




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು ವಾತಾವರಣವೆಲ್ಲಾ ತಂಪಾಗಿದೆ. ಭೂಮಿಯು ತಂಪಾಗುತ್ತಲೇ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಜಾತಿಯ ಹೂಗಿಡಗಳು ಯಲ್ಲಾಪುರ ಮಾರುಕಟ್ಟೆಗೆ ಮಾರಾಟಕ್ಕೆ ಲಗ್ಗೆ ಇಟ್ಟಿವೆ.

ಪ್ರತಿವರ್ಷ ಯಲ್ಲಾಪುರದ ಅಂಚೆಕಚೇರಿಯ ಮುಂಭಾಗ ಪೂನಾ ನರ್ಸರಿಯಿಂದ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಹೂಗಿಡಗಳು ಮಾರಾಟಕ್ಕೆ ಬರುತ್ತವೆ. ಅದರಂತೆ ಈ ಬಾರಿಯೂ ವಿವಿಧ ಬಣ್ಣದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ದಾಸವಾಳ, ಚೆಂಡು ಹೂ, ಕಾಗದದ ಹೂ, ಗೊರಟೇ ಹೂ, ಕನಕಾಂಬರ, ಡೇರೆ ಇನ್ನಿತರ ಆಕರ್ಷಿಸುವ ಬಣ್ಣಬಣ್ಣದ ಹೂಗಿಡಗಳು ಮಾರಾಟಕ್ಕೆ ಬಂದಿವೆ.

ಜೊತೆಯಲ್ಲಿ ಉತ್ತಮ ಜಾತಿಯ ಮಾವಿನ ಸಸಿಗಳು ಅಲಂಕಾರಿಕ ಸಸ್ಯಗಳು ಜನರನ್ನು ಆಕರ್ಷಿಸುತ್ತಿವೆ.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರತಿವರ್ಷ ಯಲ್ಲಾಪುರಕ್ಕೆ ಬರುವುದು ನಮಗೆ ರೂಢಿಯಾಗಿದೆ. ಪ್ರತಿವರ್ಷವೂ ಸಾವಿರಕ್ಕೂ ಅಧಿಕ ಸಸಿಗಳನ್ನು ಮಾರಾಟ ಮಾಡುತ್ತೇವೆ. ದರದಲ್ಲಿ ಕಳೆದ ಬಾರಿಗಿಂತ ವತ್ಯಾಸವಿಲ್ಲ. 1೦೦ರೂ ಗೆ ಒಂದು ಗಿಡದಂತೆ ಮಾರುತ್ತಿದ್ದೇವೆ. ಉತ್ತಮ ಜಾತಿಯ ಮತ್ತು ಕಸಿ ಮಾಡಿದ ಗ್ರಾಹರಿಗೆ ನಂಬಿಕೆ ಇರುವಂತೆ ಗಿಡಗಳನ್ನು ನೀಡುತ್ತಿದ್ದೇವೆ. ಬೇಡಿಕೆಗೆ ಅನುಸಾರವಾಗಿ ಇನ್ನೂ ಹೆಚ್ಚಿನ ಗಿಡಗಳು ಬೇಕಾದಲ್ಲಿ ಮತ್ತೆ ನರ್ಸರಿಯಿಂದ ತರಿಸಿಕೊಳ್ಳುತ್ತೇವೆ. – ಮನೋಜ , ಹೂ ಗಿಡಗಳ ವ್ಯಾಪಾರಿ, ಪೂನಾ
Prathidvani Yellapura