
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹಳೇ ಕೋಟ್೯ ರಸ್ತೆಯ ಮದರ್ ಥೆರೇಸ ವಿದ್ಯಾ ಸಂಸ್ಥೆ ಸಮೀಪ ಇರುವ ಅತ್ಯಂತ ಹಳೆಯ ಮತ್ತು ಪ್ರತಿಷ್ಟಿತ ಯಲ್ಲಾಪುರ ಸ್ಪೋರ್ಟ್ಸ್ ಕ್ಲಬ್ ಗೆ ಉದ್ಯಮಿ ಮತ್ತು ಕ್ರೀಡಾ ಪ್ರೇಮಿ ರಮೇಶ್ ಆರ್ ಶಾನಬಾಗ್ ಅವರು ಭೇಟಿ ನೀಡಿದ್ದು ಟಿಟಿ ಬೋರ್ಡ್ ಅವಶ್ಯಕತೆ ಕಂಡು ನೂತನ ಟೇಬಲ್ ಟೆನ್ನಿಸ್ ಬೋರ್ಡ್ ಕೊಡುಗೆಯಾಗಿ ನೀಡಿದ್ದಾರೆ.

ರಮೇಶ್ ಶಾನಬಾಗ್ ಅವರು ಸದ್ಯ ಥೈಲ್ಯಾಂಡ್ ನಲ್ಲಿ ಉದ್ಯಮಿಗಳಾಗಿದ್ದು ಕ್ರೀಡಾ ಪ್ರೇಮಿಗಳಾಗಿದ್ದಾರೆ. ಯಲ್ಲಾಪುರ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಹಾಗು ಸದಸ್ಯರಿಗೆ ಬೋರ್ಡ್ ಹಸ್ತಾಂತರಿಸಲಾಗಿದೆ. ಟೇಬಲ್ ಟೆನ್ನಿಸ್ ಆಟ ದಿನ ನಿತ್ಯ ನಡೆಯುತ್ತಿದೆ.

ಟೇಬಲ್ ಟೆನ್ನಿಸ್ ಆಟವಾಡುವ ಆಟಗಾರರು ಮತ್ತುಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಲು ಯಲ್ಲಾಪುರ ಸ್ಪೋಟ್ಸ್೯ ಕ್ಲಬ್ ಸದಸ್ಯರು ಕ್ರೀಡಾಸಕ್ತರಿಗೆ ಕರೆ ನೀಡಿದ್ದು ಕ್ರೀಡಾ ಪ್ರೋತ್ಸಹಕ್ಕೆ ಸಹಕರಿಸಿದ ರಮೇಶ್ ಆರ್ ಶಾನಬಾಗ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Prathidvani Yellapura