Breaking News

ಸಾಯಿ ಭಕ್ತರಿಂದ ಕೆರೆ ಹೂಳೆತ್ತುವ  ಕಾರ್ಯ-ಸೇವೆಯಲ್ಲಿ ದೇವರ ಕಾಣುವ ಸಾರ್ಥಕ ಕಾರ್ಯ 

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪುಟ್ಟಪರ್ತಿ ಸಾಯಿಬಾಬಾರವರ ಅನುಗ್ರಹ ಮತ್ತು ಪ್ರೇರಣೆಯಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯಲ್ಲಾಪುರ ತಾಲೂಕಿನ ಸಾಯಿ ಭಕ್ತರ ತಂಡವೊಂದು ತಾಲೂಕಿನ ಮದನೂರು ಗ್ರಾಮದ ತಾವರೆಕಟ್ಟಾ ಮತ್ತು ಹುಣಶೆಟ್ಟಿಕೊಪ್ಪದ ಕೆರೆಗಳ ಹೂಳೆತ್ತುವ ಮೂಲಕ ಹತ್ತಾರು ಎಕರೆ ಪ್ರದೇಶಕ್ಕೆ ನೀರೊದಗಿಸಿ ಜಾನುವಾರುಗಳಿಗೆ ದಣಿವಾರಿಸುವ ಸಾರ್ಥಕ ಕಾರ್ಯ ಕೈಗೊಂಡಿದ್ದಾರೆ.


ಶ್ರೀ ಸತ್ಯಸಾಯಿ ಸೇವಾ ಸಮಿತಿಹಾಗೂ ಭಜನಾ ಮಂಡಳಿಯ ವತಿಯಿಂದ ಯಲ್ಲಾಪುರ ಮಾತ್ರವಲ್ಲದೇ ಹಳಿಯಾಳ ತಾಲೂಕಿನ ಕುಂಬಾರಕೊಪ್ಪ, ಬಸವಳ್ಳಿ, ಮಲವಡಿ, ಚಿಬ್ಬಲಗೇರಿ, ತಿಮ್ಮಾಪುರ, ಗರಡೊಳ್ಳಿ ಕೆರೆಗಳಲ್ಲೂ ಸಹ ಹೂಳೆತ್ತುವ ಕಾರ್ಯವಾಗಿದೆ. ಪ್ರತಿಕೆರೆಯ ಸುತ್ತಮುತ್ತ ಹತ್ತಾರು ಎಕರೆ ಪ್ರದೇಶ ಭೂಮಿಗೆ ನೀರೊದಗಿಸುವುದಲ್ಲದೇ ಜಾನುವಾರುಗಳ ದಣಿವಾರಿಸುವ ಕಾರ್ಯವಾಗುತ್ತಿದೆ.

ಕೇವಲ ಸರ್ಕಾರವೇ ಮಾಡಬೇಕೆಂಬ ಮಾತಿಗೆ ತದ್ವಿರುದ್ಧವಾಗಿ ಪುಟ್ಟಪರ್ತಿ ಸಾಯಿಬಾಬಾರಂತೆ ಸಮಾಜಸೇವೆಯ ಮೂಲಕ ಸಾಯಿ ಅನುಗ್ರಹಕ್ಕೆ ಪಾತ್ರರಾಗುವ ಕಾರ್ಯವನ್ನು ಮಾಡುವುದರಲ್ಲಿ ಅತ್ಯಂತ ಆತ್ಮತೃಪ್ತಿ ಇದೆ ಎನ್ನುತ್ತಾರೆ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಪ್ರಮುಖ ಬೈರು ಜೋರೆ.
ಸಾಯಿಭಕ್ತರ ಈ ಸಮಾಜುಮುಖಿ ಕಾರ್ಯಕ್ಕೆ ಗ್ರಾಮಸ್ಥರು, ಸಾರ್ವಜನಿಕರು ಪ್ರಶಂಶಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *