
ಪ್ರತಿಧ್ವನಿ ಯಲ್ಲಾಪುರ : ಶಾಲೆಯ ಮೂಲಭೂತ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಸಮಿತಿಯ ಪಾತ್ರ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ ಬಿ.ಆರ್.ಸಿ ಪ್ರಶಾಂತ ಪಟಗಾರ ಹೇಳಿದರು.
ಅವರು ಮಂಗಳವಾರ. ಮಂಚಿಕೇರಿಯ ಕೋಸಗುಳಿ ಶಾಲೆಯಲ್ಲಿ ಮಳಲಗಾಂವ್ ಮತ್ತು ಮಂಚಿಕೇರಿ ಕ್ಲಸ್ಟರ್ ನ ಎಸ್.ಡಿ.ಎಂ.ಸಿ ಅಧ್ಯಕ್ಷ ಸದಸ್ಯ ಮತ್ತು ಮುಖ್ಯಾಧ್ಯಾಪಕರ ಒಂದು ದಿನದ ತರಬೇತಿ ಕಾರ್ಯಾಗಾರ ಉಧ್ಘಾಟಿಸಿ ತರಬೇತಿ ನೀಡಿದರು. ಶಾಲೆಯ ಪ್ರಗತಿಯಲ್ಲಿ ಈ ಸಮಿತಿಯ ಜವಾಬ್ದಾರಿ ಮತ್ತು ಕಾರ್ಯವ್ಯಾಪ್ತಿ ಯೋಜನೆ ಬಗ್ಗೆ ವಿವರವಾಗಿ ತಿಳಿಸಿ ಆಯಾ ಶಾಲಾ ವ್ಯಾಪ್ತಿಯಲ್ಲಿ ಬರುವ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನವಾಗಬೇಕು.ಸರಕಾರಿ ಶಾಲೆಯಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಸವಲತ್ತಿನ ಬಗ್ಗೆ ಪೋಷಕ ಪಾಲಕರಲ್ಲಿ ತಿಳಿಸಿ ಮಕ್ಕಳನ್ನು ದಾಖಲಾತಿ ಪಡೆದುಕೊಳ್ಳುವದಕ್ಕೆ ಮುಂದಾಗಬೇಕು ಎಂದರು.

ಹುತ್ಕಂಡ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹ ಸಾತೊಡ್ಡಿ ಮಾತನಾಡಿ ಶಿಕ್ಷಕರು,ಪಾಲಕರು ಸಮಿತಿ ನಡುವೆ ಉತ್ತಮ ಸಂಬಂಧವಿದ್ದಾಗ ಶಾಲೆಯು ಉತ್ತಮ ಹೆಸರನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರತಿ ಸದಸ್ಯನ ಶ್ರಮ ಶಾಲೆಯ ಏಳಿಗೆಗೆ ಕಾರಣವಾಗಬೇಕು.ಈ ತರಹ ತರಬೇತಿ ಸದಸ್ಯರ ಜವಾಭ್ದಾರಿಯನ್ನು ತಿಳಿಸಿಕೊಡುವಲ್ಲಿ ಸಹಕಾರಿಯಾಗಿದೆ ಎಂದರು.
ಶಿಕ್ಷಣ ಸಂಯೋಜಕ ಸುಧಾಕರ ನಾಯಕ ಮಾತನಾಡಿ ಸರಕಾರಿ ಶಾಲೆಯನ್ನು ಉಳಿಸುವ ಮತ್ತು ಬೆಳೆಸುವ ಹೊಣೆ ಸಮಿತಿಯ ಮೇಲಿದೆ.ಬಡ ಮಕ್ಕಳಿಗೆ ಶಿಕ್ಷಣ ವಂಚಿತವಾಗದೇ ಎಚ್ಚರವಹಿಸುವದು ಅಗತ್ಯವಿದೆ ಎಂದರು.
ಸಿ.ಆರ್.ಪಿ ದೀಪಾ ಶೇಟ್, ವಿಷ್ಣು ಭಟ್ಟ,ಕ್ಲಸ್ಟರ್ ನ ಹಿರಿಯ ಮುಖ್ಯಾಧ್ಯಾಪಕ ಸತೀಶ ಪಿ ಶೆಟ್ಟಿ ಹುತ್ಕಂಡ,ಸುಬ್ರಹ್ಮಣ್ಯ ಶಿರನಾಲಾ,ಕೋಸಗುಳಿ ಶಾಲಾ ಉಪಾಧ್ಯಕ್ಷೆ ಬೇಬಿ ವಾಲೇಕರ್ ಉಪಸ್ಥಿತರಿದ್ದರು.ಕೋಸಗುಳಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಮಾ ಮೊಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರಿ ಉಳಿಸಿಕೊಳ್ಳಬೇಕು.ಇಂಗ್ಲೀಷ್ ವ್ಯಾಮೋಹದಿಂದ ದೂರವಾಗಬೇಕು ಎಂದರು.ಮುಖ್ಯಾಧ್ಯಾಪಕ ಸಂತೋಷ ಉಳ್ಳಾಗಡ್ಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.









Prathidvani Yellapura