
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಕೆಲವು ಅವಘಡಗಳು ಸಂಭವಿಸಿದ್ದು ಸಂಬಂಧಪಟ್ಟ 7 ಮಂದಿ ಸಂತ್ರಸ್ತರಿಗೆ ಯಲ್ಲಾಪುರ ವಿಧನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ತ್ವರಿತಗತಿಯಲ್ಲಿ ಪರಿಹಾರ ಮೊತ್ತದ ಆದೇಶ ಪತ್ರ ವಿತರಿಸಿದರು.
ವಾಸ್ತವ್ಯ ಮನೆ ಪೂರ್ಣ ಹಾನಿಗೊಳಗಾದ ತಾರೆಹಳ್ಳಿ ಗ್ರಾಮದ ಗೀತಾ ಸಿದ್ಧಿ ಅವರಿಗೆ 1,20,000 ರೂಪಾಯಿ, ಡೋಮಗೇರಿ ಗ್ರಾಮದ ಮಾಳು ಕೊಕರೆ, ಗೋಯಾ ಕೊಕರೆ, ಬಾಳು ಕೊಕರೆ ಸಹಸ್ರಳ್ಳಿ ಗ್ರಾಮದ ವೆಂಕಟರಮಣ ಭಟ್, ಕಂಚಿನಳ್ಳಿ ಗ್ರಾಮದ ಜಿಮ್ಮು ಶಿಂಧೆ ಅವರಿಗೆ ತಲಾ 37,500 ರೂಪಾಯಿ ಹಾಗೂ ಚಿಮಣಿಮಾಳ ಗ್ರಾಮದ ವಿಟ್ಟು ಜಂಗ್ಲೆ 75,000 ರೂಪಾಯಿಗಳ ಪರಿಹಾರ ಧನದ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶಿಲ್ದಾರ ಸಿ.ಜಿ.ನಾಯ್ಕ್ ಉಪಸ್ಥಿತರಿದ್ದರು.


Prathidvani Yellapura