Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಬೇಡ್ತಿ ಕುಡಿಯುವ ನೀರಿನ ಯೋಜನೆ ಹಳ್ಳಹಿಡಿಯಿತು – ಕನಿಷ್ಟ ಬಳಸಿದ ಯಂತ್ರಣೊಪಕರಣ ರಕ್ಷಿಸಿ ಪರಿಸರವನ್ನು ಪ್ರವಾಸಿತಾಣವಾಗಿಸಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕಳೆದ ಕೆಲವರ್ಷಗಳ ಹಿಂದೆ ಯಲ್ಲಾಪುರ ಪಟ್ಟಣದ ಜನರ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲೆಂದೇ ಅನುಷ್ಠಾನಗೊಂಡ  25 ಕೋಟಿ ಮೌಲ್ಯದ ಬೇಡ್ತಿ ಕುಡಿಯುವ ನೀರಿನ ಯೋಜನೆ ಕಾಲಕ್ರಮೇಣ ನಿರ್ಲಕ್ಷಕ್ಕೊಳಗಾಗಿ ಅವಸಾನದತ್ತ ಸಾಗಿ ಕೇವಲ ಪಳಿಯುಳಿಕೆ ಉಳಿಯುವಂತಹ ಸ್ಥಿತಿಗೆ ಬಂದು ತಲುಪಿದೆ. ಜನರಿಗಾಗಿ ಅನುಷ್ಠಾನಗೊಂಡ ಯೋಜನೆಯೊಂದು ಅಪಾರ ನಷ್ಟ ಕಂಡು ಜನೋಪಯೋಗಕ್ಕೆ ಬಾರದಂತಾಗಿದ್ದು ದುರಂತವಾದರೂ ಯೋಜನೆಗೆ ಬಳಸಿದ ಅತ್ಯಾಧುನಿಕ …

Read More »

ವಿಶ್ವದರ್ಶನ ಸಂಸ್ಥೆ ಆಯೋಜನೆಯ “ಭಾರತೀಯ ಜೀವನ ಶಿಕ್ಷಣ ಶಿಭಿರ “ದ ಸಮಾರೋಪ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಜೀವನದ ಆನಂದ ಸತ್ಯದರ್ಶನ ಎಲ್ಲವು ಒಳ್ಳೆಯದು ಎನ್ನುವ ಭಗವಂತನನ್ನು ಅರ್ಥೈಸಿಕೊಳ್ಳುವಂತಹದ್ದಾಗಿದೆ. ಇಂತಹ ಸತ್ಕಾರ್ಯಗಳಿಂದಲೆ ಧರ್ಮ,ಅರ್ಥ,ಕಾಮ,ಮೋಕ್ಷ ಎಲ್ಲವು ಬದುಕಿನ ಸಾರ್ಥಕತೆಯ ಪಯಣದಲ್ಲಿನ ಸಾತ್ವಿಕ ವಿಚಾರಗಳಾಗಿದೆ. ಇಂತಹ ವಿಚಾರಗಳನ್ನು ಮಕ್ಕಳಿಗೆ ಹೆಳಿಕೊಟ್ಟಾಗ ಅವರಿಗೆ ಆತ್ಮಶಕ್ತಿ ವೃದ್ದಿಸುತ್ತದೆ ಅಲ್ಲದೆ ನೆಲದ ನಡುವಿನ ಭಾಂಧವ್ಯ ಗಟ್ಟಿಗೊಳ್ಳುತ್ತದೆ. ಭಾರತೀಯ ಪರಂಪರೆ, ಆಚಾರ,ವಿಚಾರ ಗಳ ಬಗೆಗಿನ ಕುರಿತು ಭವಿಷ್ಯದ ಪೀಳಿಗೆಗೆ ಅರಿವಿರಬೇಕು ಅದಕ್ಕೆ ಇಂತಹ …

Read More »

ಕಿರವತ್ತಿಯಲ್ಲಿ ಶ್ರದ್ದೆ ಭಕ್ತಿ ಯಿಂದ ಪ್ರಭು ಏಸುವಿನ ಪ್ರಾರ್ಥನೆ – ಗುಡ್ ಫ್ರೈಡೇ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕ್ರೈಸ್ತರ ಪರಮ ಪವಿತ್ರ ದಿನಗಳಲ್ಲಿ ಒಂದಾದ “ಗುಡ್ ಫ್ರೈಡೇ” ಶ್ರದ್ಧಾ ಭಕ್ತಿಗಳಿಂದ ಏಸುವಿನ ಪ್ರಾರ್ಥನೆಯೊಂದಿಗೆ ಕಿರವತ್ತಿಯ ಸಂತ ಜೋಸೆಫರ ದೇವಾಲಯದಲ್ಲಿ ಆಚರಿಸಲಾಯಿತು. ಫಾ.ಮೈಕೇಲ್ ಪಿಂಟೋ ಧರ್ಮಗುರುಗಳ ನೇತೃತ್ವದಲ್ಲಿ ಏಸುವಿಗೆ ಮರಣ ದಂಡನೆ ವಿಧಿಸಿದ ಚಿತ್ರಪಟವನ್ನು ಹಿಡಿದು ಶಿಲುಬೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಗುಡ್ ಫ್ರೈಡೇ ಪವಿತ್ರ ಸಂದೇಶವನ್ನು ಸಾರಲಾಯಿತು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ …

Read More »

ಯಲ್ಲಾಪುರ ಪಟ್ಟಣ ಪಂಚಾಯತ  ನಿಧಿ ಖೋತಾ – ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ – ಸೋಮೇಶ್ವರ ನಾಯ್ಕ್ ಆಗ್ರಹ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಮೀನು ಮತ್ತು ಮಾಂಸ ಮಾರುಕಟ್ಟೆಯ ಟೆಂಡರ್ ಅವಧಿ ಮುಗಿದು ಒಂದು ವರ್ಷವೇ ಆಗಿದ್ದರೂ ಈವರೆಗೂ ಟೆಂಡರ್ ಕರೆಯದಿರುವುದು ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪಟ್ಟಣದ ಬಸ್‌ನಿಲ್ದಾಣದ ಸಮೀಪವಿರುವ ಮೀನು ಮತ್ತು ಮಾಂಸ ಮಾರುಕಟ್ಟೆಯು ಪಟ್ಟಣ ಪಂಚಾಯತ ಆಡಳಿತಕ್ಕೆ ಒಳಪಟ್ಟಿದ್ದು ಒಳಭಾಗದಲ್ಲಿರುವ ಕಟ್ಟೆಗಳನ್ನು ಈ …

Read More »

ಪವರ್ ಟವರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿ ; ಕರೆಂಟಿಲ್ಲದೇ ಬಸವಳಿದ ಜನತೆ : ಸ್ವಲ್ಪ ಸಹಿಸಿಕೊಂಡರೆ ವಿದ್ಯುತ್ ಸಮಸ್ಯೆಗೆ ಪರಿಹಾರ..

ಯಲ್ಲಾಪುರ : ಕಳೆದ ಕೆಲದಿನಗಳಿಂದ ಯಲ್ಲಾಪುರ ತಾಲೂಕಿನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ಯಾಡುತ್ತಿದ್ದು ಬೇಸಿಗೆಯ ಧಗೆಯಲ್ಲಿ ಬಸವಳಿದ ಜನತೆ ಹಿಡಿಶಾಪ ಹಾಕುತ್ತಿದ್ದರೆ ಕರೆಂಟನ್ನೆ ನಂಬಿ ವ್ಯಾಪಾರ ಮಾಡುವ ಐಸ್‌ಕ್ರೀಂ ವ್ಯಾಪಾರಿಗಳು ನಷ್ಟ ಅನುಭವಿಸುತ್ತಾ ಐಸ್‌ಕ್ರೀಂ ಮಾರುವುದನ್ನೇ ಬಿಡುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಇದಕ್ಕೆ ನಿರ್ವಹಣೆ ಹೆಸರಿನಲ್ಲಿ ದಿನವಿಡೀ 8 ಘಂಟೆಗಳ ಕಾಲ ನಿರಂತರ ವಿದ್ಯುತ್ ಕಡಿತವಾಗುತ್ತಿರುವುದೇ ಕಾರಣವಾಗಿದೆ ಎಂಬುದು ಜನರ ಅಭಿಪ್ರಾಯವಾಗಿದೆ ಆದರೆ ವಾಸ್ತವದಲ್ಲಿ ಕರೆಂಟ್ ತೆಗೆಯುತ್ತಿರುವುದೆ ಭವಿಷ್ಯದಲ್ಲಿ ವಿದ್ಯುತ್ ಸಮಸ್ಯೆ ಬರದಂತೆ …

Read More »

ಅರಬೈಲ್ ಘಟ್ಟದಲ್ಲಿ ಲಾರಿ ಮತ್ತು ಬಸ್ ಬಡುವೆ ಅಪಘಾತ ಲಾರಿ ಕ್ಲೀನರ್ ಸಾವು.

ಯಲ್ಲಾಪುರ : ಚಾಲಕನ ಅತಿವೇಗದ ಚಾಲನೆಯಿಂದಾಗಿ ಲಾರಿಯೊಂದು ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಮುಂದೆ ಸಾಗಿ ಪಲ್ಟಿಯಾಗಿ ಅಪಘಾತವಾದ ಕಾರಣ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಶಿರಲೆ ಫಾಲ್ಸ್ ಬಸ್‌ನಿಲ್ದಾಣದ ಬಳಿ ನಡೆದಿದೆ. ಶಂಭು ಧುಪಾಲ ಯಾದವ್ ಎಂಬ ಲಾರಿ ಚಾಲಕನು ತನ್ನ ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗವಾಗಿ ಚಲಾಯಿಸಿಕೊಂಡು ಬಂದ ಪರಿಣಾಮ ತಾಲೂಕಿನ ಶಿರಲೆ ಫಾಲ್ಸ್ ಬಸ್‌ನಿಲ್ದಾಣದ ಸಮೀಪದ ಏರು ರಸ್ತೆಯಲ್ಲಿ ಹೋಗುತ್ತಿದ್ದ …

Read More »

ದಲಿತ ಸಂಘರ್ಷ ಸಮಿತಿ ಕೆರೆಹೊಸಳ್ಳಿ ಘಟಕ ನೂತನ ಪದಾಧಿಕಾರಿ ಮಂಡಳಿ ಅಸ್ತಿತ್ವಕ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಕಂಪ್ಲಿ ಪಂಚಾಯತ ವ್ಯಾಪ್ತಿಯ ಕೆರೆಹೊಸಳ್ಳಿ ಗ್ರಾಮದಲ್ಲಿ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿ ಮಂಡಳಿ ಏ.16ರಂದು ಅಸ್ತಿತ್ವಕ್ಕೆ ಬಂದಿತು. ದಲಿತ ಪರ ಹೋರಾಟಕ್ಕೆ , ಸಮಾಜದಲ್ಲಿ ತುಳಿತಕ್ಕೊಳಗಾದವರ ಸಹಾಯಕ್ಕೆ ಧಾವಿಸಲು ಸಮಿತಿ ಕಟಿಬದ್ಧವಾಗಿದ್ದು ನೂತನ ಪದಾಧಿಕಾರಿ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಜಿಲ್ಲಾ ಸಂಘಟನೆಯ ಸಂಚಾಲಕ ಕಲ್ಲಪ್ಪ …

Read More »

ಸುಳ್ಳುದೂರು – ಸುಳ್ಳು ಮಾಹಿತಿ ನೀಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರರಲ್ಲಿ ಮನವಿ..

ಯಲ್ಲಾಪುರ : ಇತ್ತೀಚೆಗೆ ಯಲ್ಲಾಪುರ ಪಟ್ಟಣದಲ್ಲಿ ಸುಳ್ಳು ದೂರು ಸಲ್ಲಿಸುವುದು. ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದ್ದು ಅಂತಹವರ ವಿರುದ್ದ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೆಲವು ನಾಗರಿಕರು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಮೂಲಕ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ಬಿಸಗೋಡು ಕ್ರಾಸ್ ನಲ್ಲಿ ಅನಧಿಕೃತವಾಗಿ ಹೊಟೆಲ್ ನಡೆಯುತ್ತಿರುವುದಾಗಿ ಮತ್ತು ‌ಇದರಿಂದ ಸಾರ್ವಜನಿಕರಿಗೆ …

Read More »

ಬಿರು ಬೇಸಿಗೆಯಲ್ಲೂ ಬತ್ತದೆ ನಳನಳಿಸುವ ಯಲ್ಲಾಪುರದ ಕೆರೆಗಳಿಗೆ ಕಾಯಕಲ್ಪ ಬೇಕಿದೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಯಲ್ಲಾಪುರ ತಾಲೂಕು ಜಲಪಾತಗಳ ತವರೆಂದು ಖ್ಯಾತಿ ಪಡೆದರೂ ಪಟ್ಟಣದಲ್ಲಿ ಮಾತ್ರ ಕೆರೆಗಳೇ ಪ್ರಮುಖ ಪಾತ್ರ ವಹಿಸಿವೆ. ಪಟ್ಟಣ ವ್ಯಾಪ್ತಿಯಲ್ಲಿ ಪ್ರಮುಖವಾಗಿ 9 ಕೆರೆಗಳಿದ್ದು ಮಳೆಗಾಲದಲ್ಲಿ ತುಂಬಿ ನಳನಳಿಸುತ್ತಾ ಪಟ್ಟಣದಾದ್ಯಂತ ಅಂತರ್ಜಲ ಹೆಚ್ಚಿಸುವಲ್ಲಿ ಪ್ರಮುಖವಾಗಿವೆ. ಅವುಗಳಲ್ಲಿ 5 ಕೆರೆಗಳು ರಸ್ತೆ ಬದಿಯಲ್ಲೇ ಇದ್ದು ನೋಡುಗರ ಗಮನ ತನ್ನತ್ತ ಸೆಳೆಯುತ್ತವೆ. ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೂರು ಕೆರೆಗಳಿದ್ದು …

Read More »

ಯಲ್ಲಾಪುರದ ರೈತ ಸ್ನೇಹಿ ಕೃಷಿಸಂಸ್ಥೆ ಮಲೆನಾಡು ಕೃಷಿ ಸೇವಾ ಸಹಕಾರಿ ಸಂಘ ನಿಯಮಿತ ಕ್ಕೆ “25 ರ ರಜತ ಸಂಭ್ರಮ”

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕೃಷಿ ಕ್ಷೇತ್ರದಲ್ಲಿ ನಂಬಿಕೆ ಮತ್ತು ವಿಶ್ವಾಸದೊಂದಿಗೆ ತಾಲೂಕಿನ ರೈತಾಪಿ ವರ್ಗ ನಮ್ಮ ಸಂಸ್ಥೆಯ ಮೇಲೆ ಭರವಸೆ ಇಟ್ಟು ಕಳೆದ 25 ವರ್ಷಗಳಿಂದ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಇಂದು ರಜತ ಸಂಭ್ರಮದ ಹೊಸಿಲಿಗೆ ಬಂದಿದೆ. ಏ. 20 ರ ರವಿವಾರ ಸಂಪೂರ್ಣ ಒಂದು ದಿನ ರಜತ ಸಂಭ್ರಮದ ಕಾರ್ಯಕ್ರಮಕ್ಕೆ ಮೀಸಲಿರಿಸಿದೆ ಎಂದು ಮಲೆನಾಡು ಕೃಷಿ ಸೇವಾ …

Read More »