Breaking News

ಆರ್.ವಿ.ದೇಶಪಾಂಡೆ ಹುಟ್ಟು ಹಬ್ಬದ ನಿಮಿತ್ತ ಗ್ರಾಮದೇವಿಯರಿಗೆ ಉಡಿ ತುಂಬಿ ವಿಶೇಷಪೂಜೆ ಸಲ್ಲಿಕೆ.

ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ರಾಜಕಾರಣಿ ಉತ್ತರ ಕನ್ನಡ ಜಿಲ್ಲೆಯ ಧೀಮಂತ ನಾಯಕ ಮಾಜಿ ಮಂತ್ರಿ ಹಾಲಿ ಹಳಿಯಾಳ ಕ್ಷೇತ್ರದ ಶಾಸಕ ,ರಾಜ್ಯ ಆಡಳಿತ ಸುಧಾರಣಾ ಶುಓಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರಿಗೆ ಹುಟ್ಟು ಹಬ್ಬದ ಸಂಭ್ರಮ.

 ತನ್ನಿಮಿತ್ತ  ಯಲ್ಲಾಪುರದ ಶಕ್ತಿ ದೇವತೆಯರಾದ ಗ್ರಾಮದೇವಿಯರಿಗೆ ಉಡಿ ತುಂಬಿ ಅವರ ಆಯುಷ್ಯ,ಆರೋಗ್ಯ , ಸಂಪತ್ತು ಮತ್ತು ಇನ್ನೂ ಹೆಚ್ಚಿನ ಅಧಿಕಾರ ಸಿಗಲೆಂದು ದೇಶಪಾಂಡೆ ಆಪ್ತರು ಪಕ್ಷದ ಪ್ರಮುಖರಾದ  ಡಿ ಎನ್ ಗಾಂವ್ಕರ್,ಉಪಾಧ್ಯಕ್ಷರು ಜಿಲ್ಲಾ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉ ಕ ಹಾಗು ದೇವಿದಾಸ ( ಉಲ್ಲಾಸ) ನಾಗೇಶ್ ಶಾನಭಾಗ ಅಧ್ಯಕ್ಷರು ಯಲ್ಲಾಪುರ
ತಾಲೂಕಾ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮತ್ತು ಕವಿತಾ ಉಲ್ಲಾಸ ಶಾನಭಾಗ ಹಾಜರಿದ್ದು ಪೂಜೆ ಸಲ್ಲಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡಲು ಸ್ವಂತ ದುಡಿಮೆಯ ಹಣದಲ್ಲಿ ಪೆನ್ನು ಪುಸ್ತಕ ವಿತರಿಸಿದ-ವಿಟ್ಟು ದೋಂಡು ಪಟಕಾರೆ.

ಪ್ರತಿಧ್ವನಿ ಯಲಾಪುರ :ಇಂದಿನ ಕಾಲಮಾನದಲ್ಲಿ ದುಡಿದ ಹಣ ದುಂದು ಮಾಡಿ ಅರ್ಥಹೀನ ಕೆಲಸಗಳಲ್ಲಿ ಪೋಲು ಮಾಡುವವರ ಮದ್ಯೆ ಸಣ್ಣ ಯಲವಳ್ಳಿ …

Leave a Reply

Your email address will not be published. Required fields are marked *