ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅಲ್ಲದೇ ಪತ್ರಕರ್ತರಿಗೆ ತಮ್ಮ ನೆಲದ ಕುರಿತು ಹಾಗೂ …

Read More »

ಗಣಪನ ಉದರದ ಆಭರಣ ಗಣಪತಿ ಫೋಟೋ ಮೇಲೆ ಪ್ರತ್ಯಕ್ಷ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ಗಣಪತಿ ಫೋಟೋ ಪಟ್ಟಿಯ ಮೇಲೆ ಹಾವಿನ ಮರಿಯೊಂದು ಪ್ರತ್ಯಕ್ಷವಾಗಿದ್ದು ಭಯದ ನಡುವೆಯು ಭಕ್ತಿ ಮೂಡಿತ್ತು. ಪೊಲೀಸ್ ವಸತಿ ಗೃಹದ ದೀಪಕ್ ನಾಯ್ಕ ಎಂಬುವರ ಮನೆಯಲ್ಲಿ “ಸಿಲೋನ್ ಕ್ಯಾಟ್ ಸ್ನೇಕ್ ” ಎಂಬ ಹೆಸರಿನ ಹಾವು ಗಣಪತಿ ಫೋಟೋ ಮೇಲೆ ಸಿಂಬೆ ಸುತ್ತಿ ಮಲಗಿತ್ತು ತಕ್ಷಣ ಸ್ನೇಕ್ ಅಕ್ಬರ್ ಗೆ ಮಾಹಿತಿ ಮುಟ್ಟಿಸುತ್ತಲೆ ಸ್ಥಳಕ್ಕೆ ಆಗಮಿಸಿ …

Read More »