Breaking News

ಅರಣ್ಯ ರಕ್ಷಣೆಗೆ ಮುಂದಾಗಿ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಸಿಬ್ಬಂದಿಗೆ ಮಾನವೀಯ ನೆರವಿತ್ತು ವನಮಹೋತ್ಸವ ಆಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.

ಪ್ರತಿಧ್ವನಿ,‌ಯಲ್ಲಾಪುರ : ರಾಜ್ಯದಲ್ಲಿ ಪರಿಸರ ಅರಣ್ಯ ರಕ್ಷಿಸಿ ಕಾಪಾಡಲು ಅರಣ್ಯ ಇಲಾಖೆ ಇದ್ದಂತೆ ಅದರ ಕಟಾವು ಮಾಡಲು ಕೆಲವು ಇಲಾಖೆಗಳು ಇವೆ ರಸ್ತೆಗಾಗಿ,ರೈಲ್ವೆಗಾಗಿ, ಅಭಿವೃದ್ಧಿ ಕಾರ್ಯಗಳಿಗಾಗಿ ಅರಣ್ಯ ನಾಶ ಅನಿವಾರ್ಯವಾಗುತ್ತದೆ ಇದರ ಬದಲಾಗಿ ಎಲ್ಲಾ ಇಲಾಖೆಗಳು ಸಾರ್ವಜನಿಕರು ಸಹ ತಮ್ಮ ಕೈಲಾದಷ್ಟು ಅರಣ್ಯ ರಕ್ಷಣೆಯಲ್ಲಿ ಸಹಕರಿಸಿ ಅರಣ್ಯ ಇಲಾಖೆಯ ಕಾರ್ಯದಲ್ಲಿ ಕೈ ಜೋಡಿಸಿ ಭವಿಷ್ಯದ ಪೀಳಿಗೆಗೆ ಅರಣ್ಯ ಉಳಿಸಿ ವರ್ಗಾಯಿಸಬೇಕಿದೆ. ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಟ್ರೀಪಾಕ್೯ ನಲ್ಲಿ ಅರಣ್ಯ ಇಲಾಖೆ ಯಲ್ಲಾಪುರ ವಿಭಾಗದಿಂದ ಆಯೋಜಿಸಿದ್ದ ವನಮಹೋತ್ಸವದಲ್ಲಿ ಗಿಡನೆಟ್ಟು ನೀರೆರೆದು ಉದ್ಘಾಟಿಸಿ ಸಸಿ ವಿತರಿಸಿ ಮಾತನಾಡಿದರು.

ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಅರಣ್ಯಕ್ಕೆ ಬೆಂಕಿ ಬಿದ್ದಿದ್ದನ್ನು ನಂದಿಸಲು ಹೋಗಿ ವಿದ್ಯುತ್ ಅವಘಡಕ್ಕೆ ಬಲಿಯಾದ ಜೂಜೆ ಸಿದ್ದಿ ಕುಟುಂಬಕ್ಕೆ ಅಂದು ನಾನು ನೀಡಿದ ಅಭಯದಂತೆ ಅರಣ್ಯ ಇಲಾಖೆಯ ನೌಕರರು ಸಂಗ್ರಹಿಸಿ ವತಿಯಿಂದ ಉ6 ಲಕ್ಷ ಮಾನವೀಯ ನೆರವು ನೀಡಿದ್ದು ಸಾರ್ಥಕ ಕಾರ್ಯವಾಗಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.



ಸಸಿಗಳನ್ನು ಕೇವಲ ನೆಡುವುದು ಮಾತ್ರ ಆಗದೆ ಅವುಗಳನ್ನು ಕಾಪಾಡಿ ರಕ್ಷಿಸುವ ಕಾರ್ಯವು ಆಗಬೇಕಿದೆ ಇಲ್ಲವಾದಲ್ಲಿ ಗಿಡ ನೆಟ್ಟಿದ್ದಕ್ಕೆ ಅರ್ಥವಿರುವುದಿಲ್ಲ ಅರಣ್ಯ ಇಲಾಖೆಯ ಸಮಾಜಮುಖಿ ಕಾರ್ಯದಲ್ಲಿ ಎಲ್ಲರು ಸಹಕರಿಸಬೇಕಿದೆ ಎಂದು ಎಂ.ಎಲ್.ಸಿ ಶಾಂತರಾಮ ಸಿದ್ದಿ ಹೇಳಿದರು.‌ಅವರು ಸಹ‌ ಗಿಡನೆಟ್ಟು ನೀರೆರೆದು ಸಸಿ ವಿತರಿಸಿದರು.


ವನಮಹೋತ್ಸವದ ಸಾರ್ಥಕ ಕಾರ್ಯಕ್ಕೆ ಸಾಕ್ಷಿಯಾಗಿ ಅರಣ್ಯ ಬೆಂಕಿ ನಂದಿಸುವ ಪ್ರುತ್ನದಲ್ಲಿ ವಿದ್ಯುತ್ ಅವಘಡಕ್ಕೆ ತುತ್ತಾದ ಜೂಜೆ ಸಿದ್ದಿ ಕುಟುಂಬಕ್ಕೆ ಇಲಾಖೆಯ ವತಿಯಿಂದ ಮಾನವೀಯ ನೆರವಾಗಿ 6 ಲಕ್ಷ ಮೊತ್ತವನ್ನು ಬಾಂಡ್ ರೂಪದಲ್ಲಿ ಕುಟುಂಬದ ಸದಸ್ಯರಿಗೆ ನೀಡಲಾಯಿತು.


ಸಸಿಗಳನ್ನು ನೆಡಲು ರೈತರು ಮತ್ತು ಸಾರ್ವಜನಿಕರಿಗೆ ಕೆಲವು ಸಸಿಗಳನ್ನು ವಿತರಿಸಲಾಯಿತು. ಅರಣ್ಯ ರಕ್ಷಣೆಯ ಪಣತೊಡುವ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.


ಈ ಸಂದರ್ಭದಲ್ಲಿ ಸಿ.ಸಿ.ಎಫ್ ವಸಂತ ರೆಡ್ಡಿ ಮತ್ತು ಡಿ.ಎಫ್.ಒ ಎಸ್.ಜಿ.ಹೆಗಡೆ ಯವರು ವನಮಹೋತ್ಸವ ಅಂಗವಾಗಿ ಗಿಡನೆಟ್ಟು ಜಂಟಿಯಾಗಿ ನೀರೆರೆದರು

ಇದಕ್ಕು ಮುನ್ನ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸ್ಯೋಧ್ಯಾನಕ್ಕೆ ಭೇಟಿ ಕೊಟ್ಟ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಎಂ.ಎಲ್.ಸಿ ಶಾಂತಾರಾಮ್ ಸಿದ್ದಿ ಅವರಿಗೆ ಸಿಸಿಎಫ್ ಮತ್ತು ಡಿ ಎಫ್ ಒ ಹೂಗುಚ್ಚ ನೀಡಿ ಸ್ವಾಗತಿಸಿದರು.

ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು. ಶಾಸಕ ಹೆಬ್ಬಾರ್ ಹಾಗು ಎಂ ಎಲ್ ಸಿ ಶಾಂತಾರಾಮ್ ಸಿದ್ದಿ ಗೌರವರಕ್ಷೆ ಸ್ವೀಕರಿಸಿ ಸೆಲ್ಯೂಟ್ ಹೊಡೆದು ಕೃತಜ್ಞತೆ ಸಲ್ಲಿಸಿದರು.

ಎಸಿಎಫ್ ಹಿಮವತಿ ಭಟ್, ಆರ್.ಎಫ್.ಓ ಗಳಾದ ಎಲ್.ಮಠ , ಶಿಲ್ಪಾ ನಾಯ್ಕ್ ಮಿರ್ಜಾನಕರ್, ಅಮಿತ್ ಚೌಹಾಣ್ ಹಾಗು ಡಿ.ಆರ್.ಎಫ್.ಒ ಗಳು ಅರಣ್ಯ ಇಲಾಖೆ ಕಚೇರಿ ಸಿಬ್ಬಂದಿಗಳು ಅರಣ್ಯ ಸಿಬ್ಬಂದಿಗಳು ಸಾರ್ವಜನಿಕರು ಗ್ರಾಮಾರಣ್ಯ ಸಮಿತಿಗಳು ಉಪಸ್ಥಿತರಿದ್ದರು.


ಶಿಕ್ಷಕ ಸುಧಾಕರ ನಾಯ್ಕ್ ನಿರೂಪಿಸಿ ಪ್ರತಿಜ್ಞಾ ವಿಧಿ ಬೋದಿಸಿದರು. ಎಸಿಎಫ್ ಹಿಮವತಿ ಭಟ್ಟ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *