




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಕಳೆದೆರಡು ದಿನಗಳ ಹಿಂದೆ ಯಲ್ಲಾಪುರ ಬಿಜೆಪಿ ಮಂಡಲದ ವತಿಯಿಂದ ಶಾಸಕ ಹೆಬ್ಬಾರ್ ರಾಜಿನಾಮೆ ಆಗ್ರಹಿಸಿ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಇದಕ್ಕೆ ಕೌಂಟರ್ ಎಂಬಂತೆ ಬುಧವಾರ ಶಾಸಕ ಹೆಬ್ಬಾರ್ ಕಾರ್ಯಾಲಯದಲ್ಲಿ ಹೆಬ್ಬಾರ್ ಅಭಿಮಾನಿ ಬಳಗದ ಪ್ರಮುಖರು ಸುದ್ದಿಗೋಷ್ಟಿ ನಡೆಸಿ ಶಾಸಕರ ರಾಜಿನಾಮೆ ಕೇಳಿದ ಬಿಜೆಪಿ ಮಂಡಲದ ಮತ್ತು ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ನಡೆಯನ್ನು ಖಂಡಿಸಿದರು.

ಸುದ್ದಿಗೋಷ್ಟಿಯಲ್ಲಿ ಹೆಬ್ಬಾರ್ ಅಭಿಮಾನಿ ಬಳಗದ ಪ್ರಮುಖ ಮುರಳಿ ಹೆಗಡೆ ಮಾತನಾಡಿ ಹೆಬ್ಬಾರ್ ರಾಜಿನಾಮೆಆಗ್ರಹಿಸಿ ಪತ್ರಿಕಾ ಗೋಷ್ಟಿ ನಡೆಸಿದವರಲ್ಲೆ ಬಿಜೆಪಿ ಪಕ್ಷಕ್ಕೆ ಮತ್ತು ಅಧಿಕೃತ ಬಿಜೆಪಿ ಅಭ್ಯರ್ಥಿ ಸೋಲಿಗೆ ಒಳಗೊಳಗೆ ಹುನ್ನಾರ ನಡೆಸಿದವರು ಕುಳಿತು ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ಮಾತನಾಡುತ್ತಿದ್ದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ. ಸುದೀರ್ಘ40 ವರ್ಷಗಳ ರಾಜಕೀಯ ಅನುಭವದೊಂದಿಗೆ ಕ್ಷೇತ್ರದ ಮನೆ ಮಗನಂತೆ ಜನತೆಯ ಸೇವೆ ಸಲ್ಲಿಸುತ್ತಿರುವ ನಮ್ಮ ನಾಯಕರಾದ ಶಿವರಾಮ್ ಹೆಬ್ಬಾರ್ ಬಗ್ಗೆ ತಲಾಖ್ ಸಂಸ್ಕೃತಿಯವರು ಎಂಬ ಶಬ್ದ ಬಳಸಿದ ಶಾಂತಾರಾಮ್ ಸಿದ್ದಿ ಅವರ ಸಂಸ್ಕೃತಿ ಏನೆಂಬುದನ್ನು ತೋರಿಸಿತ್ತದೆ ಮತದಾರ ಆಶಿರ್ವದಿಸಿ ಗೆಲ್ಲಿಸಿದ್ದಾನೆ ಮುಂದೆ ಜನತೆಯ ಮುಂದೆ ಹೋದಾಗ ಪುರಸ್ಕಾರವೊ ತಿರಸ್ಕಾರವೊ ಮತದಾರ ಪ್ರಭುಗಳು ನಿರ್ಧರಿಸಲಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿ ಬಿಜೆಪಿ ಅಧಿಕೃತ ಅಭ್ಯರ್ಥಿ ಹೆಬ್ಬಾರ್ ಸೋಲಿಗೆ ಪ್ರತ್ನಿಸಿದ ತಂಡದ ಪತ್ರಕಾಗೋಷ್ಟಿಗೆ ಎಳ್ಳಷ್ಟು ಬೆಲೆ ಇಲ್ಲ ಮತ್ತು ಒಂದು ರಾಷ್ಟ್ರೀಯ ಪಕ್ಷದ ನಡೆಯು ಇದಲ್ಲ ಇದನ್ನು ಬಲವಾಗಿ ಡಿಸುತ್ತೇವೆ ಎಂದರು.

ನಮ್ಮ ಶಾಸಕರು ನಾಯಕರು ಆದ ಹೆಬ್ಬಾರ್ ಜನರ ಮತಗಳಿಂದ ಗೆದ್ದುಬಂದವರು ಶಾಂತಾರಾಮ್ ಸಿದ್ದಿ ನಾಮ ನಿರ್ದೇಶಿತ ಸದಸ್ಯರು ಅದು ಸಹ ಹೆಬ್ಬಾರ್ ತ್ಯಾಗದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆತಂದದಕ್ಕಾಗಿ ಒಲಿದು ಬಂದ ಅದೃಷ್ಟವೆ ಹೊರತು ಜನರು ಆಶಿರ್ವಸಿದ್ದಲ್ಲ ಅಂತಹವರು ಶಾಸಕ ಹೆಬ್ಬಾರ್ ಅವರ ರಾಜಿನಾಮೆ ಕೇಳುವಷ್ಟರ ಮಟ್ಟಕ್ಕೆ ಹೋಗುತ್ತಾರೆಂದರೆ ಇದು ಹಾಸ್ಯಾಸ್ಪದ ವಾಗಿದೆ ಇನ್ನು ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆಗೆ ಅನುಭವದ ಕೊರತೆಯ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಮತ್ತು ಯಲ್ಲಾಪುರ ತಾಲೂಕಿನಲ್ಲಿಯು ಕಳೆದ ಲೋಕ ಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಗಳಿಕೆಯ ಮತಗಳನ್ನು ಕಲೆಹಾಕಿ ನೋಡಿದರೆ ವಿಫಲತೆ ಎದ್ದು ಕಾಣುತ್ತದೆ ಅದಕ್ಕೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಿದೆ. ಬಿಜೆಪಿ ಪಕ್ಷ ತತ್ವ ಸಿದ್ದಾಂತದಡಿ ನಡೆಯುತ್ತಿದೆ ಎನ್ನುವುದು ಸತ್ಯವೆ ಆಗಿದ್ದರೆ ಒಂದು ವಾರದೊಳಗೆ ಉಚ್ಚಾಟನೆ ಮಾಡಿ ಸಾಭಿತು ಮಾಡಲಿ ಅದು ಬಿಟ್ಟು ಜನತೆ ನೀಡಿದ ತೀರ್ಪು ದಿಕ್ಕರಿಸಿ ರಾಜಿನಾಮೆ ನೀಡುವ ಪ್ರಶ್ನೆಯೆ ಇಲ್ಲ. ವಯಸ್ಸಿಗೆ ಮತ್ತು ಸ್ಥಾನಕ್ಕೆ ಮೀರಿದ ನಡೆ ಮತ್ತು ಮಾತು ಮಂಡಲಾಧ್ಯಕ್ಷರಿಗೆ ಶೋಭೆ ತರುವುದಿಲ್ಲ ಇಂತಹ ನಡೆಯನ್ನು ಹೆಬ್ಬಾರ್ ಅಭಿಮಾನಿಗಳು ಸಹಿಸುವ ಪ್ರಶ್ನೆಯೆ ಇಲ್ಲ ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಹೆಬ್ಬಾರ್ ಅಭಿಮಾನಿ ಬಳಗದ ಪ್ರಮುಖ ಡಾ, ರವಿ ಭಟ್ಟ ಬರಗದ್ದೆ ಎಚ್ಚರಿಸಿದರು.

ಬಿಜೆಪಿಯವರು ಹೆಬ್ಬಾರ್ ರಾಜಿನಾಮೆಗೆ ವಾರದ ಗಡುವು ನೀಡುತ್ತಿದ್ದಾರೆ ಹೆಬ್ಬಾರ್ ಅಭಿಮಾನಿ ಬಳಗದಿಂದಲೆ ಸವಾಲು ಹಾಕುತ್ತಿದ್ದೇವೆ ಪಕ್ಷ ವಿರೋದಿ ಚಟುವಟಿಕೆ ಮಾಡಿದ್ದಾರೆನ್ನುತ್ತಿರುವ ಬಿಜೆಪಿಗರು ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ತೋರಿಸಲಿ. ರಾಜಿನಾಮೆ ನೀಡದಿದ್ದರೆ ಶಾಸಕರ ಮನೆ ಎದುರು ಬಿಜೆಪಿ ಪ್ರತಿಭಟನೆ ನಡೆಸುತ್ತೇವೆ ಎನ್ನುತ್ತಿದ್ದಾರೆ ಹಾಗೇನಾದರು ಬಿಜೆಪಿ ಪ್ರತಿಭಟಿಸಿದರೆ ಅದೇ ಒಂದು ವಾರದೊಳಗೆ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸದಿದ್ದಲ್ಲಿ ಬಿಜೆಪಿ ಪಕ್ಷದ ಕಚೇರಿ ಎದುರು ಹೆಬ್ಬಾರ್ ಅಭಿಮಾನಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೆಬ್ಬಾರ್ ಅಭಿಮಾನಿ ಬಳಗದ ಪ್ರಮುಖರಾದ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರಾದ ಸುನಂದದಾಸ್, ಶಿರೀಷ್ ಪ್ರಭು, ತಾಲೂಕು ಪಂಚಾಯತ ಮಾಜಿ ಉಪಾಧ್ಯಕ್ಷೆ ಸುಜಾತಸಿದ್ದಿ, ಮಾವಿನ ಮನೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಜ್ರಳ್ಳಿ ಪಂಚಾಯತ ಅಧ್ಯಕ್ಷ ಭಗಿರಥ ನಾಯ್ಕ್, ಪಟ್ಟಣ ಪಂಚಾಯತ ಸದಸ್ಯರಾದ ಪುಷ್ಪಾ ನಾಯ್ಕ್, ಸತೀಶ್ ಶಿವಾನಂದ ನಾಯ್ಕ್, ರವಿ ಪಾಟಣ್ಕರ್ ಪ್ರಮುಖರಾದ ಆನಂದ್ ರಾಯ್ ಗೊಳಸಂಗಿ, ಎಂ.ಆರ್.ಹೆಗಡೆ ತಾರೆಹಳ್ಳಿ, ದತ್ತು ನಾಯ್ಕ್ ಕುಂದರಗಿ, ಗೋಪಾಲಸಿದ್ದಿ, ಸುಬ್ರಹ್ಮಣ್ಯ ಗಾಂವ್ಕರ್ ಬಾಗಿನಕಟ್ಟಾ ಇನ್ನಿತರರು ಉಪಸ್ಥಿತರಿದ್ದರು.
Prathidvani Yellapura