Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಮುಂಗಾರು ತಡವಾಗಿದೆ ಕೃಷಿ ಚಟುವಟಿಕೆಗೆ ತೊಡಕಾಗಿದೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಪ್ರವೇಶ ತಡವಾಗಿದೆ ಇದರಿಂದ ರೈತರ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆಯದೆ ತೊಡಕಾಗಿದೆ. ಈ ವೇಳೆಗೆ ಹೊಲ ಗದ್ದೆಗಳೆಲ್ಲ ಹಸಿರು ಸಿಂಗಾರದೊಂದಿಗೆ ಮದುವಣಗಿತ್ತಿಯಂತೆ ನಳನಳಿಸುತ್ತಿರಬೇಕಿತ್ತು. ಆದರೆ ತಾಲೂಕಿನ ಹೊಲಗದ್ದೆಗಳು ಮಳೆರಾಯನ ಆಗಮನಕ್ಕಾಗಿ ಮೊರೆ ಇಟ್ಟಂತಿದೆ.ಸದ್ಯ ಬೀಳುತ್ತಿರುವ ಮಳೆಗೆ ಭೂಮಿ ಕೊಂಚ ತಂಪಾಗಿದೆ ಇಲ್ಲದಿದ್ದರೆ ಮಳೆ ಬೀಳುವುದಕ್ಕು ಮೊದಲು ಉಷ್ಣತೆಯಿಂದ ತೋಟಗಳೆಲ್ಲ ಒಣಗಿದಂತಾಗಿ ಸಿಂಗಾರದ ಅಡಿಕೆ ಮಿಳ್ಳೆಗಳೆಲ್ಲ …

Read More »

ಯಲ್ಲಾಪುರ ಅರಣ್ಯ ಇಲಾಖೆಯ ಹಸಿರು ಕರ್ನಾಟಕ ಅಡಿಯಲ್ಲಿ “ಸಸ್ಯಕ್ಷೇತ್ರ ದರ್ಶನ”

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಮಾದ್ಯಮಗಳಿಗಾಗಿ ” ಸಸ್ಯ ಕ್ಷೇತ್ರ ದರ್ಶನ ” ಎಂಬ ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಬೆಳೆದ ಸಸಿಗಳ ಸಂಪೂರ್ಣ ಮಾಹಿತಿ ನೀಡುವ ವಿನೂತನ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ‌ಹೆಗಡೆ ಮಾತನಾಡಿ ರಾಜ್ಯಾದ್ಯಂತ ಅರಣ್ಯ ಇಲಾಖೆ ಅಡಿಯಲ್ಲಿ 2023-24 ನೆ ಸಾಲಿನಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದ್ದು ಯಲ್ಲಾಪುರ ವಿಭಾಗದಿಂದ 9.95 ಲಕ್ಷ …

Read More »

ಅರಬೈಲ್ ಘಟ್ಟದಲ್ಲಿನ ಅಪಘಾತಗಳನ್ನು ನಿರ್ಲಕ್ಷಿಸದಿರಿ ಅಪಾಯ ಕಾದಿದೆ ಎಚ್ಚರ..!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ನಿಸರ್ಗಸೌಂದರ್ಯಕ್ಕೆ ಹೆಸರಾಗಿದೆ ಬೆಟ್ಟ ಗುಡ್ಡಗಳೆಲ್ಲ ಹಸಿರಾಗಿದೆ. ಜಲಪಾತಗಳ ಒಡಲು ಅರಬೈಲ್ ಘಟ್ಟ ಇಳಿದರೆ ಕರಾವಳಿ ಕಡಲು ಇಷ್ಟೆಲ್ಲಾ ವರ್ಣನೆಯ ನಡುವೆ ಅರಬೈಲ್ ಘಟ್ಟವೆಂಬ ಅಪಘಾತ ವಲಯವು ಸಹ ಇಲ್ಲೆ ಇದೆ ಅತ್ಯಂತ ನಿರ್ಲಕ್ಷಕ್ಕೊಳಗಾದ ಹೆದ್ದಾರಿಯು ಇಲ್ಲೆ ಇದೆ. ಸರ್ಕಾರ ಇದಕ್ಕೊಂದು ಗಂಭೀರ ಪರಿಹಾರ ಕಂಡುಕೊಳ್ಳಬೇಕಿದೆ ಇಲ್ಲವಾದಲ್ಲಿ ಮುಂದೊಂದು ದಿನ ದೇಶವೆ ಬೆಚ್ಚಿಬೀಳುವ …

Read More »

” ಯೋಗಿ ಟಾಪಸ್೯ ಪಾಯಿಂಟ್ ” ಎಂಬ ಯಲ್ಲಾಪುರದ ಇಂಟಲಿಜೆಂಟ್ ಯೂನಿವರ್ಸಿಟಿ…..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಬೆಲ್ ರಸ್ತೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದ ಎದುರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳ ಜ್ಞಾನ ದಾಹ ನೀಗಿಸುತ್ತಾ ಗ್ರಾಮೀಣ ಭಾಗದಲ್ಲು ಹೈಟೆಕ್ ಜ್ಞಾನ ಸಂಪಾದನೆ ಸಾದ್ಯ ಎಂಬುದನ್ನು ” ಯೋಗಿ ಟಾಪ್ಪಸ್೯ ಪಾಯಿಂಟ್ ” ಸಾದ್ಯವಾಗಿಸಿ ತೋರುತ್ತ ಬಂದಿದೆ. ಇದೀಗ ಸಾದನೆಯ ಹಾದಿಗೆ ಮತ್ತಷ್ಟು ಸಾದನೆಗಳು ಸೇರ್ಪಡೆಯಾಗಿ ಯಲ್ಲಾಪುರದ ಗೌರವ ಮತ್ತಷ್ಟು ಹೆಚ್ಚಿಸಿದೆ.ಸದ್ಯ ಕೋಚಿಂಗ್ …

Read More »

ಇಡಗುಂದಿ ಸೊಸೈಟಿ ಚುನಾವಣೆಗೆ ಶಾಸಕ ಹೆಬ್ಬಾರ್ ಮತ ಚಲಾವಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ :ತಾಲೂಕಿನ ಇಡಗುಂದಿ ಗ್ರೂಪ್ ಗ್ರಾಮಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಮತ ಚಲಾಯಿಸಿದರು. ವಿಶೇಷವೆಂದರೆ ತಮ್ಮ ರಾಜಕೀಯ ಜೀವನದ ಮೊದಲ ಮೆಟ್ಟಿಲು ಇಟ್ಟಿದ್ದು ಇಲ್ಲಿಂದಲೆ ಎ.ಪಿ.ಎಂ.ಸಿ ಪಯಣಕ್ಕೆ ನಾಂದಿಯಾದದ್ದು.ಸೊಸೈಟಿಯ ಆವರಣದಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Read More »

ಅಣಲಗಾರ ರಸ್ತೆ ಕಳಪೆ ಕಾಮಗಾರಿ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಗ್ರಾಮಸ್ಥರ ಮನವಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಅಣಲಗಾರ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಅದನ್ನು ಸರಿಯಾಗಿ ಮಾಡಿಸಿಕೊಡಬೇಕು.‌ ದುರಸ್ತಿ ಆಗದೇ ಬಾಕಿ ಉಳಿದ ರಸ್ತೆಯ ಡಾಂಬರೀಕರಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು. ಈಗಾಗಲೇ 90 ಲಕ್ಷ ರೂ ವೆಚ್ಚದಲ್ಲಿ 2.5 ಕಿಮೀ ರಸ್ತೆ ಕಾಮಗಾರಿ ಆಗಿದ್ದು, ಅದು ಕಳಪೆಯಾಗಿದೆ. ಈಗಾಗಲೇ ಅಧಿಕಾರಿಗಳಿಗೆ ದೂರಲಾಗಿದೆ. …

Read More »

ಅಭ್ಯರ್ಥಿಗಳು ಸೊಸೈಟಿ ಚುನಾವಣೆ ಎದುರಿಸಿದರೆ ಸಾಲದು ಮತ ಪೆಟ್ಟಿಗೆ ಕಾಯಲು ಸಿದ್ದರಿರಬೇಕು..ಪಾಳಿ ಪ್ರಕಾರ..!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರ ತಾಲೂಕಿನ ಆನಗೋಡು ಮತ್ತು ಎಲ್.ಎಸ್.ಎಂ.ಪಿ ಸೊಸೈಟಿ ಚುನಾವಣೆ ನಡೆದಿತ್ತು ಅದರಲ್ಲಿ ಕೆಲವರು ತಮ್ಮ ಮತಗಳನ್ನು ಮಾನ್ಯ ಮಾಡುವಂತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೆ ಚುನಾವಣೆ ನಡೆದಿದೆ ನ್ಯಾಯಾಲಯದ ಮೆಟ್ಟಿಲು ಹತ್ತಿದ ಸದಸ್ಯರಿಗು ಮತ ಚಲಾಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ಆ ಮತಗಳು ಸೇರಿದಂತೆ ಎಣಿಕೆ ನಡೆಯದೆ ಮತ ಪೆಟ್ಟಿಗೆಗಳನ್ನು …

Read More »

ಸರ್ಕಾರಿ ಕರ್ತವ್ಯದಲ್ಲಿ ಜನರಿಗೆ ಉತ್ತಮ ಸೇವೆ ಸಲ್ಲಿಸಿ ನಿಮ್ಮ ಬದುಕು ಸಾರ್ಥಕಗೊಳಿಸಿ- ಶಿವರಾಮ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಯಲ್ಲಾಪುರ ಪ್ರತಿಧ್ವನಿ,ಯಲ್ಲಾಪರ : ಮನೆಯಲ್ಲಿನ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಸಿಗಬೇಕಿದೆ ಆಗ ಜ್ಞಾನಾರ್ಜನೆಯ ಶಿಕ್ಷಣದೊಂದಿಗೆ ಸಂಸ್ಕಾರವಂತ ಪ್ರಜೆಗಳಾಗಿ ಹೊರಹೊಮ್ಮುವಂತಾಗಲಿದೆ. ಸರ್ಕಾರಿ ನೌಕರರು ತಮ್ಮ ವೃತ್ತಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವಂತಹ ಸೇವೆ ಜನತೆಗೆ ದೊರಕಿಸಿಕೊಡಬೇಕಿದೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ನನ್ನ ಪ್ರಯತ್ನದೊಂದಿಗೆ ಸಾಕಾರಗೊಳಿಸುತ್ತೇನೆ. ರಾಜಕೀಯ ವಿಪ್ಲವಗಳು ಪ್ರತಿ ಚುನಾವಣೆಯಲ್ಲಿ ಹೊಸ ಪಾಠವನ್ನು ಪರಿಚಯಿಸುತ್ತಲೆ ಸಾಗುತ್ತದೆ. ಅದನ್ನು ಸ್ಪೂರ್ತಿ ರೂಪದಲ್ಲಿ ಸ್ವೀಕರಿಸಬೇಕಿದೆ. ನಿಮ್ಮ ಗೌರವದ ಸನ್ಮಾನ …

Read More »

ಸೋಲನ್ನು ಸವಾಲಾಗಿ ಸ್ವೀಕರಿಸಿ ಮೇಲೆದ್ದು ಬರಲಿದೆ ಬಿಜೆಪಿ. ಭಾರತ ಸ್ವರ್ಣಪಥದತ್ತ ಸಾಗಿ 9 ವರ್ಷ.. ಸಿ.ಟಿ.ರವಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ಸಾವಿಗೆ ಹೆದರದ ಬಿಜೆಪಿ ಸೋಲಿಗೆ ಹೆದರುವ ಮಾತೆ ಇಲ್ಲ ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರುವುದಂತು ಶತಸಿದ್ದ. ದೇಶವನ್ನು ಸ್ವರ್ಣಪಥದತ್ತ ಕೊಂಡೊಯ್ಯಲು ಪ್ರಾರಂಭಿಸಿ  ಒಂಬತ್ತು ವರ್ಷ ಸಂದಿದೆ ಅದು ಪ್ರಧಾನಿ ಮೋದಿ  ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಂಬುದು ಕಾರ್ಯಕರ್ತರಾದ ನಮ್ಮೆಲ್ಲರ ಹೆಮ್ಮೆ . ದೇಶದ ಇಟ್ಟ ಕಡೆಯ ಮನುಷ್ಯನಿಗೆ ಸರ್ಕಾರಿ ಸೌಕರ್ಯಗಳು ತಲುಪಿಸಿ ನೀತಿ ಅಧಿಕಾರವನ್ನು …

Read More »

ಯಲ್ಲಾಪುರ ಬರಪೀಡಿತ ತಾಲೂಕೆಂದು ಘೋಷಣೆ ಮಾಡಿ- ಪಿ.ಜಿ ಭಟ್ಟ ಬರಗದ್ದೆ.

ಪ್ರತಿಧ್ವನಿ,ಯಲ್ಲಾಪುರ – ಇತಿಹಾಸದಲ್ಲಿ ಕಂಡು ಕೇಳರಿಯದ ಬಿಸಿ ದಗೆ ಮಳೆಗಾಲದ ಸಂದರ್ಭದಲ್ಲಿ ಕಾಣುತ್ತಿರುವುದು ಇದೇ ಮೊದಲು, ಇದರ ಪರಿಣಾಮ ನೇರವಾಗಿ ಬೆಳೆಗಳ ಮೇಲಾಗುತ್ತಿದ್ದು ಈಗಾಗಲೆ ಅಡಿಕೆ ಗಿಡಗಳು ಬಲಿಯಾಗುತ್ತಿವೆ. ಮಿಳ್ಳೆಗಳೆಲ್ಲ ಉದುರುತ್ತಿದ್ದು ಎಷ್ಟೇ ನೀರು ಕೊಟ್ಟರು ಪ್ರಯೋಜನವಾಗುತ್ತಿಲ್ಲ. ತೆಂಗಿನ ಮರದ ಸಿಂಗಾರವು ಬಿಸಿಲ ದಗೆಗೆ ಬಲಿಯಾಗುತ್ತಿದ್ದು ಸುರುಳಿ ಸುತ್ತುತ್ತಿದೆ. ಈ ಎಲ್ಲಾ ಕಾರಣಗಳಿಂದ ತಾಲೂಕಿನ ರೈತಾಪಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಅವರ ನೆರವಿಗೆ ದಾವಿಸಬೇಕಿದೆ ಅದಕ್ಕಾಗಿ ಯಲ್ಲಾಪುರ ತಾಲೂಕನ್ನು …

Read More »