


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : 76 ನೇ ವರ್ಷದ ಸ್ವಾತಂತ್ರೊತ್ಸವದ ನಿಮಿತ್ತ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿ ವತಿಯಿಂದ ಬುದ್ಧಿಮಾಂದ್ಯರು ಹಾಗೂ ಹಿರಿಯರಿಗೆ ಸಿಹಿ ಹಾಗೂ ಚಾದರ ನೀಡುವ ಕಾರ್ಯಕ್ರಮ ಸಾರ್ಥಕವಾಗಿದೆ. ಎಲ್ಲೆಲ್ಲಿಯೋ ಯಾವುದಕ್ಕೋ ವೃಥಾ ಖರ್ಚು ಮಾಡುವ ಬದಲು ಇಂತಹ ಸದ್ದುದ್ದೇಶದ ಕಾರ್ಯ ಮಾಡಿದಾಗ ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮಾನಸಿಕ ತೃಪ್ತಿ ಹೊಂದುವುದಲ್ಲದೇ ತಮ್ಮ ಸಂಸ್ಥೆಯ ಬದ್ಧತೆಯನ್ನು ತೋರಿದಂತಾಗುತ್ತದೆ ಎಂದು ಪಿಎಸ್‌ಐ ನಿರಂಜನ ಹೆಗಡೆ ಹೇಳಿದರು.

ಅವರು ಪಟ್ಟಣದ ನಾಯ್ಕನಕೆರೆಯಲ್ಲಿರುವ ಶ್ರೀರಾಘವೇಂದ್ರ ಬುದ್ಧಿಮಾಂದ್ಯರ ಮತ್ತು ವೃದ್ಧರ ಆಶ್ರಮದಲ್ಲಿ ಸ್ವಾತಂತ್ರೊತ್ಸವದ ನಿಮಿತ್ತ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿ ಹಮ್ಮಿಕೊಂಡಿದ್ದ 50 ಕ್ಕೂ ಹೆಚ್ಚು ಜನರಿಗೆ ಚಾದರ್ ಹಾಗೂ ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕೇವಲ ಆರ್ಥಿಕ ವ್ಯವಹಾರವೊಂದನ್ನೇ ಗುರಿಯಾಗಿರಿಸಿಕೊಳ್ಳದೇ ಸಮಾಜದೊಂದಿಗೆ ಬೆರೆತು ಕಷ್ಟಸುಖಗಳಿಗೆ ಸ್ಪಂದಿಸುವ ಸಂಸ್ಥೆ ಸೆಂಟ್ ಮಿಲಾಗ್ರಿಸ್ ಆಗಿದೆ. ಕೋವಿಡ್ ಸಂದರ್ಭದಲ್ಲಿ, ಪ್ರವಾಹ ಪರಿಸ್ಥಿತಿಯಲ್ಲಿ ಸೇವಾ ಮನೋಭಾವದೊಂದಿಗೆ ಜನರೊಂದಿಗೆ ಬೆರೆತು ಶ್ಲಾಘನೆಗೆ ಅರ್ಹವಾದ ಸಂಸ್ಥೆ ಎನಿಸಿಕೊಂಡಿದೆ. ಇಂತಹ ಸಾರ್ಥಕ ಕಾರ್ಯ ಸದಾ ಮುಂದುವರೆಯಲಿ ಎಂದು ಪತ್ರಕರ್ತ ಕೇಬಲ್ ನಾಗೇಶ್ ಹೇಳಿದರು.

ಸ್ವಾತಂತ್ರೋತ್ಸವ ಸಂಭ್ರಮ ಇಂತಹ ಕಾರ್ಯಗಳೊಂದಿಗೆ ಮುಂದುವರೆಯಬೇಕಿದೆ , ಸಂಸ್ಥೆಯ ಉತ್ತಮ ಕಾರ್ಯವನ್ನು ಪ್ರಶಂಶಿಸಿ ವಕೀಲ ಪ್ರಕಾಶ ಭಟ್ಟ, ಸೆಂಟ್ ಮಿಲಾಗ್ರಿಸ್ ಸಂಸ್ಥೆಯ ಯಲ್ಲಾಪುರ ಶಾಖೆಯ ಚೇರ್‌ಮನ್ ದಾಸಿಂತ್ ಫರ್ನಾಂಡಿಸ್ , ಬುದ್ಧಿಮಾಂದ್ಯ ಶಾಲೆಯ ಪ್ರಾಂಶುಪಾಲ ಚಂದ್ರು ಅಭಿಪ್ರಾಯಪಟ್ಟರು. ಯಲ್ಲಾಪುರ ಶಾಖೆಯ ವಸಂತ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು.

ಸೆಂಟ್ ಮಿಲಾಗ್ರಿಸ್ ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾ ಪೂಜಾರಿ ಸ್ವಾಗತಿಸಿದರು. ಸ್ಪೂರ್ತಿ ಆಚಾರಿ ನಿರೂಪಿಸಿದರು. ವಿಜಯ್ ಕುಮಟೇಕರ್ ವಂದಿಸಿದರು. ಇನ್ನಿತರ ಸಿಬ್ಬಂದಿಗಳು, ಬುದ್ಧಿಮಾಂದ್ಯ ಆಶ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು.






Prathidvani Yellapura