
ಪ್ರತಿಧ್ವನಿ ಯಲ್ಲಾಪುರ : ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದೇ ಕರೆಯುವ ಎಸ್.ಎಸ್.ಎಲ್.ಸಿ ಪರೀಕ್ಷಗಳು ಬುಧವಾರದಿಂದ ಆರಂಭಗೊಳ್ಳಲಿದ್ದು ಪರೀಕ್ಷೆ ಕಾರ್ಯದ ಪೂರ್ವ ತಯಾರಿ ಸಂಪೂರ್ಣಗೊಂಡು ಅಂತಿಮ ಹಂತದ ಕೆಲಸಗಳು ನಡೆಸಲಾಗುತ್ತಿದೆ.

ಯಲ್ಲಾಪುರ ತಾಲೂಕಿನಲ್ಲಿ ಒಟ್ಟು 6 ಪರೀಕ್ಷಾ ಕೇಂದ್ರಗಳಿದ್ದು 986 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾ,18-ಕನ್ನಡ, 23-ವಿಜ್ಞಾನ, 25-ದ್ವಿತೀಯ ಭಾಷೆ, 28-ಗಣಿತ, 30-ತೃತಿಯ ಭಾಷೆ, ಏ,2-ಸಮಾಜ ವಿಜ್ಞಾನ ಪರೀಕ್ಷೆಗಳು ಜರುಗಲಿದೆ.
ಪರೀಕ್ಷೆಗಳು ಸುಗಮವಾಗಿ ನಡೆಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ 163 ಕಲಂ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳ ಕ್ಷೇಮಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿರಲಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಇರುವುದರಿಂದ ಹೆಸ್ಕಾಂ ಇಲಾಖೆಯವರು ವಿದ್ಯುತ್ ನಿಲುಗಡೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಗಾಗಿ ಪ್ರತಿ ಕೇಂದ್ರದಲ್ಲು ಪೊಲೀಸ್ ಸರ್ಪಗಾವಲು ಇರಲಿದೆ.
ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರಿಗೆ ತರಭೇತಿ ನೀಡಲಾಗಿದ್ದು ಎಲ್ಲವು ಸಜ್ಜಾಗಿದೆ ಎಂದು ಶಿಕ್ಷಣ ಇಲಾಖೆಯಿಂದ ಮಾದ್ಯಮಕ್ಕೆ ಮಾಹಿತಿ ಲಭಿಸಿದೆ.

ವಿದ್ಯಾರ್ಥಿಗಳು ಯಾವುದೆ ಭಯ ಭೀತಿ ಇಲ್ಲದೆ ಶಾಂತ ಮನಸ್ಸಿನಿಂದ ನಿರ್ಭೀತಿಯಿಂದ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸುವಂತಾಗಲಿ ಇದರಿಂದ ನಿಮ್ಮ ಪೋಷಕರಿಗೆ, ಓದಿದ ಶಾಲೆಗೆ,ವಿದ್ಯೆ ಕಲಿಸಿದ ಗುರುಗಳಿಗೆ ಮತ್ತು ನಿಮ್ಮ ಊರಿಗೆ ಕೀರ್ತಿ ತರುವಂತಾಗಲಿ. ಪರೀಕ್ಷೆ ಬರೆಯುತ್ತಿರುವ ತಾಲೂಕಿನ ಎಲ್ಲಾ ಮಕ್ಕಳಿಗೆ ಶುಭವಾಗಲಿ.
ರೇಖಾ ನಾಯ್ಕ್
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಯಲ್ಲಾಪುರ
Prathidvani Yellapura