


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಂಚಿಕೇರಿ ಜನತಾ ಕಾಲೋನಿಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಶ್ರೀಗಂಧ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯು ಮಂಚಿಕೇರಿ ಜನತಾ ಕಾಲೋನಿ ನಿವಾಸಿ ಗಣೇಶ ಸೋಮು ಲಮಾಣಿ ಎಂಬುವನಾಗಿದ್ದು ಈತನ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 52 ಕೆಜಿ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಶ್ರೀಗಂದದ ಕಟ್ಟಿಗೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯನ್ನಾದರಿಸಿ ದಾಳಿಮಾಡಿ ಶ್ರೀಗಂಧ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಜಿ. ಹೆಗಡೆ ಅರವರ ಮಾರ್ಗದರ್ಶನದಲ್ಲಿ ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ಹಿಮವತಿ ಭಟ್ ಅರವರ ನೇತೃತ್ವದಲ್ಲಿ ಮಂಚಿಕೇರಿ ವಲಯದ ವಲಯ ಅರಣ್ಯಾಧಿಕಾರಿ ಅಮಿತಕುಮಾರ ಚವ್ಹಾಣ ಒಳಗೊಂಡಂತೆ ಮಂಚಿಕೇರಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಪವನಕುಮಾರ ಲೋಕುರ,ಉಪವಲಯ ಅರಣ್ಯಾಧಿಕಾರಿ ಸಂತೋಷ ಪವಾರ , ಸಂಗಮೇಶ ಅಂಗಡಿ, ಕಲ್ಲಪ್ಪ. ಬರದೂರ, ಮಂಜುನಾಥ ಆಗೇರ,ಜಗದೀಶ ಪಾಲಕನವರ , ವಿರಾಜ್ ನಾಯಕ, ಹಾಗೂ ಗಸ್ತು ವನಪಾಲಕರಾದ ವಿಷ್ಣು ಪೂಜಾರಿ ಮತ್ತು ವಾಹನ ಚಾಲಕರಾದ ಗಂಗಾಧರ ರೆಡ್ಡಿ, ಮಂಜು ನಾಯ್ಕ ಮತ್ತು ಅರಣ್ಯ ವೀಕ್ಷಕರುಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.






Prathidvani Yellapura