




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆಬಿರುವ ಒಂದರ ಪಕ್ಕ ಇಂದಿರುವ ಜೋಡುಕೆರೆ ಹೆಂಡ ಕುಡುಕರ ತಾಣ, ಪ್ಲಾಸ್ಟಿಕ್ ತ್ಯಾಜ್ಯದ ಗುಡಾಣವಾಗಿ ನೀರೆಲ್ಲಾ ವಿಷಕಾರಿಯಾಗಿಸುತ್ತಿದ್ದು ಕಂಡು ಕಾಣದಂತೆ ನಿತ್ಯ ಅದರ ಪಕ್ಕದಲ್ಲೆ ತಿರುಗುವ ಪ್ರಜ್ಞಾವಂತ ನಾಗರಿಕರ ಕಂಡು ನೀರೊಳಗೆ ಕಣ್ಣೀರಿಡುತ್ತಿದೆ ಜೋಡುಕೆರೆ.

ಪಟ್ಟಣದ ಅತ್ಯಂತ ಸುಂದರ ಕೆರೆಗಳು ಅಂತರ್ಜಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕೆರೆಗಳ ಒಡಲಿಗೆ ವಿಷಕಾರಿ ಪ್ಲಾಸ್ಟಿಕ್ ತ್ಯಾಜ್ಯ ಸುರಿದು ಜಲದೊಡಲಿಗೆ ಕೊಳ್ಳಿ ಇಡುವವರ ವಿರುದ್ದ ಕಠಿಣ ಕ್ರಮವಾಗಬೇಕಿದೆ.


ನೀರಿಗೆ ವಿಷಕಾರಿ ತ್ಯಾಜ್ಯ ಸುರಿಯುವವರ ಪಕ್ಕ ಮಾಹಿತಿ ಸಿಕ್ಕಿ ಅಂತಹವರನ್ನು ಬಂಧಿಸಿದರೆ ಜಾಮೀನು ರಹಿತ ಪ್ರಕರಣ ದಾಖಲಾಗಬೇಕು ಕ್ರಿಮಿನಲ್ ಕೇಸ್ ದರ್ಜಾಗಬೇಕಿದೆ. ಇಂತಹ ಪ್ರಕರಣಗಳ ಶಿಕ್ಷೆ ಇನ್ನೊಬ್ಬರಿಗೆ ಪಾಠವಾಗಬೇಕಿದೆ. ಪ್ರತಿಧ್ವನಿ ಕಳಕಳಿ
ಸಂಬಂಧಿಸಿದ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಮನುಷ್ಯ ಸೃಷ್ಟಿ ಮಾಡಲಾರದ ನಿಸರ್ಗ ಕೊಡುಗೆಯ ಮೇಲಿನ ದಾಳಿ ಮನು ಕುಲ ಒಪ್ಪುವಂತಹದ್ದಲ್ಲ. ಈ ದಿಸೆಯಲ್ಲಿ ಶಾಲಾ ಕಾಲೇಜು, ಸಂಘ ಸಂಸ್ಥೆಗಳ, ಧಾರ್ಮಿಕ ಕೇಂದ್ರಗಳ ಪ್ರಮುಖ ಸ್ಥಳಗಳಲ್ಲಿ ವಿಶೇಷವಾಗಿ ನೀರಿನ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಪ್ರತಿಧ್ವನಿ ಕಳಕಳಿ
ಮೊದಲಿಗೆ ಕೆರೆಯ ಸುತ್ತ ತಡೆ ಬೇಲಿ ನಿರ್ಮಿಸಿ ಪ್ಲಾಸ್ಟಿಕ್ ತ್ಯಾಜ್ಯ ಸುರಿಯುವುದನ್ನು ತಡೆಯಬೇಕಿದೆ ಅಲ್ಲದೆ ಇದೇ ದಡದ ಮೇಲೆ ಪುಟ್ಟ ಪುಟ್ಟ ಮಕ್ಕಳು ಪ್ರೀ ನರ್ಸರಿ ಇಂದ ಎಸ್.ಎಸ್.ಎಲ್ ಸಿ ವರೆಗು ಓದುವ ಮಕ್ಕಳು ಮದರ್ ಥೆರೆಸ ಮತ್ತು ಹೋಲಿ ರೋಜರಿ ಶಾಲೆಗಳಿಗೆ ನಿತ್ಯ ಸಂಚರಿಸುತ್ತಾರೆ ಆಕಸ್ಮಿಕವಾಗಿ ಪುಟ್ಟ ಮಕ್ಕಳು ತಮಾಷೆ ಮಾಡುತ್ತ ತಳ್ಳಿದರೆ ಅವಘಡ ಸಂಭವಿಸುವುದು ನಿಶ್ಚಿತವಾಗಿದೆ. ಈ ಎಲ್ಲಾ ಕಾರಣಗಳಿಂದ ಜೋಡುಕೆರೆಗೆ ತಡೆ ಬೇಲಿ ನಿರ್ಮಿಸುವುದು ಸೂಕ್ತವಾಗಿದೆ ಎಂಬುದು ನಾಗರಿಕರ ಸದಾಭಿಪ್ರಾಯವಾಗಿದೆ.

ಬಿಸಿಲಿನ ಝಳಕ್ಕೆ ಕಾದು ಕೆಂಡವಾದ ಇಂತಹ ಸಂದರ್ಭದಲ್ಲಿಯು ಸಾಕಷ್ಟು ನೀರು ತನ್ನೊಡಲ್ಲಿಟ್ಟುಕೊಂಡು ಪಶು,ಪಕ್ಷಿ,ಪ್ರಾಣಿಗಳಿಗೆ ದಾಹ ನೀಗಿಸುತ್ತ ಸುತ್ತಮುತ್ತಲಿನ ನೂರಾರು ಕೊಳವೆ ಬಾವಿಗಳಿಗೆ ಈಗಲು ಅಂತರ್ಜಲ ಪೂರೈಸಿ ಪಟ್ಟಣದ ಜನರ ನೀರಿನ ಅವಶ್ಯಕತೆ ಪೂರೈಸುತ್ತಿರುವ ಜೋಡುಕೆರೆ ಮತ್ತು ಇನ್ನುಳಿದ ಇತರೆ ಕೆರೆಗಳು ಯಲ್ಲಾಪುರ ಪಟ್ಟಣದ ಮಟ್ಟಿಗೆ ದೇವಗಂಗೆಯಂತೆ ಅಂತಹ ಗಂಗೆಯ ಒಡಲಿಗೆ ವಿಷವಿಕ್ಕುವ ಮಂದಿಯನ್ನು ಕಂಡರೆ ತಕ್ಕ ಪಾಠ ಕಲಿಸಿ ಮತ್ತು ಸಂಬಂಧಿಸಿದ ಇಲಾಖೆ ಅಥವ ಪೊಲೀಸ್ ಠಾಣೆಗೆ ದೂರು ನೀಡಿ.
ಸತೀಶ್ ಶಿವಾನಂದ ನಾಯ್ಕ
ಮಂಜುನಾಥ ನಗರ ವಾರ್ಡ್ ಸದಸ್ಯ



Prathidvani Yellapura