
ಪ್ರತಿಧ್ವನಿ,ಯಲ್ಲಾಪುರ : ಮನೆಯಲ್ಲಿ ವಿದ್ಯುತ್ ಹೋದಾಗ ಚಿಮಣಿ ದೀಪ ಹಚ್ಚಲು ಹೋದ 4 ವರ್ಷ 6ತಿಂಗಳು ಪ್ರಾಯದ ಬಾಲಕನೋರ್ವ ದೇಹಕ್ಕೆ ಬೆಂಕಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಬಳಗಾರ ಗ್ರಾಮದ ಹಂಸನಗದ್ದೆಯಲ್ಲಿ ನಡೆದಿದೆ.
ರವಿ ಗಣಪತಿ ಗೌಡ ಎಂಬುವರ ಮಗನಾದ ಯತೀನ ರವಿ ಗೌಡ ಎಂಬಾತನೇ ಮೃತ ಬಾಲಕನಾಗಿದ್ದು ಜೂ.26 ರಂದು ಸಂಜೆ 7 ಗಂಟೆಯ ಸುಮಾರಿಗೆ ತನ್ನ ಮನೆಯ ಕರೆಂಟ್ ಹೋದಾಗ ಚಿಮಣಿ ದೀಪ ಹಚ್ಚಲೆಂದು ಹೋದವನಿಗೆ ಆಕಸ್ಮಿಕವಾಗಿ ದೇಹಕ್ಕೆ ಬೆಂಕಿ ತಗುಲಿ ಸಂಪೂರ್ಣ ದೇಹ ಸುಟ್ಟಿದ್ದು ಯಲ್ಲಾಪುರ ಕಣ್ಣಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂ.29 ರಂದು ಬಾಲಕ ಮೃತಪಟ್ಟಿರುತ್ತಾನೆ.
Prathidvani Yellapura