

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹಿರಿಯ ಪತ್ರಕರ್ತರು ಸಮಾಜಮುಖಿ ಚಿಂತಕರು ಶಂಕರ ಭಟ್ಟ ತಾರೀಮಕ್ಕಿ ಅವರ ಪುತ್ರ ಟಿ.ಎಸ್ ತಿಲಕರಾಜ್ ಅವರು ಭೌತಶಾಸ್ತ್ರದಲ್ಲಿ ಎಂ.ಎಸ್.ಸಿ. ಪದವಿ ಪಡೆದು ‘ಸ್ಪೆಕ್ಟೊಸ್ಕೋಪಿಕ್ ಸ್ಟಡಿ ಆಫ್ ಸಮ್ ಫ್ಲೊರೆಸೆಂಟ್ ನ್ಯಾನೊಮಟಿರಿಯಲ್ಸ್ ಆ್ಯಂಡ್ ಆರ್ಗಾನಿಕ್ ಮೊಲೆಕ್ಯುಲ್ಸ್’ ಎಂಬ ವಿಷಯದ ಕುರಿತ ಮಹಾ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿ ಘೋಷಿಸಿದೆ.

ಕರ್ನಾಟಕ ವಿ.ವಿ.ಯ ಭೌತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಸಂಜೀವ ಇನಾಮದಾರ್ ತಿಲಕರಾಜ ಅವರಿಗೆ ಮಾರ್ಗದರ್ಶನ ನೀಡಿದ್ದರು.

ಕನ್ನಡಪ್ರಭ ಪತ್ರಿಕೆಯ ತಾಲೂಕಾ ವರದಿಗಾರ ಶಂಕರ ಭಟ್ಟ ತಾರೀಮಕ್ಕಿ ಮತ್ತು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಅವರ ಪುತ್ರನಾಗಿರುವ ತಿಲಕರಾಜ್ಗೆ ವಿ.ವಿ.ಯ ಘಟಿಕೋತ್ಸವದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ವಿ.ವಿ. ಆದೇಶಪತ್ರದಲ್ಲಿ ತಿಳಿಸಿದೆ.
ತಿಲಕರಾಜ್ ಪ್ರಸ್ತುತ ಬೆಂಗಳೂರಿನಲ್ಲಿರುವ ರಾಜ್ಯ ವಿಧಿ ವಿಜ್ಞಾನ ಇಲಾಖೆಯಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Prathidvani Yellapura