
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಕಿರವತ್ತಿ ಹಾಗು ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೇಳಿಬರುವ ಸಿದ್ದಿ ಬುಡಕಟ್ಟು ಸಮುದಾಯದ ಪ್ರಾಮುಖ್ಯ ಹೆಸರೆಂದರೆ ಅದು ಬಾಬು ಸಿದ್ದಿಯದು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆಯ ಕಟ್ಟಾ ಅಭಿಮಾನಿಯಾಗಿದ್ದು ಕಾಂಗ್ರೆಸ್ ಪಕ್ಷದ ಇನ್ನುಳಿದ ಹಿರಿಯ ನೇತಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಕಿರವತ್ತಿ ಮತ್ತು ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಯಾರಿಗೆ ಕಷ್ಟ ಬಂದರು ಕೈಲಾದ ಸಹಾಯ ಮಾಡುತ್ತಲೆ ಅನೇಕರ ಮನಸ್ಸು ಗೆದ್ದಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟಿಸುತ್ತಾ ಯುವಕರ ಪಡೆ ಸಜ್ಜಾಗಿಸುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಪಕ್ಷದ ನಿಷ್ಟಾವಂತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಈಗಿನ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ತಾವು ಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದು ಆ ಸಂದರ್ಭದಲ್ಲಿ ಕಿರವತ್ತಿ ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಮತ್ತು ಯಲ್ಲಾಪುರ ತಾಲೂಕು ಕಾಂಗ್ರೆಸ್ ಪಾಳಯದಲ್ಲಿ ಜಂಡಾ ಕಟ್ಟುವವರೆ ಇಲ್ಲದೆ ಸಂಕಷ್ಟದಲಿದ್ದ ಸಂದರ್ಭದಲ್ಲಿ ಕೆಲವೆ ಹುಡುಗರನ್ನು ಕಟ್ಟಿಕೊಂಡು ಒಂದಷ್ಟು ತಮ್ಮ ಸಮುದಾಯದ ನಾಗರಿಕರನ್ನು ವಿಶ್ವಾಸಕ್ಕೆ ಪಡೆದು ಮನೆಮನೆಗೆ ತೆರಳಿ ಪಕ್ಷಕ್ಕೆ ಆಕ್ಸಿಜನ್ ತುಂಬುತ್ತಾ ಬಂದರು.

ಯಲ್ಲಾಪುರ-ಮುಂಡಗೋಡು ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಈಗಿನ ಶಿರಸಿ ಕ್ಷೇತ್ರದ ಶಾಸಕ ಆಗಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀಮಣ್ಣ ನಾಯ್ಕ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕ್ಷೇತ್ರದಲ್ಲಿ ಪ್ರಚಾರದ ಮುಂಚೂಣಿಯಲಿದ್ದ ಕೆಲವೇ ನಾಯಕರಲ್ಲಿ ಬಾಬು ಸಿದ್ದಿ ಕೂಡ ಒಬ್ಬರಾಗಿದ್ದು ಪಕ್ಷ ನಿಷ್ಠೆ ತೋರಿದ್ದರು.

ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯಲ್ಲಾಪುರ ತಾಲೂಕಿನ ಕಿರವತ್ತಿ ಭೇಟಿ ನೀಡಿದಾಗ ಕಿರವತ್ತಿ ಪುಟ್ಟ ಗ್ರಾಮದಲ್ಲೆ ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬಹಿರಂಗ ಚುನಾವಣ ಪ್ರಚಾರ ಸಭೆಯನ್ನು ಯಶಸ್ವಿಗೊಳಿಸಿದ್ದರು

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸುತ್ತಿದ್ದು ಗ್ಯಾರಂಟಿ ಯೋಜನೆಗಳಿಂದ ಸದ್ದು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಿದ್ದಿ ಬುಡಕಟ್ಟು ಸಮುದಾಯದಲ್ಲಿದ್ದು ಪಕ್ಷ ಸಂಘಟನೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಾಬು ಸಿದ್ದಿಯವರಿಗೆ ಎಂ.ಎಲ್.ಸಿ ಅಥವ ನಿಗಮ ಮಂಡಳಿ ಸ್ಥಾನ ಮಾನ ನೀಡಿ ಕಾಂಗ್ರೆಸ್ ಪಕ್ಷ ಕೆಳ,ಮದ್ಯಮವರ್ಗ,ಬಡವರ ಬೆನ್ನಿಗೆ ನಿಲ್ಲುತ್ತದೆ ಎಂಬುದನ್ನು ಜಿಲ್ಲೆಯ ಜನತೆಗೆ ತೋರಿಸಬೇಕಿದೆ ಎಂಬುದು ಹಲವು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಭಾರತೀಯ ಜನತಾ ಪಕ್ಚದಲ್ಲಿ ಸಿದ್ದಿ ಬುಡಕಟ್ಟು ಸಮುದಾಯದ ಶಾಂತರಾಂ ಸಿದ್ದಿ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡಿ ಬಿಜೆಪಿ ಬುಡಕಟ್ಟು ಸಮುದಾಯದಮೇಲಿರುವ ಬದ್ದತೆಯನ್ನು ತೋರಿಸಿದೆ.

ಇದೀಗ ಕಾಂಗ್ರೆಸ್ ಪಕ್ಷದ ಸರದಿ. ಕಾಂಗ್ರೆಸ್ ಪಕ್ಷ ಕೆಳ ಮದ್ಯಮ ವರ್ಗದ ನೆಚ್ಚಿನ ಪಕ್ಷ ಎಂಬುದನ್ನು ಹೇಳುತ್ತಲೆ ಬಂದಿದ್ದು ಬುಡಕಟ್ಟು ಸಿದ್ದಿ ಸಮುದಾಯದ ಮೇಲಿನ ಬದ್ದತೆ ತೋರಿಸಲು ಇದೊಂದು ಸುವರ್ಣಾವಕಾಶ ದೊರೆತಿದ್ದು ನಿಷ್ಟಾವಂತ ಕಾಂಗ್ರೆಸ್ ಕಟ್ಟಾಳು ಬಾಬು ಸಿದ್ದಿ ಗೆ ಸರ್ಕಾರದಲ್ಲಿ ಸ್ಥಾನ ಮಾನ ನೀಡಬೇಕಿದೆ ಎಂಬುದು ಅವರ ಆಪ್ತವಲಯದವರ ಆಗ್ರಹವಾಗಿದೆ.

ಬಾಬು ಸಿದ್ದಿ ಹೆಚ್ಚಾಗಿ ರಾಜ್ಯದ ಹಿರಿಯ ಮುತ್ಸದಿ ರಾಜಕಾರಣಿ ಹಳಿಯಾಳ ಕ್ಷೇತ್ರದ ಶಾಸಕ ರಾಜ್ಯದ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಪಾಳಯದಲ್ಲಿ ಗುರುತಿಸಿಕೊಂಡಿದ್ದು ಅವರ ಮಾತನ್ನು ಎಂದು ಮೀರದೆ ಕಟ್ಟಾ ಅಭಿಮಾನಿಯಾಗಿ ಮುಂದುವರೆಯುತ್ತಿದ್ದಾರೆ ಅಲ್ಲದೆ ದೇಶಪಾಂಡೆ ಅವರು ಸಹ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಾಬು ಸಿದ್ದಿ ಬಗ್ಗೆ ಹೆಚ್ಚಿನ ಒಲವು ತೋರುತ್ತಾರೆ.

ಬಾಬು ಸಿದ್ದಿಗೆ ದೇಶಪಾಂಡೆ ಎಂದರೆ ಎಷ್ಟು ಗೌರವ ಪ್ರೀತಿ ಎಂದರೆ ತನ್ನ ಕೈ ಮೇಲೆ ಅವರ ಭಾವಚಿತ್ರ ಮತ್ತು ಪಕ್ಷದ ಮೇಲಿನ ಪ್ರೀತಿಗೆ ಬೀಮಣ್ಣನಾಯ್ಕ್ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಈಗಿನ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಕಿರವತ್ತಿ ಭಾಗದ ಪ್ರಭಾವಿ ನಾಯಕ ವಿಜಯ್ ಮಿರಾಶಿ ಅವರೊಂದಿಗು ಉತ್ತಮ ಬಾಂಧವ್ಯ ಹೊಂದಿದ್ದು ರಾಜಕಾರಣ ಎಂದು ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿ ನಿಲ್ಲುತ್ತಾರೆ.

ಸದ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರೆಯುತ್ತಿರುವ ಬಾಬು ಸಿದ್ದಿಗೆ ಕಾಂಗ್ರೆಸ್ ಪಕ್ಷವು ಮುಂದಿನ ರಾಜಕೀಯ ಭವಿಷ್ಯದಲ್ಲಿ ಬುಡಕಟ್ಟು ಸಮುದಾಯದ ಪ್ರಮುಖರನ್ನಾಗಿ ಗುರುತಿಸಿ ಸ್ಥಾನಮಾನ ನೀಡಿದರೆ ಪಕ್ಷದಮೇಲೆ ಸಮುದಾಯದ ಒಲವು ಹೆಚ್ಚಾಗಲಿದೆ ಎಂಬುದು ಆಪ್ತ ಬಳಗದ ಅಭಿಪ್ರಾಯವಾಗಿದೆ.

ಪಕ್ಷ ತನ್ನ ಸಿದ್ದಾಂತವನ್ನು ಕೇವಲ ವೇದಿಕೆ ಪೋಸ್ಟರ್ ಗಳಲ್ಲಿ ತೋರಿಸುವುದಲ್ಲ ಪಕ್ಷಕ್ಕಾಗಿ ಕಷ್ಟ ಸಮಯದಲ್ಲು ದುಡಿದು ನಿಷ್ಟೆ ತೋರಿಸಿದ ಪ್ರಾಮಾಣಿಕ ಕಾರ್ಯಕರ್ತನಿಗೆ ಪಕ್ಷ ಸಲ್ಲಿಸಬೇಕಾದ ಮಾನ್ಯತೆ ಸಲ್ಲಿಸಬೇಕಿದೆ ಎಂಬುದು ಹಿರಿಯರ ಮಾತಾಗಿದೆ.
Prathidvani Yellapura