Breaking News

ಪರಮಪೂಜ್ಯ “ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ದತ್ತ ಮಂದಿರದಲ್ಲಿ ಆಶಿರ್ವಚನ.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ದತ್ತ ಮಂದಿರ ಪರಿಸರದಲ್ಲಿ ನೂರಾರು ದೇವತೆಗಳು ಆವಾಸರಾಗಿರುತ್ತಾರೆ. ದತ್ತಗುರುವಿನ ಸೇವೆ ಜನ್ಮ ಪಾವನ ಮತ್ತು ಸಾಕ್ಷಾತ್ಕಾರಕ್ಕೆ ದಾರಿದೀಪವಾಗಿದೆ. ಪರಸ್ಥಳದಿಂದ ದತ್ತನ ದರ್ಶನಕ್ಕೆ ಭಕ್ತರು ಯಲ್ಲಾಪುರದ ದತ್ತಮಂದಿರಕ್ಕೆ ಬರುವಂತಾಗಬೇಕು ಎಂದು ರಾಮಚಂದ್ರಾಪುರ ಮಠದ ಪರಮ ಪೂಜ್ಯ ರಾಘವೇಶ್ವರ ಭಾರತೀ ಸ್ವಾಮಿಗಳು ಆಶಿರ್ವಚನ ನೀಡಿದರು.


ಅವರು ಪಟ್ಟಣದ ದತ್ತ ಮಂದಿರದಲ್ಲಿ ಬುಧವಾರ ನಡೆದ ಸೇವಾಶಿರ್ವಾದ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿ ವಹಿಸಿ ಆಶಿರ್ವಚನ ನೀಡಿದರು.


ದತ್ತಮಂದಿರದ ನೂತನ ಕ್ರಿಯಾ ಸಮಿತಿಯನ್ನು ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು. ಸಮಿತಿ ಸರ್ವರು ದತ್ತ ಮಂದಿರದ ಅಭಿವೃದ್ದಿಯಲ್ಲಿ ಸಕ್ರಿಯರಾಗಿರಬೇಕೆಂದು ಕರೆ ನೀಡಿದರು.


ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಶ್ರೀಗಳಿಗೆ ಫಲ ಸಮರ್ಪಿಸಿ ಪ್ರಾಸ್ತಾವಿಕ ನುಡಿದರು.
ದತ್ತ ಮಂದಿರ ನಿರ್ಮಾಣ ಪ್ರತಿಷ್ಠಾಪನ ಕಾರ್ಯದಲ್ಲಿ ತೊಡಗಿಸಿಕೊಂಡ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶಿರ್ವದಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಪ್ರಮುಖರು, ಹಿರಿಯರು,ಭಕ್ತಾಧಿಗಳು ಉಪಸ್ಥಿತರಿದ್ದು ಆಶಿರ್ವಚನ ಪಡೆದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಮಾರಿಷಸ್‌ನಲ್ಲಿ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಡಿಪ್ಲಮೋ ಮಾಡಲು ಸುವರ್ಣಾವಕಾಶ..

ಪ್ರತಿಧ್ವನಿ ಯಲ್ಲಾಪುರ ಉದ್ಯೋಗವಕಾಶದ ಮಾಹಿತಿ ಮಾರಿಷಸ್ ದೇಶದಲ್ಲಿ ಮಾರಿಷಸ್ ಸರ್ಕಾರದ ಮಾನ್ಯತೆ ಪಡೆದಿರುವ ಎಂ.ಕ್ಯೂ.ಎ ಅನುಮೋದಿತ ಒ.ಸಿ.ಇ.ಪಿ ತರಬೇತಿ ಸಂಸ್ಥೆ …

Leave a Reply

Your email address will not be published. Required fields are marked *