
ಗ್ರಾಮದೇವಿ ಅನುಗ್ರಹದಲ್ಲಿ….. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…..
ಪ್ರತಿಧ್ವನಿ,ಯಲ್ಲಾಪುರ : ರಾಜ್ಯಾದ್ಯಂತ ಸಂಚರಿಸುತ್ತಿರುವ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆ ಯಲ್ಲಾಪುರಕ್ಕಾಗಮಿಸಿದ್ದು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಸಚಿವ ಹೆಬ್ಬಾರ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.


ದೇವಿದೇವಸ್ಥಾನದ ಮೂಲಕ ಸಾಗಿದ ರಥಯಾತ್ರೆಯಲ್ಲಿ ಸಾವಿರಕ್ಕು ಅಧಿಕ ಕಾರ್ಯಕರ್ತರು ನಾಗರಿಕರು ಹೆಬ್ಬಾರ್ ಅಭಿಮಾನಿಗಳು ಹೆಜ್ಜೆ ಹಾಕಿದರು.

ಮೆರವಣಿಗೆಯಲ್ಲಿ ಸಿದ್ದಿ ಸಮುದಾಯದ ಪಾರಂಪರಿಕ ನೃತ್ಯ, ಹಾಗು ಡೊಳ್ಳು ಕುಣಿತದ ಮೆರುಗು ಮೆರವಣಿಗೆಯ ಅಂದ ಹೆಚ್ಚಿಸಿತ್ತು. ಹೆಬ್ಬಾರ್ ಅವರಿಗೆ ಜಯವಾಗಲಿ ಎಂಬ ಜಯಘೋಷದೊಂದಿಗೆ ದೇವಿದೇವಸ್ಥಾನದ ರಸ್ತೆ ಮೂಲಕ ” ವಿಜಯ ಸಂಕಲ್ಪ ಹೊತ್ತ ರಥದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಮೆರವಣಿಗೆಯ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಕರೆತರಲಾಯಿತು.


ಮೆರವಣಿಗೆ ಸಾಗಿ ಅಂಬೇಡ್ಕರ್ ವೃತ್ತ ತಲುಪಿ ಕಾರ್ಯಕರ್ತರನ್ನುದ್ದೇಶಿಸಿ ಕೆಲವು ಪ್ರಮುಖರು ಸಭೆಯಲ್ಲಿ ಮಾತನಾಡಿದರು.

ಮೆರವಣಿಗೆ ಅಂಬೇಡ್ಕರ್ ವೃತ್ತ ತಲುಪುತ್ತಿದ್ದಂತೆ ಸೇರಿಕೊಂಡ ಬಿಜೆಪಿ ಹಿರಿಯ ನಾಯಕ ಬೃಹತ್ ಕೈಗಾರಿಕೆ ಮಂತ್ರಿ ಮುರುಗೇಶ್ ನಿರಾಣಿ ಮತನಾಡಿ ರಾಜ್ಯ ವಿಧಾನಸಭೆ ಯಲ್ಲಿನ ಎಲ್ಲಾ ಶಾಸಕರು ಮತ್ತು ಸಚಿವರಲ್ಲಿ ಕ್ಷೇತ್ರದ ಜನರ ಬಗ್ಗೆ ಹೆಚ್ಚಿನ ಕಾಳಜಿ, ಅಭಿವೃದ್ಧಿ ಕುರಿತು ತುಡಿತ, ರೈತಾಪಿ ವರ್ಗದ ಏಳಿಗೆಯ ಮಿಡಿತ ಹೊಂದಿರುವ ಏಕೈಕ ನಾಯಕ ಸಚಿವ ಹೆಬ್ಬಾರ್ ಅವರು ಎಂದು ಹೆಬ್ಬಾರ್ ಗುಣಗಾನ ಮಾಡಿದರು.

ಸಂಕಷ್ಟ ಕಾಲದಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕೇಂದ್ರದಲ್ಲಿ ಮೋದಿಯವರ ನೇತೃತ್ವ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರ ಮುಂದಾಳತ್ವ ಉತ್ತಮ ಆಡಳಿತಕ್ಕೆ ದಾರಿಯಾಗಿದೆ. ಚುನವಣೆ ಎಂಬುದು ನಮ್ಮ ಅಭಿವೃದ್ಧಿ ಕಾರ್ಯಗಳ ಮಾನದಂಡವಾಗಿದೆ ನಮ್ಮ ಪಕ್ಷದ ದೇವದುರ್ಲಭ ಕಾರ್ಯಕರ್ತ ಸೈನಿಕರು ಸನ್ನದ್ದರಾಗಿದ್ದು ಬಿಜೆಪಿ ಗೆಲುವಿಗೆ ಕಂಕಣ ತೊಟ್ಟಿದ್ದಾರೆ ಎಂದು ಸಚಿವ ಹೆಬ್ಬಾರ್ ಹೇಳಿದರು.

ರಥಯಾತ್ರೆ ಮೆರವಣಿಗೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು


ರಥ ಯಾತ್ರೆಯಲ್ಲಿ ಹಿರಿಯ ನಾಯಕ ಪ್ರಮೋದ್ ಹೆಗಡೆ, ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್ ಸೇರಿದಂತೆ ರಾಜ್ಯ ನಾಯಕರು,ಜಿಲ್ಲಾ ಪ್ರಮುಖರು ಮಾತನಾಡಿದರು.
ಭಾರತೀಯ ಜನತಾ ಪಕ್ಷದ ಯಲ್ಲಾಪುರ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಯುವ ನಾಯಕ ವಿವೇಕ್ ಹೆಬ್ಬಾರ್, ಪಕ್ಷದ ಎಲ್ಲಾ ಮೊರ್ಚಾ, ಶಕ್ತಿಕೇಂದ್ರ, ಬೂತ್ ಗಳ, ಮಹಿಳಾ ಘಟಕದ ಪ್ರಮುಖರು. ಜನಪ್ರತಿನಿಧಿಗಳು, ಉಪಸ್ಥತಿತರಿದ್ದರು.
ನಂತರ ವಿಜಯ ಸಂಕಲ್ಪ ರಥವು ಬೆಲ್ ರಸ್ತೆಯ ಮೂಲಕ ಸಾಗಿ ಅಂಕೋಲಾ ಕಡೆಗೆ ತೆರಳಿತು

ಜಾಹಿರಾತು ನೀಡಿ ಯಲ್ಲಾಪುರ ನೆಲದ ” ಪ್ರತಿಧ್ವನಿ ” ಪ್ರೋತ್ಸಾಹಿಸಿ


Prathidvani Yellapura