
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ತತಿಧ್ವನಿ,ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಬೆಳೆ ಅಡಿಕೆಯಾಗಿದ್ದು ಅದರಲ್ಲು ಘಟ್ಟದ ಮೇಲಿನ ಪ್ರದೇಶಗಳ ಕೃಷಿಕರ ಜೀವಾಳ ಮಾರುಕಟ್ಟೆಯ ಆರ್ಥಿಕ ಲವಲವಿಕೆ ಅಡಗಿರುವುದೆ ಅಡಿಕೆ ಬೆಳೆಯಿಂದಾಅಂತಹ ಅಡಿಕೆ ಬೆಳೆಗೆ ಗಂಡಾಂತರವಾಗಬಲ್ಲ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಹಮ್ಮಿಕೊಂಡ ವಿಚಾರಸಂಕೀರಣ ಮತ್ತು ಸಂವಾದ ಅತ್ಯಂತ ಸ್ವಾಗತಾರ್ಹ ವಿಷಯವಾಗಿದೆ. ಹಾಗೆಂದು ಆತಂಕ ಪಡುವ ಪ್ರಶ್ನೆಯೆ ಇಲ್ಲ ಯಾವುದೆ ರೈತರು ದೃತಿಗೆಡದೆ ರೋಗದ ನಿಯಂತ್ರಣಕ್ಕೆ ಗಮನಹರಿಸಿ ತಜ್ಞರ ಸಲಹೆ, ಹಿರಿಯರ ಮಾರ್ಗದರ್ಶನ ಮತ್ತು ಭಗವಂತನಲ್ಲಿ ಮೊರೆ ಇಡುವುದರೊಂದಿಗೆ ಬರುವ ಗಂಡಾಂತರವನ್ನು ಹತೋಟಿಗೆ ತರಬಹುದಾಗಿದೆ ಎಂದು ಪ್ರಗತಿಪರ ರೈತ ಟಿ.ಎಮ್.ಎಸ್ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿ ಕುಂಬ್ರಿ ಹೇಳಿದರು.

ಅವರು ಪಟ್ಟಣದ ಅಡಿಕದ ಭವನದಲ್ಲಿ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತೋಟಗಾರಿಕ ಇಲಾಖೆ ಯಲ್ಲಾಪುರ ತಾಲೂಕ ಮತ್ತು ಕೇಂದ್ರೀಯ ತೋಟಗಾರಿಕ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ” ಎಲೆಚುಕ್ಕಿ ರೋಗದ” ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಯ ಬೀಳುವ ಅಗತ್ಯವಿಲ್ಲದಿದ್ದರು ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ ಮತ್ತು ನುರಿತ ತಜ್ಞರಿಂದ ಮಾಹಿತಿ ಪಡೆದು ಬಂದಿರುವ ರೈತರು ತಮ್ಮ ಪಕ್ಕದ ತೋಟದ ಮಾಲಿಕರಿಗೆ ತಿಳಿಸಿ ಹೇಳಬೇಕಿದೆ. ಪ್ರಮುಖವಾಗಿ ಇಂತಹ ಗಂಭೀರ ಸಮಸ್ಯೆಗಳು ಎಲ್ಲಿ ಉದ್ಬವಿಸಿದೆಯೊ ಅಲ್ಲಿಗೆ ಇಲಾಖೆ ಕಡೆಯಿಂದ ರೈತರಿಗೆ ಪ್ರವಾಸ ಏರ್ಪಡಿಸಿ ತೋರಿಸಬೇಕಿದೆ ಎಂದು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರೈತ ಹೋರಾಟಗಾರ ಪಿ.ಜಿ.ಭಟ್ ವಡ್ಡರಮನೆ ಹೇಳಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಾಗರಾಜ್ ನಾಯ್ಕ್ ಉಪಸ್ಥಿತರಿದ್ದು ಶುಭಕೋರಿದರು.

ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಕೇಂದ್ರದ ಹಿರಿಯ ವಿಜ್ಞಾನಿ ಡಾ, ವಿನಾಯಕ ಹೆಗಡೆ ಮತ್ತು ಅಗ್ರಿಕಲ್ಚರ್ ಡೆವಲಪ್ಮೆಂಟ್ ಸೊಸೈಟಿ ಶಿರಸಿಯ ವಿಷಯ ತಜ್ಞರು ವಿಜಯೇಂದ್ರ ಎಮ್ ಹೆಗಡೆ ಎಲೆಚುಕ್ಕಿ ರೋಗದ ಕುರಿತ ವಿಶ್ಲೇಷಣೆ ಸಂವಾದ ನಡೆಸಿದರು.

ತಾಲೂಕಿನ ವಿವಿಧ ಪಂಚಾಯತಗಳ ಪ್ರಮುಖರು ಜನಪ್ರತಿನಿಧಿಗಳು ತೋಟಿಗರು ಉಪಸ್ಥಿತರಿದ್ದು ಪ್ರಯೋಜನ ಪಡೆದರು.
ತೋಟಗಾರಿಕ ಇಲಾಖೆ ಉಪನಿರ್ದೇಶಕ ಡಾ,ಬಿ.ಪಿ ಸತೀಶ್ ಪ್ರಾಸ್ತಾವಿಕ ನುಡಿದರು.ಕೃಷಿ ಇಲಾಖೆಯ ಎಮ್.ಜಿ.ಭಟ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.


Prathidvani Yellapura