
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ-ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ಹತ್ತು ಮಂದಿ ನಾಮಪತ್ರ ಸಲ್ಲಿಸಿದ್ದು ಹತ್ತು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ ವಾಗಿದೆ
ಇದರೊಂದಿಗೆ 10 ಅಭ್ಯರ್ಥಿಗಳು ಶಾಸಕ ಸ್ಥಾನದ ಆಯ್ಕೆಗಾಗಿ ಕಣಕ್ಕಿಳಿಯಲು ಸಿದ್ದರಾದಂತಾಗಿದೆ.

ಬಿಜೆಪಿಯಿಂದ ಶಿವರಾಮ ಹೆಬ್ಬಾರ್, ಕಾಂಗ್ರೆಸ್ಸಿನಿಂದ ವಿ ಎಸ್ ಪಾಟೀಲ್, ಜೆಡಿಎಸ್ನಿಂದ ನಾಗೇಶ ನಾಯ್ಕ ಕಗಾಲ, ಕೆಆರ್ಎಸ್ನಿಂದ ಮಂಜುನಾಥ ಶಿರಟ್ಟಿ, ಕಲ್ಯಾಣ್ಯ ರಾಜ್ಯ ಪ್ರಗತಿ ಪಕ್ಷದಿಂದ ಸಂತೋಷ ರಾಯ್ಕರ್, ಆಮ್ ಆದ್ಮಿಯಿಂದ ಮಂಜುನಾಥ ಕೂಳಂಕರ್ ಹಾಗೂ ಪಕ್ಷೇತರರಾಗಿ ಲಕ್ಷ್ಮಣ ಬನ್ಸೋಡೆ, ಆನಂದ ಭಟ್ಟ, ಚಿದಾನಂದ ಹರಿಜನ, ಶಟ್ಟಪ್ಪ ಬೋವಿವಡ್ಡರ್ ಸ್ಪರ್ಧೆಯಲ್ಲಿದ್ದಾರೆ.

ನಾಮಪತ್ರ ಹಿಂಪಡೆಯಲು ಏ,24 ಕೊನೆಯ ದಿನವಾಗಿದ್ದು ಯಾರು ಚುನಾವಣ ಕಣದಿಂದ ಹಿಂದೆ ಸರಿಯುತ್ತಾರೆಂದು ಕಾದು ನೋಡಬೇಕಿದೆ.



Prathidvani Yellapura