Breaking News

ಭಗವದ್ಗೀತಾ ಪರೀಕ್ಷೆಯಲ್ಲಿ ಬಂಗಾರದ ಸಾಧನೆ ಮಾಡಿದ ಯಲ್ಲಾಪುರ ತಾಲೂಕಿನ ಆನಗೋಡು ಅಗ್ಗಾಸಿಮನೆ ನೇತ್ರಾವತಿ ಕೃಷ್ಣ ಭಟ್

ಪ್ರತಿಧ್ವನಿ,ಯಲ್ಲಾಪುರ: ಬೆಂಗಳೂರಿನ ಗೀತಾ ಪರಿವಾರವು ನಾಲ್ಕು ವಿಭಾಗಗಳಲ್ಲಿ ನೆಡೆಸುವ ಭಗವದ್ಗೀತಾ ಆನ್ ಲೈನ ಪರೀಕ್ಷೆಯಲ್ಲಿ ತಾಲೂಕಿನ ಆನಗೋಡು ಅಗ್ಗಾಸಿಮನೆಯ ನೇತ್ರಾವತಿ ಕ್ರಷ್ಣ ಭಟ್ಟ ಗೀತಾ ಇವರು ೬೦೦ ಅಂಕಕ್ಕೆ ೫೯೮ ಅಂಕ ಪಡೆದು ಬಂಗಾರದ ಪದಕ ಪಡೆದಿದ್ದಾರೆ.


ಇವರ ಸಾಧನೆಗೆ ಶ್ರೀಮಾತಾ ವಿವಿಧೋದ್ದೇಶಗಳ ಸೌಹರ್ದ ಸಹಕಾರಿ ಸಂಘದ ಅದ್ಯಕ್ಷ ಜಿ ಎನ್ ಹೆಗಡೆ ಹಿರೆಸರ, ಉಪಾಧ್ಯಕ್ಷ ಎಸ್ ಎಸ್ ಭಟ್ಟ ಅಖಿಲಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷ ಶಶೀಭೂಷಣ ಹೆಗಡೆ ನಿರ್ಧೇಶಕ ಶ್ರೀಪಾದ ರೈಸದ, ಶ್ರೀಪಾದ, ಕೆ ಎಸ್ ಭಟ್ಟ ಆನಗೋಡ, ಪ್ರಸಾದ ಹೆಗಡೆ, ನಾರಾಯಣ ಭಟ್ಟ ಕರಿಕಲ್,ಗಣೇಶ ಹೊನ್ನಾವರ ಶುಭ ಹಾರೈಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *