



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ” ಕಳೆಯಿತು ಆ ಬೇಸಿಗೆ ಹೋಗೋಣ ಶಾಲೆಗೆ ” ಬೇಸಿಗೆ ರಜೆ ಕಳೆದು ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಶುಭ ಶುಕ್ರವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು ಶಾಲೆಗಳೆಲ್ಲ ಶುಭಾರಂಭವಾಗಿದೆ.

ಪಟ್ಟಣದ ಪ್ರತಿಷ್ಟಿತ ವಿದ್ಯಾಸಂಸ್ಥೆ ವೈಟಿಎಸ್ಎಸ್ ಕನ್ನಡ ಮಾಧ್ಯಮ,ಇಂಗ್ಲಿಷ್ ಮಾದ್ಯಮ, ಸರ್ಕಾರಿ ಮಾದರಿ ಶಾಲೆ, ವಿಶ್ವದರ್ಶನ, ಮದರ್ ಥೆರೆಸ, ಸರ್ಕಾರಿ ಉರ್ದುಶಾಲೆ, ಗ್ರಾಮೀಣ ಭಾಗದ ವಜ್ರಳ್ಳಿಯ ಸರ್ವೋದಯ, ಅಲ್ಕೇರಿ ಗೌಳಿವಾಡದ ಸರ್ಕಾರಿ ಶಾಲೆ, ಅರಬೈಲ್ ಸರ್ಕಾರಿ ಶಾಲೆಯು ಸಹ ಮಕ್ಕಳನ್ನು ವಿಬಿನ್ನ ಶೈಲಿಯಲ್ಲಿ ಸ್ವಾಗತಿಸಿದರು. ಹೀಗೆ ತಾಲೂಕಿನಾದ್ಯಂತ ವಿಶೇಷ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳವುದರ ಮೂಲಕ ಪ್ರಸಕ್ತ ವರ್ಷದ ಶೈಕ್ಷಣಿಕ ಪಯಣ ಆರಂಭಗೊಂಡಿತು.

ಮಾದರಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್. ಹೆಗಡೆ, ದೈಹಿಕ ಪರಿವೀಕ್ಷಕ ಪ್ರಕಾಶ್ ತಾರಿಕೊಪ್ಪ, ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು ಮಕ್ಕಳನ್ನು ಹೂ ಮಳೆ ಸುರಿಸಿ ಸ್ವಾಗತಿಸಿದರು. ವೈಟಿಎಸ್ಎಸ್ ಸಂಸ್ಥೆಯಲ್ಲಿ ಎಲ್ಲಾವಿಭಾಗದಲ್ಲಿಯು ಪ್ರಮುಖರು ಮಕ್ಕಳನ್ನು ರಂಗೋಲಿ ತಳಿರು ತೋರಣಗಳಿಂದ ಸ್ವಾಗತಿಸಿದರು. ಪಟ್ಟಣದ ಸಂಕಲ್ಪ ಸರ್ಕಲ್ ನಲ್ಲಿರುವ ಉರ್ದು ಶಾಲೆಯಲ್ಲಿ ವಿದ್ಯಾಥಿಗಳನ್ನು ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಮಕ್ಕಳ ಕೈ ಕುಲುಕುತ್ತ ಸ್ವಾಗತಿಸಿದರು. ಮದರ್ ಥೆರೆಸ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳನ್ನು ಫಾದರ್ ರೊಯ್ ಸ್ಟನ್ ಗೊನ್ಸಾಲ್ವಿಸ್ ನೇತೃತ್ವದಲ್ಲಿ ಮಕ್ಕಳನ್ನು ಸ್ವಾಗತಿಸಿದರು.
ಒಟ್ಟಿನಲ್ಲಿ ಬೆಸಿಗೆ ರಜೆ ಕಳೆದು ಬಿಕೋ ಎನ್ನುತ್ತಿದ್ದ ಪಟ್ಟಣದಲ್ಲಿ ಮಕ್ಕಳ ಕಲರವ ಪ್ರಾರಂಭವಾಗಿದ್ದು ಶಾಲೆಗಳ ಆರಂಭ ಕಳೆ ತುಂಬಿದಂತಿದೆ.
Prathidvani Yellapura