
ಯಲ್ಲಾಪುರ : ಇತ್ತೀಚೆಗೆ ಯಲ್ಲಾಪುರ ಪಟ್ಟಣದಲ್ಲಿ ಸುಳ್ಳು ದೂರು ಸಲ್ಲಿಸುವುದು. ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದ್ದು ಅಂತಹವರ ವಿರುದ್ದ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೆಲವು ನಾಗರಿಕರು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಮೂಲಕ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ಬಿಸಗೋಡು ಕ್ರಾಸ್ ನಲ್ಲಿ ಅನಧಿಕೃತವಾಗಿ ಹೊಟೆಲ್ ನಡೆಯುತ್ತಿರುವುದಾಗಿ ಮತ್ತು ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಯಾಗುತ್ತಿದ್ದು ಸರ್ಕಾರಿ ಭೂಮಿ ಅತಿಕ್ರಮಣವಾಗಿದೆ ಎಂದು ಅದನ್ನು ಖುಲ್ಲಾ ಪಡಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೀಪಕ್ ಪುಂಡಲೀಕ ನಾಯ್ಕ್, ಶೈನ್ ಸುರೇಶ್ ನಾಯ್ಕ, ಕೃಷ್ಣ ಉಲ್ಲಾಸ ಸಾಯ್ಕ್, ಎಂಬುವರು ಸುಳ್ಳು ದೂರು ನೀಡಿ ಜನರ ಮತ್ತು ಅಧಿಕಾರಿಗಳ ದಿಕ್ಕು ತಪ್ಪಿಸಿ ತಮ್ಮ ಅತಿಕ್ರಮಣ ಭೂಮಿ ಉಳಿಸಿಕೊಳ್ಳುವ ಹುನ್ನಾರವಿದೆ ಎಂದು ಅತಿಕ್ರಮಣ ಮಾಡಿ ಹೊಟೆಲ್ ನಡೆಸುತ್ತಿದ್ದಾರೆನ್ನಾಲಾದ ಶೇಖ್ ಇಮಾಮ್ ಜಿಲ್ಲಾಧಿಕಾರಿಗಳಿಗೆ ವಾಸ್ತವಿಕತೆ ವಿವರಿಸಿ ಮನವಿ ಸಲ್ಲಿಸಿದ್ದಾರೆ.
ತಮ್ಮ ಅನಧಿಕೃತ ವಹಿವಾಟು,ಅತಿಕ್ರಮಣ ಭೂಮಿಯ ವ್ಯಾಪಾರ ಪ್ರಮುಖವಾಗಿ ಸಬಗೇರಿ ಭೂಮಿ ವ್ಯವಹಾರದಲ್ಲಿ ಕೋಟಿಗು ಮೀರಿದ ಹಣ ದೀಪಕ್ ಪುಂಡಲೀಕ ನಾಯ್ಕ್ ಖಾತೆಗೆ ಬಂದಿರುವುದಾಗಿ ತಿಳಿದು ಬಂದಿದ್ದು ಇವರ ತನಿಖೆ ನಡೆದಿದರೆ ಮತ್ತಷ್ಟು ಅನಧಿಕೃತ ವ್ಯವಹಾರದ ಸತ್ಯ ಹೊರಬರಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಮಂಜುನಾಥ ಹೆಗಡೆ, ಅಬ್ದುಲ್ ರಹಮಾನ್ ಶೇಖ್, ಜಯಂತ್ ಮಾವಳ್ಳಿ, ಪೂಜಾ ನೇತ್ರೇಕರ್, ದಸ್ತಗೀರ್ ಶೇಖ್, ರಾಜಾರಾಮ್ ಗಾಂವ್ಕರ್, ಎಂ.ಬಿ.ಗೌಸ್, ಹಾಲಿಮ ರಫಿಕ್, ಬಷೀರ್ ಉಪಸ್ಥಿತರಿದ್ದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶಿಲ್ದಾರ ಯಲ್ಲಪ್ಪ ಗೊಣೆಣ್ಣವರ್ ಮೇಲಾಧಿಕಾರಿಗಳಿಗೆ ಮನವಿ ತಲುಪಿಸಲಾಗುವುದು ಎಂದು ತಿಳಿಸಿದರು.



