Breaking News

ಬಿಲ್ಲಿಗದ್ದೆ ಅರಣ್ಯ ಅತಿಕ್ರಮಣ ಅರಣ್ಯರೋಧನ  ಪ್ರಕರಣದ ಸುದ್ದಿಗೆ ಬಿಗ್ ಟ್ವಿಸ್ಟ್.

ಪ್ರತಿಧ್ವನಿ ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ನಲ್ಲಿ ” ಬಿಲ್ಲಿಗದ್ದೆ ಹೊಸದಾಗಿ ಅರಣ್ಯ ಅತಿಕ್ರಮಣ-ಅರಣ್ಯ ರೋಧನ” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.


ಸುದ್ದಿ ತಿಳಿದ ಜಾಗದ ಮೂಲ ಮಾಲಿಕರು ಶೇಷಗಿರಿ ಮುರ್ತು ಪ್ರಭು ಸ್ಥಳದಲ್ಲೆ ನಿಂತು ಸಂಪೂರ್ಣ ಮಾಹಿತಿ ನೀಡಿದ್ದು ಪ್ರಕಟವಾದ ಸುದ್ದಿಯಲ್ಲಿ ಸಂಪೂರ್ಣತೆ ಇಲ್ಲ ಮತ್ತು ಸತ್ಯಕ್ಕೆ ದೂರವಾದ ಅಂಶವಾಗಿದೆ. ಇದರ ಸಂಪೂರ್ಣ ವಿವರ ನಾನೆ ಒದಗಿಸುತ್ತೇನೆ ಎಂದು ಸ್ಥಳದ ಮಾಹಿತಿ ಬಿಚ್ಚಿಟ್ಟರು.


ಅವರ ಹೇಳಿಕೆಯಂತೆ 1999 ರಿಂದಲು ಸಂಪೂರ್ಣ ಸ್ವತ್ತಿನ ನಿರ್ವಹಣೆ ಮಾಡುತ್ತ ಬಂದಿದ್ದು ಈಗ ಉಲ್ಲೇಖಿಸಿರುವ ಸ್ಟ್ರಿಪ್ ಸಹಿತ ನನ್ನ ಸುಪರ್ದಿಯಲ್ಲೆ ಬಂದಿತ್ತು.
ಕಾಲ ನಂತರ 2006 ರಲ್ಲಿ ಎನ್.ಎ.ಮಾಡಿದ್ದು ಅಲ್ಲಿಂದಲು ಸಹ ಸ್ಟ್ರಿಪ್ ಏರಿಯಾ ನನ್ನ ತಾಬಾದಲ್ಲೆ ಉಳಿದಿತ್ತು.
ಕೃಷಿ ಸಂಬಂಧಿಸಿದ ಸ್ಥಳವನ್ನು ವಾಸ್ತವ್ಯಕ್ಕೆ ಬದಲಿಸಿದ ನಂತರ ಹಲವರಿಗೆ ಜಾಗ ಮಾರಾಟ ಮಾಡಿದ್ದೆ  ಸದ್ಯ ಅವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅದಕ್ಕೆ ಹೊಂದಿಕೊಂಡ ಸ್ಟ್ರಿಪ್ ಇದ್ದ ಸ್ಥಳವನ್ನು ನಾನೆ ನೋಡಿಕೊಳ್ಳುತ್ತಿದ್ದು ಅದನ್ನು ಯಾರ ಸುಪರ್ಧಿಗು ನೀಡಿಲ್ಲ.
ಒಂದುವೇಳೆ ಅರಣ್ಯ ಇಲಾಖೆ ಇದು ಅಕ್ರಮ ಎಂದು ಸಾಭೀತುಪಡಿಸಿದರೆ ಸರ್ಕಾರಕ್ಕೆ ವಾಪಸ್ ನೀಡಲು ನಾನು ಬದ್ದ ಎಂಬುದಾಗಿ ಪ್ರತಿಧ್ವನಿ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಂದು ವ್ಯಾಪಾರ ಮಾಡುವ ಸಂದರ್ಭದಲ್ಲಿ ರಾಜ್ಯಪಾಲರ ಹೆಸರಿಗೆ ರಸ್ತೆಗಾಗಿ 9 ಮೀಟರ್ ಮಾಲ್ಕಿ ಜಾಗವನ್ನು ಬಿಟ್ಟು ಕೊಟ್ಟಿದ್ದೆ. ಅದನ್ನು ನಾನೆ ಮಾರಾಟ ಮಾಡಿದವರು ವಾಸದ ಮನೆಗಾಗಿ ಪಡೆದು ನಿಧಾನವಾಗಿ ರಸ್ತೆಯನ್ನು ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡಿದ್ದಾರೆ ಅಲ್ಲದೆ ಅರ್ಧದಷ್ಟು ಭಾಗ ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಿ ಅದರ ತಳಭಾಗದಲ್ಲಿ ಅನಧಿಕೃತವಾಗಿ ಉಪ್ಪಿನಕಾಯಿ ಇಂಡಸ್ಟ್ರಿ ನಡೆಸುತ್ತಿದ್ದಾರೆ. ಈ ಅಕ್ರಮದ ಬಗ್ಗೆ ಸಂಬಂದಿಸಿದ ಇಲಾಖೆಗಳಲ್ಲಿ ಆಕ್ಷೇಪಣೆ ಸಲ್ಲಿಸಿದ್ದೇನೆ ಹಾಗು ರಸ್ತೆಯನ್ನು ಸರ್ಕಾರದ ಸುಪರ್ಧಿಗೆ ಪಡೆದ ಪಟ್ಟಣ ಪಂಚಾಯತ ಗಮನಕ್ಕೆ ತಂದರು ಸರ್ವೆ ಮಾಡಿಸಿ ಸಮಸ್ಯೆ ಬಗೆಹರಿಸದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.


ಇದೇ ಮನೆ ಮಾಲಿಕರು ಇಂಡಸ್ಟ್ರಿ ಹೊಂದಿದವರಿಗು ಕೃಷಿ ಭೂಮಿ ಮಾರಾಟ ಮಾಡಿದ್ದು ಅವರಿಗು ಸ್ಟ್ರಿಪ್ ದೊರೆತಿದೆ ಆ ಸ್ಟ್ರಿಪ್ ಸ್ಥಳದಲ್ಲಿ ಅನಧಿಕೃತವಾಗಿ ಬೇರೊಬ್ಬರ ಮನೆ ನಿರ್ಮಾಣಗೊಂಡಿದ್ದು ಅವರಿಗೆ ಹೆಸ್ಕಾಂ ಅನುಮತಿ,ಪಟ್ಟಣ ಪಂಚಾಯತ ಅನುಮತಿ ಹೇಗೆ ಕೊಟ್ಟರು ಎಂಬುದು ಯಕ್ಷಪ್ರಶ್ನೆಯಾಗಿದೆ. ಈಗಲು ನನ್ನ ಸ್ಟ್ರಿಪ್ ಸ್ಥಳವನ್ನು ಸರ್ಕಾರ ಬಯಸಿದರೆ ಸರ್ಕಾರಕ್ಕೆ ವಾಪಸ್ ನೀಡಲು ಬದ್ದನಿದ್ದೇನೆ. ಸ್ಟ್ರಿಪ್ ಸ್ಥಳ ಅರಣ್ಯ ಭೂಮಿ ಎನ್ನುವುದಾದರೆ ಅನಧಿಕೃತವಾಗಿ ಮನೆ ನಿರ್ಮಿಸಿರುವುದನ್ನು ಅರಣ್ಯ ಇಲಾಖೆ ಖುಲ್ಲಾ ಪಡಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ಅವಾಂತರಗಳಿಗೆ ಹೊಂದಾಣಿಕೆಯ ಕೊರತೆ ಪ್ರಮುಖ ಕಾರಣವಾಗಿದ್ದು ಇದನ್ನು ಸರಳವಾಗಿ ಬಗೆಹರಿಸಿಕೊಳ್ಳಬೇಕೆ ಹೊರತು ಕೆರೆದು ಹುಣ್ಣಾಗಿಸಬಾರದು ಎಂಬುದು ನನ್ನ ಅನಿಸಿಕೆಯಾಗಿದೆ. ಅಧಿಕೃತ ರಸ್ತೆಯನ್ನೆ ಕಬಳಿಸಿ ಅರಣ್ಯಭೂಮಿಯಲ್ಲಿ ಮನೆ ಕಟ್ಟಿರುವುದು ಅಲ್ಲದೆ ಅಧಿಕಾರಿಗಳಿಗೆ ಹಾಗು ಮಾದ್ಯಮದ ದಿಕ್ಕು ತಪ್ಪಿಸಿ ನನ್ನ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ಇದಾಗಿದೆ.

ಜಾಗದ‌ ಮಾಲೀಕರು ಶೇಷಗಿರಿ ವರ್ತು ಪ್ರಭು ಅವರ ಸ್ಪಷ್ಟನೆ ಕ್ಲಿಕ್ ಮಾಡಿ ತಿಳಿದುಕೊಳ್ಳಿ ☝


ಪ್ರಮುಖವಾಗಿ ನನ್ನ ಸ್ಥಳ ಕೊಂಡುಕೊಂಡವರಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವವರು ಇದ್ದು ಅವರಿಗು ಈ ಪ್ರಕರಣಕ್ಕು ಕಿಂಚಿತ್ತು ಸಂಬಂಧವಿಲ್ಲ ಹಾಗು ಅವರು ಕಾನೂನಾತ್ಮಕವಾಗಿ ಅಧಿಕೃತವಾಗಿ ಮತ್ತು ನಿಯಮಾವಳಿಗೆ ಒಳ ಪಟ್ಟಂತೆ ಸ್ಥಳ ಕೊಂಡುಕೊಂಡಿದ್ದಾರೆ ಎಂದು ಜಾಗದ ಮೂಲ ಮಾಲಿಕರಾದ ಶೇಷಗಿರಿ ಮರ್ತು ಪ್ರಭು ಪ್ರತಿಧ್ವನಿಗೆ ಸ್ಪಷ್ಟ ಪಡಿಸಿದ್ದಾರೆ.


ಈ ಪ್ರಕರಣದ ನಂತರವಾದರು ಸಂಬಂಧಿಸಿದ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ನಿರ್ದೇಶನ ನೀಡಬೇಕಿದೆ. ವಾಸ ಸ್ಥಳದಲ್ಲಿ ಕಾರ್ಖಾನೆ ನಡೆಸುವುದು ಅಕ್ಷಮ್ಯವಾಗಿದ್ದು ಈ ಕುರಿತು ಸೂಕ್ತ ಕ್ರಮಜರುಗಿಸಬೇಕಿದೆ. ಸ್ಟ್ರಿಪ್ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿರುವುದನ್ನು ಖುಲ್ಲಾಪಡಿಸಿ ಅರಣ್ಯ ಇಲಾಖೆ ಜಾಗವನ್ನು ತನ್ನ ಸುಪರ್ಧಿಗೆ ಪಡೆಯಬೇಕಿದೆ. ಬಹಳ ಮುಖ್ಯವಾಗಿ ರಾಜ್ಯಪಾಲರ ಹೆಸರಿಗೆ ಸರ್ಕಾರಕ್ಕೆ ನನ್ನ ಸ್ವಂತ ಜಾಗವನ್ನು ರಸ್ತೆಗಾಗಿ ನೀಡಿದ್ದನ್ನು ಅತಿಕ್ರಮಿಸಿ ಮನೆ ನಿರ್ಮಿಸಿರುವುದನ್ನು ಕೂಡಲೆ ತೆರವುಗೊಳಿಸುವಂತೆ ಆಗ್ರಹಿಸುತತ್ತೇನೆ.
ಶೇಷಗಿರಿ ವರ್ತೂ ಪ್ರಭು
ಜಾಗದ ಮೂಲ ಮಾಲಿಕರು
ಬಿಲ್ಲಿಗದ್ದೆ , ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಮಾರಿಷಸ್‌ನಲ್ಲಿ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಡಿಪ್ಲಮೋ ಮಾಡಲು ಸುವರ್ಣಾವಕಾಶ..

ಪ್ರತಿಧ್ವನಿ ಯಲ್ಲಾಪುರ ಉದ್ಯೋಗವಕಾಶದ ಮಾಹಿತಿ ಮಾರಿಷಸ್ ದೇಶದಲ್ಲಿ ಮಾರಿಷಸ್ ಸರ್ಕಾರದ ಮಾನ್ಯತೆ ಪಡೆದಿರುವ ಎಂ.ಕ್ಯೂ.ಎ ಅನುಮೋದಿತ ಒ.ಸಿ.ಇ.ಪಿ ತರಬೇತಿ ಸಂಸ್ಥೆ …

Leave a Reply

Your email address will not be published. Required fields are marked *