

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ವೃತ್ತಕ್ಕೆ ನೂತನ ಪಿ.ಐ ಆಗಿ ಮಂಗಳೂರು ಸಿಟಿ ಠಾಣೆಯಿಂದ ವರ್ಗಾವಣೆಗೊಂಡ ರಮೇಶ್ ಹೆಚ್ ಹನಾಪುರ ನಿಯುಕ್ತಿಗೊಂಡಿದ್ದಾರೆ.
ಈ ಹಿಂದೆ ಯಲ್ಲಾಪುರ ವೃತ್ತದ ಪಿಐ ಆಗಿದ್ದ ರಂಗನಾಥ ನೀಲಮ್ಮನವರ್ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನಿಯುಕ್ತಿಗೊಂಡ ರಮೇಶ್ ಹೆಚ್ ಹನಾಪುರ ಮೂಲತಃ ಬಾಗಲಕೋಟ ಜಿಲ್ಲೆಯ ಕಜ್ಜಿದೋಣಿ ಗ್ರಾಮದವರಾಗಿದ್ದು ಬಾದಾಮಿ ಸರ್ಕಲ್ 3 ವರ್ಷ, ಕಾರವಾರ ಎಸಿಬಿ ಯಲ್ಲಿ 3 ವರ್ಷ ಮತ್ತು ಮಂಗಳೂರು ಸಿಟಿ ಪಿಐ ಆಗಿ ಕಾರ್ಯ ನಿರ್ವಹಿಸಿದ್ದು ಸದ್ಯ ಯಲ್ಲಾಪುರ ವೃತ್ತಕ್ಕೆ ವರ್ಗಾವಣೆಯಾಗಿ ಬಂದಿರುತ್ತಾರೆ.



Prathidvani Yellapura