ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ ಯಲ್ಲಾಪುರ : ಭಾರತದ ಬ್ರಾಹ್ಮಣರ ಸ್ಥಿತಿ ಹೇಗಿದೆ ಎಂಬುದರ ಕುರಿತು 2006 ರಲ್ಲಿ ಪ್ರೇಂಚ್ ಇತಿಹಾಸಕಾರರೊಬ್ಬರು ತಮ್ಮ ವಿಶೇಷ ಲೇಖನದ ಮೂಲಕ ಗಮನ ಸೆಳೆದಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗಿಂತಲೂ ಹಿಂದುಳಿದ ಬ್ರಾಹ್ಮಣರೇ ಇದ್ದಾರೆಂಬುದನ್ನು ಪ್ರೇಂಚ್ ವಿಜ್ಞಾನಿ ಆಧಾರ ಸಹಿತ ಬರೆದಿದ್ದಾರೆ. ಅಂದರೆ ಲಕ್ಷಾಂತರ ಬ್ರಾಹ್ಮಣರು ಬಿಪಿಎಲ್ ಕಾರ್ಡ್ ಹೊಂದಿರುವ ನಾಗರಿಕರಿಗಿಂತಲೂ ಕೆಳಮಟ್ಟದಲ್ಲಿದ್ದಾರೆ. ಆದರೂ ಬ್ರಾಹ್ಮಣರ ಸಂಘಟನೆ ಪ್ರಬಲವಾಗದಿರುವುದು ಮತ್ತು ಇರುವ ಬ್ರಾಹ್ಮಣರಲ್ಲಿ ಕೆಲವು ಪ್ರದೇಶದ ಕೇಲವೇ ಬ್ರಾಹ್ಮಣರು ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದನ್ನು ವಿವರಿಸಿದ್ದಾರೆ. ನಮ್ಮ ಬುದ್ದಿಜೀವಿಗಳು ಮತ್ತು ಪ್ರಗತಿಪರರೆಂದು ಹೇಳಿಕೊಳ್ಳುವವರು ಇದನ್ನು ಓದಿ ನಂತರ ಮಾತನಾಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಹೇಳಿದರು.

ಅವರು ತಾಲೂಕಿನ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಗುರ್ತೇಗದ್ದೇಯ ವೆಂಕಟರಮಣ ಭಟ್ಟರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರ 2018 ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಥಿಕವಾಗಿ ಹಿಂದುಳಿದ (ಒಬಿಸಿ) ಬ್ರಾಹ್ಮಣರಿಗೆ ನೌಕರಿ, ಶಿಕ್ಷಣ ಸೇರಿದಂತೆ ಶೇ.10 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದೆ. ಇದನ್ನು ರಾಜ್ಯಸರ್ಕಾರಗಳು ಸಮರ್ಪಕವಾಗಿ ಜಾರಿಗೆ ತರದಿರದ ಕಾರಣ, ತ್ರಿಮತಸ್ಥ ಬ್ರಾಹ್ಮಣರೆಲ್ಲರೂ ಸೇರಿ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆಯಿಂದ ಮಾತ್ರ ಅಪೇಕ್ಷಿತ ಸೌಲಭ್ಯಗಳನ್ನು ಪಡೆಯಬಹುದೆಂದು ಅರಿತು, ಸಂಘಟನೆಯನ್ನು ಬಲಗೊಳಿಸಬೇಕಾಗಿದೆ ಎಂದರು.
ವಿದ್ವಾನ್ ಗಣಪತಿ ಭಟ್ಟ ಮಾಗೋಡು , ಯಲ್ಲಾಪುರ ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಶ್ರೀಪಾದ ಭಟ್ಟ ಶಿರಸಿ, ಸಾಂದರ್ಭಿಕ ಮಾತನಾಡಿದರು, ಬ್ರಾಹ್ಮಣ ಪರಿಷತ್ತಿನ ಜಿಲ್ಲಾ ಸಂಚಾಲಕ ಎನ್.ಎಸ್.ಭಟ್ಟ , ನರಸಿಂಹ ಭಟ್ಟ ಗುರ್ತೇಗದ್ದೆ ಉಪಸ್ಥಿತರಿದ್ದರು. ವೆಂಕಟರಮಣ ಭಟ್ಟ ಗುರ್ತೇಗದ್ದೆ ಅಧ್ಯಕ್ಷತೆವಹಿಸಿದ್ದರು. ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.
Prathidvani Yellapura