Breaking News

ಭೂಕುಸಿತದ ಅಪಾಯದ ಹಿನ್ನೆಲೆ ಕೆಲವು ಫಾಲ್ಸ್ ಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆಯ ಸೂಚನೆಯಂತೆ ಕೆಲವು ಫಾಲ್ಸ್ ಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಬಹುದಾದ ಹಿನ್ನೆಲೆಯಲ್ಲಿ ಪ್ರವೇಶ ನಿಷೇದಿಸಲಾಗಿದೆ. ಇಡಗುಂದಿ ವಲಯ ವ್ಯಾಪ್ತಿಯಲ್ಲಿರುವ ಕುಳಿಮಾಗೋಡು ಜಲಪಾತ, ಕಾನೂರು ಜಲಪಾತ, ಹಾಗೂ ಶಿರ್ಲೆ ಜಲಪಾತಗಳ ಮಾರ್ಗಗಳಲ್ಲಿ ಭೂ ಕುಸಿತದ ಭೀತಿ ಇದ್ದು ಆಗಸ್ಟ್ ತಿಂಗಳ ಕೊನೆಯವರೆಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. …

Read More »

ಯಲ್ಲಾಪುರದ ಹೆಸರಾಂತ ಗುತ್ತಿಗೆದಾರ ಬಿ ಸತ್ಯನ್ ಅವರಿಗೆ ಮಾತೃವಿಯೋಗ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಾರದಾಗಲ್ಲಿ ನಿವಾಸಿ ಅಚ್ಚಾ ಕಂಫಟ್೯ ಮಾಲಿಕ ಹೆಸರಾಂತ ಗುತ್ತಿಗೆದಾರ ಸಮಾಜ ಸೇವಕ ಬಿ.ಸತ್ಯನ್ ಅವರಿಗೆ ಮಾತೃವಿಯೋಗವಾಗಿದೆ.ಸತ್ಯನ್ ಅವರ ತಾಯಿ ದೇವಕಿ ವಿ ನಾಯ್ಕ್ ಶುಕ್ರವಾರ ಇಹಲೋಕ ತ್ಯಜಿಸಿದ್ದು ಅವರಿಗೆ 85 ವರ್ಷ ವಯಸ್ಸಾಗಿತ್ತು ವಯೋ ಸಹಜದಿಂದ ನಿಧನರಾಗಿದ್ದು ಎರಡು ಹೆಣ್ಣು ಒಂದು ಗಂಡು ಮಕ್ಕಳನ್ನು ಹಾಗು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.

Read More »

ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ರಜೆ ಸೂಕ್ತ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಾದ್ಯಂತ ಮೂರ್ನಾಲ್ಕು ದಿನಗಳಿಂದ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿದೆ. ತಂಪಾದ ಗಾಳಿ ಎಲ್ಲೆಡೆ ಬೀಸುತ್ತಿದೆ. ಮರದ ರೆಂಬೆ ಕೊಂಬೆಗಳು ಕೆಲವೆಡೆ ಬೃಹತ್ ಗಾತ್ರದ ಮರಗಳು ಧರೆಗುರುಳುತ್ತಿದೆ. ಜೋರಾದ ಗಾಳಿ ಬೀಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಕನಿಷ್ಠ ಎರಡು ಅಥವ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ಬಹುಮುಖ್ಯವಾಗಿ ಅಂಗನವಾಡಿಗಳಿಗೆ ಸರ್ಕಾರ ರಜೆ ಘೋಷಿಸುವುದು ಸೂಕ್ತವಾಗಿದೆ ಎಂಬುದು …

Read More »

ಯಲ್ಲಾಪುರದ ಹಾಲ್ನೊರೆಯ ಜಲಪಾತಗಳೆಲ್ಲಾ ಮಳೆಯ ಆರ್ಭಟಕ್ಕೆ ರುದ್ರ ರಮಣೀಯವಾಗಿದೆ..!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿ ಸೊಬಗು, ಕಣ್ಮನ ತಣಿಸುವ ಬೆಡಗು, ಹಚ್ಚಹಸಿರಿನ ಕಾನನ ಜಲಪಾತಗಳ ನರ್ತನ ಮಳೆಗಾಲದಲ್ಲಿ ಉತ್ತರ ಕನ್ನಡ ನೋಡಲು ಬಲು ಸುಂದರ ಅದರಲ್ಲು ಯಲ್ಲಾಪುರ ತಾಲೂಕಿನ ಸಾತೋಡ್ಡಿ, ಮಾಗೋಡು ಶಿರ್ಲೆ, ಗಣೇಶ್ ಪಾಲ್ , ಇನ್ನಿತರ ಜಲಪಾತಗಳು ನೋಡಲು ಮನಮೋಹಕವಾಗಿರುತ್ತದೆ.ತಾಲ್ಲೂಕಿನ ಜಲಪಾತಗಳಲ್ಲಿ ಅತ್ಯಂತ ಜನಪ್ರಿಯವಾದ ಪ್ರವಾಸಿಗರ ನೆಚ್ಚಿನ ಜಲಪಾತಗಳಲ್ಲಿ ಸಾತೊಡ್ಡಿ ಮತ್ತು ಮಾಗೋಡು ಅಗ್ರಸ್ಥಾನ ಪಡೆದ ಜಲಪಾತಗಳಾಗಿವೆ. ಮಾಗೋಡು ಜಲಪಾತ …

Read More »

ಪ್ರತಿ ಮಕ್ಕಳ ಹುಟ್ಟು ಸಾರ್ಥಕಗೊಳಿಸಲು ಗಿಡ‌ನೆಟ್ಟು ಹುಟ್ಟು ಹಬ್ಬದಾಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿವಾಡದಲ್ಲಿ ಶಾಲಾ ಮಕ್ಕಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸ ಲಾಗುತ್ತಿದೆ.ಶಾಲೆಯ ಆವರಣದಲ್ಲಿ ಕಳೆದ ವರ್ಷ ವಿಧಾನ ಪರಿಷತ್ತಿನ ಸದಸ್ಯ ಶಾಂತರಾಮ್ ಸಿದ್ದಿ ಹಾಗೂ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಸುಮಾರು ಐವತ್ತರಿಂದ ಅರವತ್ತು ಗಿಡಗಳನ್ನು ನೆಡಲಾಗಿತ್ತು. ಅವುಗಳನ್ನು ಉಳಿಸಿ ಬೆಳೆಸಲು ಶಿಕ್ಷಕರಾದ ಗಂಗಾಧರ್ ಲಮಾಣಿ ಹಾಗು ಶೋಭಾ ಗುನಗಿ, ವಾಣಿ ನಾಯ್ಕ ಸೇರಿ ಶಾಲೆಯಲ್ಲಿ …

Read More »

ಸ್ಥಗಿತಗೊಂಡಿರುವ ಬೇಡ್ತಿ ಕುಡಿಯುವ ನೀರಿನ ಯೋಜನೆಯ ಬೇಡ್ತಿ ತಟದ ಜಾಕ್ ವೆಲ್ ಗೆ ಮುಖ್ಯಾಧಿಕಾರಿ ಭೇಟಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಕೋಟ್ಯಾಂತರ ಮೌಲ್ಯ ಸಾರ್ವಜನಿಕ ತೆರಿಗೆ ಹಣದಲ್ಲಿ ಅನುಷ್ಟಾನಗೊಂಡು ಕಾರಣಾಂತರಗಳಿಂದ ಯೋಜನೆ ಸ್ಥಗಿತಗೊಂಡ ನಂತರ ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಬಿದ್ದು ಹಾಳಾಗುತ್ತಿರುವುದು. ನಿಧಾನವಾಗಿ ಕಣ್ಮರೆಯಾಗುವುದರೊಂದಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. . ಈ ಹಿನ್ನೆಲೆಯಲ್ಲಿ ಗುರುವಾರ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಸುಭಾಷ್ ಗಾವಡೆ ಬೇಡ್ತಿ ನದಿ ತಟದಲ್ಲಿರುವ ಕುಡಿಯುವ ನೀರು ಸರಬರಾಜು ಘಟಕಕ್ಕೆ ಭೇಟಿ …

Read More »

ಮಳೆ ಅವಾಂತರ ಸರ್ಕಾರಕ್ಕೆ ವರದಿ ನೀಡುವ ಕಂದಾಯ ಅಧಿಕಾರಿಗಳ ಮನೆಗಳೆ ಜಲಾವೃತ.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ನೂತನ ಆಡಳಿತ ಸೌಧದ ಹಿಂಭಾಗ ಕಂದಾಯ ಇಲಾಖೆಯ ಅಧಿಕಾರಿಗಳ ವಸತಿಗೃಹಗಳಿದ್ದು ಮಂಗಳವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದೆ. ವಸತಿ ಗೃಹಗಳು ಜಲಾವೃತವಾಗಿರುವುದು ಗಟಾರವಿಲ್ಲದೇ ಕಾಂಕ್ರೀಟ್ ರಸ್ತೆಯೊಂದನ್ನು ನಿರ್ಮಿಸಿರುವುದೇ ಪ್ರಮುಖ ಕಾರಣವಾಗಿದ್ದು ಸಂಬAಧಿಸಿದ ಇಲಾಖೆ ತುರ್ತಾಗಿ ನೀರು ಹೊರ ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲವಾದಲ್ಲಿ ಮಳೆಯಿಂದಾದ ಹಾನಿಯ ವರದಿಗೆ ತೆರಳುವ ಕಂದಾಯ ಇಲಾಖೆಯ ಅಧಿಕಾರಿಗಳ ಮನೆಗಳೇ …

Read More »

ಸ್ಪೋಕನ್ ಇಂಗ್ಲೀಷ್ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ – ಶ್ರೀರಂಗ ಕಟ್ಟಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಇಂದಿನ ದಿನಗಳಲ್ಲಿ ಪಠ್ಯಕ್ರಮ ಅಷ್ಟೇ ಅಲ್ಲದೇ ವಿವಿಧ ಕೌಶಲಗಳನ್ನು ಕಲಿತುಕೊಳ್ಳುವುದರಿಂದ ಸರ್ಕಾರಿ ಕೆಲಸಗಳ ಮೇಲೆ ಅವಲಂಬಿತರಾಗದೆ ಸ್ವಂತ ಉದ್ಯೋಗ ಮಾಡಬಹುದಾಗಿದೆ ಸ್ಪೋಕಲನ್ ಇಂಗ್ಲೀಷ್ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದು ವಿಶ್ರ‍್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಹೇಳಿದರು.ಅವರು ಪಟ್ಟಣದ ಸರ್ಕಾರಿ ಕಾಲೇಜು ಹಾಗೂ ಪಟ್ಟಣದ ಎನ್.ಜಿ.ಒ ಸಂಸ್ಥೆ ಮಾತೃಭೂಮಿ ಸೇವಾ ಪ್ರತಿಷ್ಠಾನದ ಜೊತೆಗೆ ಬ್ಯೂಟಿಷಿಯನ್ ಕೋರ್ಸ್ ಹಾಗೂ ಸ್ಪೋಕನ್ …

Read More »

ಯಲ್ಲಾಪುರ ತಾಲೂಕಿನಲ್ಲಿ ಉತ್ತಮ ಮಳೆಗೆ ಕೆಲವೆಡೆ ಅವಾಂತರ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಳೆದೆರಡು ದಿನಗಳಿಂದ ಘಟ್ಟದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಳ್ಳ-ಕೊಳ್ಳಗಳು, ನದಿ-ತೊರೆಗಳು ತುಂಬಿ ಹರಿಯುತ್ತಿವೆ. ಮಂಗಳವಾರ 140.6ಮಿ.ಮೀ ಮಳೆಯಾಗಿದ್ದು ಸುರಿದ ಧಾರಾಕಾರ ಮಳೆಗೆ ತಾಲೂಕಿನ ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ. ಹಾಸಣಗಿ ಪಂಚಾಯತ ವ್ಯಾಪ್ತಿಯ ಕೊಟಗೇರಿ ಕರಿಯಮ್ಮ ದೇವಿ ದೇವಸ್ಥಾನದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದು ದೇವಸ್ಥಾನ ಸಂಪೂರ್ಣ ಹಾನಿಗೊಳಗಾಗಿದೆ. ಪ.ಪಂ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ವೆಂಕಟ್ರಮಣ ಮಹಾಬಲೇಶ್ವರ ಭಟ್ಟ ಅವರಿಗೆ …

Read More »

ಗೋಡೆ ಉದುರುತ್ತಿದೆ ಪಾಠ ನಡೆಯುತ್ತಿದೆ ಮಾಡೆಲ್ ಶಾಲೆ ಮಕ್ಕಳ ಸ್ಥಿತಿ ದೇವರಿಗೆ ಪ್ರೀತಿ.

ಯಲ್ಲಾಪುರ ಗ್ರಾಮದೇವಿ‌ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದಾದ ಪಟ್ಟಣದಲ್ಲಿರುವ ಮಾದರಿ ಶಾಲೆ ಈಗಾಗಲೆ 100 ವರ್ಷ ಕ್ಕು ಅಧಿಕ ಕಾಲ ಗತಿಸಿದ್ದು ಕಟ್ಟಡದ ಗೋಡೆ ಶಿಥಿಲಾವಸ್ಥೆಯಲ್ಲಿದೆ ಮಂಗಳವಾರ ರಾತ್ರಿ ಸುರಿದ ಬಾರಿ ಮಳೆಗೆ ಗೋಡೆಯ ಮೇಲ್ಬಾಗದ ಮಣ್ಣು ಉದುರುತ್ತಿದ್ದು ಬೆಳಗ್ಗೆ ಮಕ್ಕಳು ಶಾಲೆಯೋಳಗೆ ಇರುವಾಗಲು ಗೋಡೆಯ ಮೇಲ್ಪದರ ಉದುರುತ್ತಿದೆ. ಇಂತಹ ಸಂಕಷ್ಟದಲ್ಲು ಮಕ್ಕಳಿಗೆ ಪಾಠಪ್ರವಚನ ನಡೆಯುತ್ತಿದೆ ಸದ್ಯ ಗೋಡೆ ಉದುರುತ್ತಿರುವ …

Read More »