

ಯಲ್ಲಾಪುರ : ಚಾಲಕನ ಅತಿವೇಗದ ಚಾಲನೆಯಿಂದಾಗಿ ಲಾರಿಯೊಂದು ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಮುಂದೆ ಸಾಗಿ ಪಲ್ಟಿಯಾಗಿ ಅಪಘಾತವಾದ ಕಾರಣ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಶಿರಲೆ ಫಾಲ್ಸ್ ಬಸ್‌ನಿಲ್ದಾಣದ ಬಳಿ ನಡೆದಿದೆ.

ಶಂಭು ಧುಪಾಲ ಯಾದವ್ ಎಂಬ ಲಾರಿ ಚಾಲಕನು ತನ್ನ ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗವಾಗಿ ಚಲಾಯಿಸಿಕೊಂಡು ಬಂದ ಪರಿಣಾಮ ತಾಲೂಕಿನ ಶಿರಲೆ ಫಾಲ್ಸ್ ಬಸ್‌ನಿಲ್ದಾಣದ ಸಮೀಪದ ಏರು ರಸ್ತೆಯಲ್ಲಿ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಡೀಸೆಲ್ ಟ್ಯಾಂಕ್ ಹತ್ತಿರ ಡಿಕ್ಕಿ ಹೊಡೆಸಿ ಮುಂದೆ ಸಾಗಿ ಲಾರಿ ಪಲ್ಟಿಯಾಗಿದೆ. ಲಾರಿಯ ಕ್ಲೀನರ್ ರಾಜಕುಮಾರ ಸಿಂಗ್ ಎಂಬಾತನ ಕಾಲು, ಕಣ್ಣು ಹಾಗೂ ಸೊಂಟಕ್ಕೆ ಒಳನೋವಾಗಿದ್ದು ಆತ ಮೃತಪಟ್ಟಿರುತ್ತಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





Prathidvani Yellapura