Breaking News

ವಜ್ರಳ್ಳಿಯಲ್ಲಿ ನಡೆದ “ಭಾಗ್ಯಶ್ರೀ ಸಂಜೀವಿನಿ ಒಕ್ಕೂಟ” ದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆಯ ಗೌರವ ಸನ್ಮಾನ ಕಾರ್ಯಕ್ರಮ.


ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…

,ಪ್ರತಿಧ್ವನಿ, ಯಲ್ಲಾಪುರ: ಆಧುನಿಕತೆಯಲ್ಲಿ ಅವಕಾಶಗಳು ಮಹಿಳೆಯರಿಗೆ ಹಿಂದಿಗಿಂತಲೂ ಈಗ ಹೆಚ್ಚು ತೆರೆದುಕೊಂಡಿದೆ. ಸಾಂಪ್ರದಾಯಿಕವಾಗಿ ಪ್ರಚಲಿತದಲ್ಲಿದ್ದ ಒಂದು ಗಾದೆಮಾತು ಎರಡು ಜಡೆ ಸೇರಿದರೆ ಜಗಳ ಎನ್ನುವುದು ವಜ್ರಳ್ಳಿಯ ಒಕ್ಕೂಟದ ಸದಸ್ಯೆಯರ ಪಾಲಿಗೆ ಸುಳ್ಳಾಗಿದೆ.
ಸಂಘಟನಾತ್ಮಕವಾಗಿ ಒಗ್ಗೂಡಿದಾಗ ಇಂತಹ ಸಾಧನೆ ಮಾಡಲು ಸಾಧ್ಯ.ಸ್ಪರ್ಧಾತ್ಮಕವಾದ ಇಂದಿನ ಯುಗದಲ್ಲಿ ಮಹಿಳೆಯರ‌ ಸಬಲೀಕರಣವು ಅಭಿವೃದ್ದಿ ಯ ಮುನ್ನುಡಿಯಾಗಿದೆ . ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅಭಿಪ್ರಾಯಪಟ್ಟರು.
ಅವರು ವಜ್ರಳ್ಳಿಯಲ್ಲಿ ನಡೆದ “ಭಾಗ್ಯಶ್ರೀ ಸಂಜೀವಿನಿ ಒಕ್ಕೂಟ” ದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆಯ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಯಲ್ಲಾಪುರ ತಾ.ಪಂ ಕಾರ್ಯನಿರ್ವಾಹಕರಾದ ಜಗದೀಶ ಕಮ್ಮಾರ ಮಾತನಾಡಿ ಸ್ರ್ತೀಯರು ಒಟ್ಟಾಗಿ ಮಾಡುವ ಕೆಲಸದಲ್ಲಿ ಶಕ್ತಿ ಇದೆ. ಮಾದರಿಯಾಗಿರುವ ಕಾಯಕವನ್ನು ಸಮಾಜ ಗುರುತಿಸಿ ಪ್ರೋತ್ಸಹಿಸುವ ಮೂಲಕ ಉತ್ತಮ ಕೊಡುಗೆ ಸಿಗಲಿದೆ. ಮಹಿಳೆಯರ ಸೂಕ್ಷ್ಮ ಪ್ರಜ್ಞೆಯು ಆಕೆಯನ್ನು ಬೆಳಸಬಲ್ಲದು. ಭಾಗ್ಯಶ್ರೀ ಸಂಜೀವಿನಿಒಕ್ಕೂಟ ಈ ಸಲದ ರಾಜ್ಯ ಪ್ರಶಸ್ತಿ ಪಡೆದಿರುವುದು ಈ ನೆಲದ ಭಾಗ್ಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಭಾಗ್ಯಶ್ರೀ ಸಂಜೀವಿನಿ ಒಕ್ಕೂಟ ದ ಅಧ್ಯಕ್ಷರಾದ ಗಾಯತ್ರಿ ಗಾಂವ್ಕಾರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ ಸಹಾಯಕರಾದ ಮಂಜುನಾಥ ಆಗೇರ,ಗ್ರಾಮ ಪಂಚಾಯತ ಉಪಾಧ್ಯಕ್ಷೆ ರತ್ನಾ ಬಾಂದೇಕರ ,ಪಂಚಾಯತ ಅಭಿವೃದ್ದಿ ಅಧಿಕಾರಿ ಸಂತೋಷಿ ಆರ್ ಬಂಟ್, ಕಾರ್ಯದರ್ಶಿ ಜಿ ಎಸ್ ಪತ್ರೇಕರ್, ಎನ್ ಆರ್ ಎಲ್ ಎಮ್ ನ ವ್ಯವಸ್ಥಾಪಕ ಮಂಜಣ್ಣಾ, ಪತ್ರಕರ್ತರಾದ ಪ್ರಭಾ ಜಯರಾಜ್, ಸುಬ್ರಾಯ ಬಿದ್ರೆಮನೆ, ದತ್ತಾತ್ರೇಯ ಭಟ್ಟ ಕಣ್ಣಿಪಾಲ ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.


ಸಂಗೀತಾ ಗಾಂವ್ಕಾರ, ಪಾರ್ವತಿ ಭಟ್ಟ ರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಒಕ್ಕೂಟ ದ ಊಪಾಧ್ಯಕ್ಷೆ ಅನ್ನಪೂರ್ಣ ಭಟ್ಟ ಸ್ವಾಗತಿಸಿದರು.
ಎನ್ ಆರ್ ಎಲ್ ಎಮ್ ನ ಸಂಯೋಜಕ ರಾಜಾರಾಮ ವೈಧ್ಯ ಪ್ರಾಸ್ತಾವಿಕ ಮಾತನಾಡಿದರು.
ಪುಸ್ತಕ ಬರಹಗಾರ್ತಿ ಶರೀಫಾ ಬಿ ಮುಲ್ಲಾ ಅಭಿನಂದನಾ ಪತ್ರ ವಾಚಿಸಿದರು. ವೀಣಾ ಹೆಬ್ಬಾರ,ಮತ್ತು ಲಲಿತಾ ಸಿದ್ದಿ ನಿರ್ವಹಿಸಿದರು. ಹೇಮಾವತಿ ಆಚಾರಿ ವಂದಿಸಿದರು.

ತಪ್ಪದೆ ಎಲ್ಲರು ಪಾಲ್ಗೊಳ್ಳಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *