
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪದ ದೊಡ್ಲಾ ಹಾಲಿನ ಡೈರಿ ಘಟಕದಲ್ಲಿ ಸುರಕ್ಷತೆಗೆ ಸಂಬಂದಿಸಿದಂತೆ ವಿವಿಧ ಸ್ಪರ್ಧೆಗಳು ಹಾಗು ಜಾಗೃತಿ ಕಾರ್ಯಕ್ರಮ ಜರುಗಿತು.

55ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ 2026 ಅಂಗವಾಗಿ ಡೋಡ್ಲಾ ಡೈರಿ ಲಿಮಿಟೆಡ್, ಕಿರವಟ್ಟಿ ಘಟಕ ವತಿಯಿಂದ ಎಲ್ಲಾ ಉದ್ಯೋಗಿಗಳು ಹಾಗೂ ಗುತ್ತಿಗೆ ಆಧಾರದ ಕಾರ್ಮಿಕರಿಗಾಗಿ ವಿವಿಧ ಸುರಕ್ಷತಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಗಳಲ್ಲಿ ಸುರಕ್ಷತಾ ಕ್ವಿಜ್, ಚಿತ್ರಕಲೆ, ಘೋಷವಾಕ್ಯ ಬರವಣಿಗೆ ಹಾಗೂ ರೋಲ್ ಪ್ಲೇ ಸ್ಕಿಟ್ ಒಳಗೊಂಡಿತ್ತು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕಾರ್ಮಿಕರಲ್ಲಿ ಕಾರ್ಯಸ್ಥಳದ ಸುರಕ್ಷತೆ ಹಾಗೂ ದೈನಂದಿನ ಜೀವನದಲ್ಲಿ ಸುರಕ್ಷತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಆಗಿತ್ತು.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕೆಎಸ್‌ಪಿಸಿಬಿ ಕಾರವಾರದ ಪರಿಸರ ಅಧಿಕಾರಿ ಸಂತೋಷ್ ಬಿ.ಕೆ.ಟ್ರೋಫಿಗಳನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಪರಿಸರ ಸಂರಕ್ಷಣೆ ಹಾಗೂ ಕಾರ್ಯಸ್ಥಳದ ಸುರಕ್ಷತೆ ಅತ್ಯಂತ ಮಹತ್ವವಾದದ್ದು ಮತ್ತು ಅದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಳಹರಿ ಪಿ – ಪ್ಲಾಂಟ್ ಮ್ಯಾನೇಜರ್, ಪ್ರಕಾಶ್ ಡಿ – ಅಸಿಸ್ಟೆಂಟ್ ಮ್ಯಾನೇಜರ್ HR & Admin ಸೇರಿದಂತೆ ಡೋಡ್ಲಾ ಡೈರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮವು ಕಾರ್ಮಿಕರು ಹಾಗೂ ಸ್ಥಳೀಯ ಸಮುದಾಯದಲ್ಲಿ ಸುರಕ್ಷತಾ ಜಾಗೃತಿ ಮೂಡಿಸಲು ಡೋಡ್ಲಾ ಡೈರಿ ಕೈಗೊಂಡ ಒಂದು ಮಹತ್ವದ ಪ್ರಯತ್ನವಾಗಿದೆ.






Prathidvani Yellapura