




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಲ್ಲಾಪುರ ಸ.ಪ.ಪೂ.ಕಾಲೇಜಿನ 296ವಿದ್ಯಾರ್ಥಿಗಳಲ್ಲಿ 267 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.91.43 ಫಲಿತಾಂಶ ಬಂದಿದೆ.

ಕಲಾ ವಿಭಾಗದ 115 ರಲ್ಲಿ 101 ವಿದ್ಯಾರ್ಥಿಗಳು (87.82%) ; ವಾಣಿಜ್ಯ ವಿಭಾಗದ 127 ರಲ್ಲಿ 114 ವಿದ್ಯಾರ್ಥಿಗಳು (89.76%) ; ವಿಜ್ಞಾನ ವಿಭಾಗದ 42 ರಲ್ಲಿ 41ವಿದ್ಯಾರ್ಥಿಗಳು (96.29%) ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದ ಜನಾಬಾಯಿ ಕೊಕರೆ 574 ಪ್ರಥಮ, ಸುಜಾತಾ ಸಿಂಧೆ 569 ದ್ವಿತೀಯ, ನತಾಲಿಯಾ ಲೊಬೊ 558 ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದ ಸ್ವಾತಿ ನಂದಿ 582 ಪ್ರಥಮ, ಜನ್ನಿ ಹುಂಬೆ 567 ದ್ವಿತೀಯ , ಆಕಾಶ ಪೂಜಾರಿ 554 ತೃತೀಯ ಸ್ಥಾನ ಪಡೆದಿದ್ದಾರೆ .

ವಿಜ್ಞಾನ ವಿಭಾಗದ ಪ್ರೇಮಾ ಕುಣಬಿ 551 ಪ್ರಥಮ , ಪ್ರತಿಮಾ ಪಟಗಾರ 546 ದ್ವಿತೀಯ , ವರ್ಷಾ ಮರಾಠಿ 538 ಅಂಕಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಎಸ್.ಟಿ.ವೈದ್ಯ ತಿಳಿಸಿದ್ದು ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಮಂಡಳಿ , ಪ್ರಾಚಾರ್ಯರು, ಉಪನ್ಯಾಸಕರು, ಊರ ನಾಗರಿಕರು ಅಭಿನಂದಿಸಿದ್ದಾರೆ.


Prathidvani Yellapura