

ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಹಾಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಅವರ ಅತ್ಯಾಪ್ತ ಕಟ್ಟಾ ಕಾಂಗ್ರೆಸ್ಸಿಗ ಸಿದ್ದಿ ಬುಡಕಟ್ಟು ಸಮುದಾಯದ ಮುಖಂಡ ಕಿರವತ್ತಿಯ ಬಾಬು ಸಿದ್ದಿ ಮತ್ತು ತಂಡ ದೇಶಪಾಂಡೆ ಅವರ ನಿವಾಸದಲ್ಲಿ ಭೇಟಿಮಾಡಿ ಹೂಮಾಲೆ ಹಾಕಿ ಹುಟ್ಟು ಹಬ್ಬದ ಶುಭಾಶಯ ಕೋರಿ ಸಂಭ್ರಮಿಸಿದರು.

ಆರ್.ವಿ.ದೇಶಪಾಂಡೆ ಅವರಿಗೆ ಯಲ್ಲಾಪುರದ ಬಾಬು ಸಿದ್ದಿ ಎಂದರೆ ಎಲ್ಲಿಲ್ಲದ ಪ್ರೀತಿ ಎಷ್ಟರ ಮಟ್ಟಿಗೆ ಎಂದರೆ ತಮ್ಮ ಆಪ್ತ ವಲಯದ ಮದ್ಯೆ ಬಾಬು ಸಿದ್ದಿಯನ್ನು ಕಂಡೊಡನೆ ” ಆಯಾ ದೇಕೊ ಮೇರಾ ಶೇರ್ ( ಬಂತು ನೋಡು ನನ್ನ ಹುಲಿ) ಎಂದು ಅಭಿಮಾನದಿಂದ ಮತ್ತು ಪ್ರೀತಿಯಿಂದ ಕರೆಯುತ್ತಾರೆ. ಅದಕ್ಕೆ ತಕ್ಕಂತೆ ಬಾಬು ಸಿದ್ದಿಯು ಸಹ ಎಂತಹ ಸಂದರ್ಭದಲ್ಲೂ ದೇಶಪಾಂಡೆ ಅವರನ್ನು ಬಿಟ್ಟು ಕದಲಲಿಲ್ಲ ಅಷ್ಟೊಂದು ಗಟ್ಟಿಯಾದ ನಂಟು ಅವರ ನಡುವೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಆರ್.ವಿ.ಡಿ ಯವರ ಒಂದೇ ಮಾತಿಗೆ ಕಿರವತ್ತಿಯಂತಹ ಪುಟ್ಟ ಗ್ರಾಮದಲ್ಲಿ ಸಹಸ್ರಾರು ಕಾಂಗ್ರೆಸ್ಸಿಗರನ್ನು ಸೇರಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಚುನಾವಣ ಪ್ರಚಾರ ಸಭೆ ಆಯೋಜನೆ ಮಾಡಿ ಸೈ ಎನಿಸಿಕೊಂಡಿದ್ದರು.
ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೆ ಬಾಬು ಸಿದ್ದಿಗೆ ನಿಗಮ ಮಂಡಳಿ ಅಥವ ಪಕ್ಷದಲ್ಲಿ ಉನ್ನತ ಸ್ಥಾನ ಮಾನ ನೀಡುವರು ಎಂಬ ಪುಕಾರು ಎದ್ದಿತ್ತು. ಕಾರಣ ಬಿಜೆಪಿ ವಲಯದಲ್ಲಿ ಬುಡಕಟ್ಟು ಜನಾಂಗದ ವಿಶ್ವಾಸಗಳಿಸಲು ಶಾಂತರಾಮ ಸಿದ್ದಿಯವರಿಗೆ ವಿಧಾನಪರಿಷತ್ ಸ್ಥಾನ ಮಾನ ನೀಡಿದ್ದು ಅದೇರೀತಿ ಕಾಂಗ್ರೆಸ್ ವಲಯದಲ್ಲಿ ಬುಡಕಟ್ಟು ಸಿದ್ದಿ ಸಮುದಾಯದ ಬೆಳೆಯುತ್ತಿರುವ ನಾಯಕ ಅಲ್ಲದೆ ಕಷ್ಟ ಕಾಲದಲ್ಲು ಪಕ್ಷಕ್ಕೆ ಕೈಕೊಡದೆ ಸದಾ ದೇಶಪಾಂಡೆ ನೆರಳಾಗಿ ಕಾಂಗ್ರೆಸ್ ಪಕ್ಷಕ್ಕೆ ಬಲವಾಗಿ ನಿಂತು ಪಕ್ಷ ಸಂಘಟಿಸುತ್ತಾ ಬಂದ ಕಟ್ಟಾ ಕಾಂಗ್ರೆಸ್ಸಿಗ ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಲೆ ಬರುತ್ತಲೆ ಸ್ಥಾನ ಮಾನ ಸಿಗುವ ನಿರೀಕ್ಷೆ ಇತ್ತು ಆದರೆ ಕಾರಣಾಂತರಗಳಿಂದ ನಡೆಯಲಿಲ್ಲ ಆದರು ಪಕ್ಷಕ್ಕೆ ದ್ರೋಹಮಾಡದೆ ಇಂದಿಗು ಕಾಂಗ್ರೆಸ್ ಕಟ್ಟಾಳಾಗಿಯೆ ಉಳಿದಿದ್ದಾರೆ ಮತ್ತು ದೇಶಪಾಂಡೆ ಅವರು ಹಾಕಿ ಕೊಟ್ಟ ಗೆರೆ ದಾಟದೆ ನಿಷ್ಡಾವಂತರಾಗಿ ಮುಂದುವರೆಯುತ್ತಲೆ ಇದ್ದಾರೆ. ಇಂತಹ ನಿಷ್ಟಾವಂತ ಕಾರ್ಯಕರ್ತರಿಗೆ ಸ್ಥಾನ ಮಾನ ಸಿಗಲಿದೆ ಎಂಬುದು ಬಾಬು ಸಿದ್ದಿ ಆಪ್ತವಲಯದ ಬಲವಾದ ನಂಬಿಕೆಯಾಗಿದೆ.

ಒಟ್ಟಿನಲ್ಲಿ ತನ್ನ ಆಪ್ತ ರಾಜಕೀಯ ಗುರುಗಳು ಹಾಗು ಮಾರ್ಗದರ್ಶಕರು ಆರ್.ವಿ.ದೇಶಪಾಂಡೆ ಅವರ ಜನ್ಮ ದಿನಕ್ಕೆ ರಾಜಧಾನಿ ಬೆಂಗಳೂರಿನಿಂದ ವಿಶೇಷವಾಗಿ ಆರ್ಡರ್ ಮಾಡಿಸಿ ತರಲಾದ ಗುಲಾಬಿ ಹೂಗಳಿಂದಲೆ ತಯಾರಿಸಿದ ಬೃಹತ್ ಹೂವಿನ ಹಾರ ಹಾಕಿ ಸಂಭ್ರಮಿಸಿ ಆಶಿರ್ವಾದ ಪಡೆದು ಸಂತೃಪ್ತರಾದರು.

ಈಗಲು ಬಾಬು ಸಿದ್ದಿ ಬರುತ್ತಲೆ ದೇಶಪಾಂಡೆ ಅವರ ಬಾಯಲ್ಲಿ ಹೊರಟ ಮೊದಲ ಪದವೆ ದೇಖೊ “ಮೇರಾ ಶೇರ್ ಆಗಯಾ ” ಇದಲ್ಲವೆ ಅಭಿಮಾನವೆಂದರೆ…!!!
















Prathidvani Yellapura