Breaking News

ಮಂಗಗಳ ಹಾವಳಿ ಉದುರಿಬಿದ್ದ ಅಡಿಕೆ ಮಿಳ್ಳೆ ತಂದು ಅಳಲು ತೋಡಿಕೊಂಡ ನೊಂದ ರೈತರು

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಎಳೆ ಅಡಿಕೆಗಳನ್ನೇ ತಿಂದು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡುತ್ತಿರುವ ಬಿಳಿ ಮಂಗಗಳ ಹತೋಟಿಗಾಗಿ ಮಂಚೀಕೇರಿ ಅರಣ್ಯಾಧಿಕಾರಿ ಅವರನ್ನು ಭೇಟಿ ಮಾಡಿ ರೈತರು ಮನವಿಯನ್ನು ಸಲ್ಲಿಸಿದರು. ಉಮ್ಮಚ್ಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಮತ್ತು ತೋಟದಕಲ್ಲಳ್ಳಿಯ ಪ್ರಗತಿಪರ ರೈತ ವೆಂಕಟರಮಣ ಹೆಗಡೆ ಇವರ ನೇತ್ರತ್ವದಲ್ಲಿ ಅರಣ್ಯಾಧಿಕಾರಿಗಳನ್ನು ಭೇಟಿಯಾದ ಈ ತಂಡದಲ್ಲಿ ಉದಯ ಭಟ್ಟ ಕಲ್ಲಳ್ಳಿ, ನಾಗ್ಪತಿ …

Read More »

ಕೊರನ ದಿಂದ ಸಾವನಪ್ಪಿದ ಬಹುತೇಕರಿಗೆ ಮುಕ್ತಿ ನೀಡಿದ ಆಂಬುಲೆನ್ಸ್ ಚಾಲಕ ಪ್ರಮೋದ ನಿಧನ..

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣ ಬಾಳಗಿಮನೆ ಮಾಗೋಡು ಕ್ರಾಸ್ ನಿವಾಸಿ ಪ್ರಮೋದ ಮಹಾಬಲೇಶ್ವರ ನಾಯ್ಕ ( 49) ಹೃದಯಾಘಾತದಿಂದ ನಿಧನರಾಗಿರುತ್ತಾರೆ.ಪ್ರಮೋದ ಸುಮಾರು 10 ಕ್ಕು ಹೆಚ್ಚು ವರ್ಷಗಳಿಂದ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಬುಲೆನ್ಸ್ ಚಾಲಕನಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಮನೆಯ ಹತ್ತಿರದಲ್ಲೆ ವಾಟರ್ ಸರ್ವಿಸ್ ಸೆಂಟರ್ ನಡೆಸುತ್ತ ಜೀವನ ಸಾಗಿಸುತ್ತಿದ್ದರು.ಕೊರೊನ ಸಂಕಷ್ಟದ ಸಮಯದಲ್ಲಿ ಕೆಲವು ಸೋಂಕಿತರನ್ನು ಮುಟ್ಟಲು ಭಯಪಡುವ ಸಮಯದಲ್ಲಿ ಮಾನವೀಯತೆಯಿಙದ ಉಪಚರಿಸಿ. ಆಂಬುಲೆನ್ಸ್ ನಲ್ಲಿ …

Read More »

ಯಲ್ಲಾಪುರದಲ್ಲಿ ನಿಂತ ಕಾರಿನ ಮೇಲೆ ಬಿದ್ದ ಮರ ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯವಿಲ್ಲ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಮಳೆ ಆರ್ಭಟ ಕಡಿಮೆಯಾದರು ಮರ ಒಂದು ತುಂಡಾಗಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಘಟನೆ ಗುರುವಾರ ಬೆಳಗ್ಗೆ ಯಲ್ಲಾಪುರ ಶಿರಸಿ ರಸ್ತೆಯ ಸಂತೃಪ್ತಿ ಹೊಟೆಲ್ ಮುಂಬಾಗ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರು ಇರಲಿಲ್ಲ ಮರ ಬಿದ್ದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಕಾರು ಯಲ್ಲಾಪುರ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಗ್ಯಾರೇಜ್ ಸಿಬ್ಬಂದಿ ಒಬ್ಬರು ತಂದಿದ್ದು ಉಪಹಾರ ಮಾಡಲು …

Read More »

ಗ್ರಾಮ ಸಭೆಗೆ ಬಾರದ ಅಧಿಕಾರಿಗಳು ಬಹಿಷ್ಕರಿಸಿದ ಗ್ರಾಮಸ್ಥರು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತ ಗ್ರಾಮಸಭೆ ಜು,27 ರ ಗುರುವಾರ ಮದ್ಯಾಹ್ನ ನಿಗಧಿಯಾಗಿತ್ತು. ಆದರೆ ಸಭೆಗೆ ಬರಬೇಕಾದ ಪ್ರಮುಖ ಇಲಾಖೆಗಳ ಅಧಿಕಾರಿಗಳು ಬಾರದಿರುವುದು ಅಲ್ಲದೆ ಸಮಯಕ್ಕೆ ಸರಿಯಾಗಿ ಬರಬೇಕಾದ ನೋಡಲ್ ಅಧಿಕಾರಿಯೆ ತಡವಾಗಿ ಬಂದದ್ದರಿಂದ ಜನರು ತೀವ್ರ ಅಸಮಾಧಾನಗೊಂಡು ಸಭೆಯನ್ನು ಬಹಿಷ್ಕರಿಸಿದ್ದಾರೆ.ಜನರ ಅತ್ಯಾವಶ್ಯಕ ಮಾಹಿತಿ ತಿಳಿಯಬೇಕಿದ್ಷ ಮತ್ತು ತಿಳಿಸಬೇಕಿದ್ದ ಕೃಷಿ,ತೋಟಗಾರಿಕೆ,ಪಂಚಾಯತ್ ರಾಜ್ ಇಂಜನಿಯರಿಂಗ್, ಗ್ರಾಮೀಣ ಕುಡಿಯುವ ನೀರು …

Read More »

ಯಲ್ಲಾಪುರದಲ್ಲಿ ನಡೆದ ” ಅಡಿಕೆ ಎಲೆ ಚುಕ್ಕಿ ರೋಗದ ವಿಚಾರ ಸಂಕೀರಣ “

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ತತಿಧ್ವನಿ,ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಬೆಳೆ ಅಡಿಕೆಯಾಗಿದ್ದು ಅದರಲ್ಲು ಘಟ್ಟದ ಮೇಲಿನ ಪ್ರದೇಶಗಳ ಕೃಷಿಕರ ಜೀವಾಳ ಮಾರುಕಟ್ಟೆಯ ಆರ್ಥಿಕ ಲವಲವಿಕೆ ಅಡಗಿರುವುದೆ ಅಡಿಕೆ ಬೆಳೆಯಿಂದಾ‌ಅಂತಹ ಅಡಿಕೆ ಬೆಳೆಗೆ ಗಂಡಾಂತರವಾಗಬಲ್ಲ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಹಮ್ಮಿಕೊಂಡ ವಿಚಾರಸಂಕೀರಣ ಮತ್ತು ಸಂವಾದ ಅತ್ಯಂತ ಸ್ವಾಗತಾರ್ಹ ವಿಷಯವಾಗಿದೆ. ಹಾಗೆಂದು ಆತಂಕ ಪಡುವ ಪ್ರಶ್ನೆಯೆ ಇಲ್ಲ ಯಾವುದೆ ರೈತರು ದೃತಿಗೆಡದೆ ರೋಗದ ನಿಯಂತ್ರಣಕ್ಕೆ ಗಮನಹರಿಸಿ …

Read More »

ಶಾಸಕ ಹೆಬ್ಬಾರ್ ಅವರಿಂದ ಮಳೆಯಿಂದಾದ ಹಾನಿಗೆ ಸಂತ್ರಸ್ತರಿಗೆ ಪರಿಹಾರ ಧನದ ಆದೇಶ ಪತ್ರ ವಿತರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಕೆಲವು ಅವಘಡಗಳು ಸಂಭವಿಸಿದ್ದು ಸಂಬಂಧಪಟ್ಟ 7 ಮಂದಿ ಸಂತ್ರಸ್ತರಿಗೆ ಯಲ್ಲಾಪುರ ವಿಧನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ತ್ವರಿತಗತಿಯಲ್ಲಿ ಪರಿಹಾರ ಮೊತ್ತದ ಆದೇಶ ಪತ್ರ ವಿತರಿಸಿದರು.ವಾಸ್ತವ್ಯ ಮನೆ ಪೂರ್ಣ ಹಾನಿಗೊಳಗಾದ ತಾರೆಹಳ್ಳಿ ಗ್ರಾಮದ ಗೀತಾ ಸಿದ್ಧಿ ಅವರಿಗೆ 1,20,000 ರೂಪಾಯಿ, ಡೋಮಗೇರಿ ಗ್ರಾಮದ ಮಾಳು ಕೊಕರೆ, ಗೋಯಾ ಕೊಕರೆ, …

Read More »

ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಸಾಧಕವು ಹೌದು ಭಾದಕವು ಹೌದು – ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ವಿಶ್ವ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಏರುತ್ತಿದ್ದೇವೆ ಎಂಬುದು ಸಂತಸ ಪಡುವ ವಿಚಾರವಲ್ಲ. ಹಾಗೆಂದು ಸದ್ಯದ ಸ್ಥಿತಿಯಲ್ಲಿ ದುಃಖ ಪಡುವ ವಿಚಾರವೂ ಅಲ್ಲ. ಆದರೆ ಭವಿಷ್ಯದಲ್ಲಿ ದೇಶಕ್ಕೆ ಹೊರೆಯಾಗುವ ಎಲ್ಲ ¯ಕ್ಷಣಗಳೂ ಗೋಚರಿಸುತ್ತಿವೆ. ಚೀನಾವನ್ನು ಹಿಂದಿಕ್ಕಿ ಭಾರತ ಮುನ್ನುಗ್ಗುತ್ತಿದೆ. ಮಾನವ ಸಂಪನ್ಮೂಲ ಹೆಚ್ಚಿತೆಂಬ ಸಂತಸ ಪಡುವ ವಿಚಾರವೂ ಹೌದಾಗಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ದೇಶ ಪ್ರಗತಿಗೆ …

Read More »

ಯಲ್ಲಾಪುರದಲ್ಲಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಹೆಬ್ಬಾರ್

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕಿನ ಶಾಖೆ ಉದ್ಘಾಟನೆಗೊಂಡಿರುವುದು ಸಂತಸದ ಸಂಗತಿ. ಎಚ್.ಡಿ.ಎಫ್.ಸಿ ಬ್ಯಾಂಕು ಬಡವರಿಗೂ, ಸಣ್ಣ ಪುಟ್ಟ ಉದ್ಯೋಗ ಸ್ಥಾಪಿಸುವವರಿಗೂ ಸಾಲ ನೀಡಿ ಸಮಾಜದ ಎಲ್ಲ ವರ್ಗದವರ ಆರ್ಥಿಕ ಭದ್ರತೆಗೆ ನೇರವು ನೀಡಬೇಕಲ್ಲದೇ, ಸಿಬ್ಬಂದಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ಉತ್ತಮ ಸೇವೆ ಸಲ್ಲಿಸುವ ಮನೋಭಾವ ತಳೆಯಬೇಕು. ಬ್ಯಾಂಕುಗಳಿಗೆ ಉತ್ತಮ ಸಾಲಗಾರರ ಕೊರತೆ ಸಾಕಷ್ಟು ಪ್ರಮಾಣದಲ್ಲಿದ್ದರೂ, ಠೇವುದಾರರ ಕೊರತೆ ಉಂಟಾಗಿಲ್ಲ ಎಂದು ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ, ಶಾಸಕರೂ ಆದ ಶಿವರಾಮ ಹೆಬ್ಬಾರ …

Read More »

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಶಾಸಕ ಹೆಬ್ಬಾರ್ ಅವರಿಗೆ ಗೌರವಾರ್ಪಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜನರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ನಾನೇ ಉತ್ತರಿಸಬೇಕಾಗುತ್ತದೆ. ವರ್ಗಾವಣೆಯ ಕಾರ್ಯದಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಆಗ ಇಲಾಖೆಯೊಂದಿಗೆ ಗುತ್ತಿಗೆದಾರರು ಸಹಕರಿಸಿ, ವಿದ್ಯುತ್ ಸಂಪರ್ಕ ಸರಿಪಡಿಸುವ ಕಾರ್ಯ ಮಾಡುತ್ತಿರುವುದು ತೃಪ್ತಿಕರವಾಗಿದೆ. ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಹೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತ್ವರಿತವಾಗಿ ಕಾರ್ಯನಿರ್ವಹಿಸಿ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಅನೇಕ ಅಧಿಕಾರಿಗಳ ಕೊರತೆಯಿದ್ದು, ಸರ್ಕಾರದಿಂದ …

Read More »

ಯಲ್ಲಾಪುರ ತಾಲೂಕಿನ ಪಾಂಡಿತ್ಯದ ಗಣಿ‌ಎಂದೇ ಖ್ಯಾತರಾದ ದಿ, ಅನಂತ ವೈದ್ಯರಿಗೆ ಕಾ. ನಿ. ಪ. ಸಂಘದಿಂದ ನುಡಿನಮನ ಸಲ್ಲಿಕೆ‌..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಹಿರಿಯ ಪತ್ರಕರ್ತ, ಅರ್ಥಧಾರಿ, ಅಂಕಣಕಾರ ಅನಂತ ವೈದ್ಯ ಅವರಿಗೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನುಡಿನಮನ ಸಲ್ಲಿಸಲಾಯಿತು.ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ ಮಾತನಾಡಿ, ಅನಂತ ವೈದ್ಯರ ಮೇರು ವ್ಯಕ್ತಿತ್ವ ಆದರ್ಶಪ್ರಾಯವಾಗಿದೆ ಎಂದರು.ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ವೈದ್ಯ, ಪತ್ರಕರ್ತರಾಗಿ, ಸಾಹಿತಿಗಳಾಗಿ, ಉಪನ್ಯಾಸಕರಾಗಿ ವಿವಿಧ ನೆಲೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯ …

Read More »