



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪ್ರಕೃತಿಯಲ್ಲಿ ಘಟಿಸುವ ಕೆಲವು ಅವಘಡಗಳನ್ನು ತಪ್ಪಿಸಲು ಕೇವಲ ಕಾನೂನು, ನಿಯಮ, ನಿರ್ದೇಶನ, ಜಾಗೃತಿ ಇದ್ದರೆ ಮಾತ್ರ ಸಾಲದು ಅವುಗಳ ನಿವಾರಣೆಗೆ ದೈವ ಕೃಪೆಯು ಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಕಳೆದ ಕೆಲವು ತಿಂಗಳಿಂದ ತಾಲೂಕಿನ ಜನಪ್ರಿಯ ಜಲಪಾತಗಳಲ್ಲಿ ಒಂದಾದ ಸಾತೊಡ್ಡಿ ಜಲಪಾತದ ಪರಿಸರದಲ್ಲಿ ಸಾವು-ನೋವು ಸಂಭವಿಸುತ್ತಿರುವುದಲ್ಲದೇ ಏಕಾಏಕಿ ಪ್ರವಾಸಿಗರ ಮೇಲೆ ಎರಡೆರಡು ಬಾರಿ ಜೇನಿನ ಧಾಳಿ ನಡೆದಿರುವುದು ಸೇರಿದಂತೆ ಇನ್ನಿತರ ದುರ್ಘಟನೆಗಳು ನಡೆದಿದ್ದು ಆತಂಕ ತಂದೊಡ್ಡಿದೆ.

ಇಂತಹ ಸಂಕಷ್ಟ ನಿವಾರಣೆಗೆ ಕಟ್ಟಿಗೆ ಗ್ರಾಮ ವ್ಯಾಪ್ತಿಯ ಶಕ್ತಿ ದೇವಾಲಯವೆಂದೆ ಪ್ರಸಿದ್ದಿ ಪಡೆದಿರುವ ಗಣೇಶನ ಗುಡಿಯ ಲಿಂಗ ರೂಪಿ ಶಿವಾಲಯದಲ್ಲಿ ಶತರುದ್ರಾಭಿಷೇಕ, ವನದುರ್ಗಾ ಹವನ ಹಮ್ಮಿಕೊಳ್ಳಲಾಗಿತ್ತು.

ಕಟ್ಟಿಗೆ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ, ಕುಂಬ್ರಾಳ ಗ್ರಾಮಾರಣ್ಯ ಸಮಿತಿಯ ಪ್ರೋತ್ಸಾಹದೊಂದಿಗೆ ಲಕ್ಷ್ಮೀ ನಾರಾಯಣ ಗುಮ್ಮಾನಿ ನೇತೃತ್ವದಲ್ಲಿ ಹತ್ತಕ್ಕು ಅಧಿಕ ವೈಧಿಕರ ವೇದಮಂತ್ರ ಘೋಷದೊಂದಿಗೆ ವಿಶ್ವ ಶಾಂತಿ ಲೋಕಕಲ್ಯಾಣಾರ್ಥ ಸಾತೊಡ್ಡಿ ಮತ್ತು ಕಟ್ಟಿಗೆ ಗ್ರಾಮ ಸುತ್ತಮುತ್ತಲಿನ ಪರಿಸರದಲ್ಲಿ ಯಾವುದೆ ದುರ್ಘಟನೆ ನಡೆಯದಂತೆ ಭಗವಂತನಲ್ಲಿ ಪೂಜಿಸಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕುಂಬ್ರಾಳ ಗ್ರಾಮಾರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಗದ್ದೆ, ಗಸ್ತು ಅರಣ್ಯ ಪಾಲಕ ಸಂಗಮೇಶ್, ಗ್ರಾಮಸ್ಥರು, ಗ್ರಾಮಾರಣ್ಯ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
Prathidvani Yellapura