
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ : ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತ ಗ್ರಾಮಸಭೆ ಜು,27 ರ ಗುರುವಾರ ಮದ್ಯಾಹ್ನ ನಿಗಧಿಯಾಗಿತ್ತು. ಆದರೆ ಸಭೆಗೆ ಬರಬೇಕಾದ ಪ್ರಮುಖ ಇಲಾಖೆಗಳ ಅಧಿಕಾರಿಗಳು ಬಾರದಿರುವುದು ಅಲ್ಲದೆ ಸಮಯಕ್ಕೆ ಸರಿಯಾಗಿ ಬರಬೇಕಾದ ನೋಡಲ್ ಅಧಿಕಾರಿಯೆ ತಡವಾಗಿ ಬಂದದ್ದರಿಂದ ಜನರು ತೀವ್ರ ಅಸಮಾಧಾನಗೊಂಡು ಸಭೆಯನ್ನು ಬಹಿಷ್ಕರಿಸಿದ್ದಾರೆ.
ಜನರ ಅತ್ಯಾವಶ್ಯಕ ಮಾಹಿತಿ ತಿಳಿಯಬೇಕಿದ್ಷ ಮತ್ತು ತಿಳಿಸಬೇಕಿದ್ದ ಕೃಷಿ,ತೋಟಗಾರಿಕೆ,ಪಂಚಾಯತ್ ರಾಜ್ ಇಂಜನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಸಾರಿಗೆ, ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸಭೆಗದ ಹಾಜರಾಗದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯರು ಜನರ ಸಮ್ಮುಖದಲ್ಲಿ ನಿರ್ಧರಿಸಿ ದಿನಾಂಕ 7- 8-23 ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಪಡಿಸಲಾಯಿತು.
ಆ ದಿನವು ಇದೇರೀತಿ ಪುನರಾವರ್ತನೆಯಾದರೆ ಯಾವಯಾವ ಇಲಾಖೆಗಳು ಗ್ರಾಮ ಸಭೆಗೆ ಹಾಜರಾಗುವುದಿಲ್ಲವೋ ಆಯಾ ಇಲಾಖೆಯ ಎದುರು ಕುಳಿತು ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.


Prathidvani Yellapura