
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಲ್ಲಾಪುರ ತಾಲೂಕ ಸಮಿತಿ ವತಿಯಿಂದ ಜಿಲ್ಲಾ ಪ್ರಮುಖ ಕಲ್ಲಪ್ಪ ಹೊಳಿ ನೇತೃತ್ವದಲ್ಲಿ ಸಂವಿಧಾನ ಪಿತಾಮಹ ಡಾ,ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಆಚರಿಸಲಾಯಿತು.

ಸಂವಿಧಾನ ಶಿಲ್ಪಿ ಮಾನವತಾವಾದಿ ಅಂಬೇಡ್ಕರ್ ಜೀವನ ಹೋರಾಟದ ಬದುಕು ತುಳಿತಕ್ಕೊಳಗಾದವರಿಗೆ ಸಂವಿಧಾನದ ಮೂಲಕ ಬದುಕು ಕೊಟ್ಟ ಮಹಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ವೇದಿಕೆ ಪ್ರಮುಖರು ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಶೇಖರ್ ಸಿದ್ಧಿ ಹಿತ್ಲಳ್ಳಿ , ಜಿಲ್ಲಾ ಸಂಘಟಕ ಕಲ್ಲಪ್ಪ ಹೋಳಿ , ವಕೀಲೆ ಅಮಿನಾ ಶೇಖ್ , ಮಹಿಳಾ ಘಟಕದ ಅಧ್ಯಕ್ಷೆ ಪ್ರೀತಿಸಿದ್ದಿ ಮಾವಿನ ಕಟ್ಟ , ಸ್ಥಳೀಯ ಘಟಕದ ಅಧ್ಯಕ್ಷ ಪಕೀರಪ್ಪ ಸದಸ್ಯರಾದ ನಾಗೇಶ್ ಸಿದ್ದಿ , ಗಾಯತ್ರಿ ಸಿದ್ದಿ ಮುಂಡಗೋಡ ಸಂಘಟನಾ ಸಂಚಾಲಕ ಜೂಜೆ ಸಿದ್ದಿ ಹಾಗೂ ಅಗ್ನೇಲ್ ಸಿದ್ದಿ, ಸುರೇಶ್ ಸಿದ್ದಿ, ಬಸ್ತ್ಯಾಂವ್ ಸಿದ್ದಿ, ತಿಮ್ಮಣ್ಣ, ಅಜಿತ್, ಅನಸೂಯಾ, ಸಾಯಿರ ಜೂಜೆ ಸಿದ್ದಿ, ಪದಾಧಿಕಾರಿಗಳು ಸದಸ್ಯರು ಊರಿನ ಪ್ರಮುಖರು ನಾಗರಿಕರು ಹಾಜರಿದ್ದರು.



