ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಲಯನ್ಸ್ ಕ್ಲಬ್ ಯಲ್ಲಾಪುರ ಸಂಸ್ಥೆಯ ವತಿಯಿಂದ ಸಾಮಾಜಿಕ ಸೇವಾ ಕಾರ್ಯದ ನಿಮಿತ್ತ ಪಟ್ಟಣದ ನಾಯ್ಕನ ಕೆರೆಯ ಬಳಿಯ ಶ್ರೀ ಮಲ್ಲಿಕಾರ್ಜುನ ವೃದ್ದಾಶ್ರಮದ 25 ಅಂಗವಿಕಲ ಮಕ್ಕಳಿಗೆ ಹಾಗೂ 20 ವೃದ್ದರಿಗೆ ಬೆಡ್ ಶೀಟ್ ಹಾಗೂ 50 ಜನರಿಗೆ ಮಧ್ಯಾಹ್ನದ ಊಟವನ್ನ ನೀಡಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಯಲ್ಲಾಪುರ ಸಂಸ್ಥೆಯ ಅಧ್ಯಕ್ಷ ಲಯನ್ ಎಸ್ ಎನ್ ನಾಯ್ಕ, ಕಾರ್ಯದರ್ಶಿ ಲಯನ್ ಮಂಜುನಾಥ ನಾಯ್ಕ, ಖಜಾಂಚಿ ಲಯನ್ ಸುರೇಶ ಬೋರ್ಕರ್, ಲಯನ್ ಎಸ್ ಎಲ್ ಭಟ್, ಲಯನ್ ಶಾಂತಾರಾಮ ಹೆಗಡೆ, ಲಯನ್ ನಂದನ ಬಾಳಗಿ, ಲಯನ್ ಶೇ಼ಷಗಿರಿ ಪ್ರಭು, ಲಯನ್ ರಮಾಕಾಂತ ನಾಯ್ಕ , ವೃದ್ದಾಶ್ರಮದ ಮೇಲ್ವಿಚಾರಕ ಚಂದ್ರಪ್ಪ ಹಾಗೂ ಇತರ ಸಿಬ್ಬಂದಿಗಳು ಇದ್ದರು.
Prathidvani Yellapura