

ಪ್ರತಿಧ್ವನಿ ಯಲ್ಲಾಪುರ : ಮಾನವನ ಬದುಕಿನಲ್ಲಿ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಗುಬ್ಬಚ್ಚಿಗಳ ಪಾತ್ರ ಮಹತ್ವದ್ದಾಗಿದೆ.
ಅತೀಯಾದ ರಾಸಾಯನಿಕಗಳ ಬಳಕೆ,ಆಧುನೀಕರಣದ ಅಳವಡಿಕೆ ಹಾಗೂ ಶಬ್ದ ಮಾಲಿನ್ಯಗಳಂತ ಕಾರಣಗಳಿಂದ ಗುಬ್ಬಚ್ಚಿಗಳ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಗುಬ್ಬಚ್ಚಿಗಳ ಸಂತಾನ ಅಭಿವೃದ್ಧಿಯ ಬಗ್ಗೆ ಗಂಭೀರ ಚಿಂತನೆ ಅತ್ಯಗತ್ಯವಾಗಿದೆ. ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ್ ಹೇಳಿದರು.

ಅವರು ತಾಲೂಕಿನ ಹಿತ್ಲಳ್ಳಿ ಸರಕಾರಿ ಪ್ರೌಢಶಾಲೆ ಯಲ್ಲಿ ಸ್ಪೇರೋ ಕಂಸೆರ್ವಶನ್ ಫೌಂಡೇಶನ್ ಹಾಗೂ ಅರಣ್ಯ ಇಲಾಖೆ ಹಾಗೂ ವನಸಿರಿ ವಿಜ್ಞಾನ ಸಂಘ & ಇಕೋ ಕ್ಲಬ್ ವತಿಯಿಂದ ಪರಿಸರದಲ್ಲಿ ಗುಬ್ಬಚ್ಚಿಗಳ ಮಹತ್ವ ಹಾಗೂ ಅವುಗಳ ಸಂರಕ್ಷಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗುಬ್ಬಚ್ಚಿಗಳು ಕ್ರಿಮಿಕೀಟಗಳ ನಿಯಂತ್ರಣಗೊಳಿಸುತ್ತವೆ, ಕೃಷಿ ಭೂಮಿಯಲ್ಲಿನ ಸಣ್ಣ ಸಣ್ಣ ಹುಳುಗಳನ್ನು ತಿನ್ನುತ್ತವೆ ಎಂದು ಹೇಳಿದರು.

ಗುಬ್ಬಚ್ಚಿಗಳ ಗಾತ್ರ ಚಿಕ್ಕದಾದರೂ ಅವುಗಳ ಪಾತ್ರ ಪರಿಸರಕ್ಕೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ನಂತರ ಗುಬ್ಬಚ್ಚಿಗಳ ವರ್ತನೆ,ಆಹಾರ ಪದ್ಧತಿ, ಜೀವನ ಶೈಲಿಯ ಕುರಿತು ವಿಧ್ಯಾರ್ಥಿಗಳಿಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡರು.

ಗುಬ್ಬಚ್ಚಿಗಳಿಂದ ಬೀಜ ಪ್ರಸರಣ ಕ್ರಿಯೆಯು ಹೇರಳವಾಗಿ ನಡೆಯುವುದು ಇದರಿಂದ ಸಸ್ಯಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುವುದೆಂದು ತಿಳಿಸಿದರು.
ಬೇಸಿಗೆಯ ಕಾಲದಲ್ಲಿ ಗುಬ್ಬಚ್ಚಿಗಳಿಗೆ ನೀರಿನ ದಾಹ ತೀರಿಸಲು ತಮ್ಮ ತಮ್ಮ ಮನೆಯ ಅಂಗಳದಲ್ಲಿ, ಮನೆಯ ತಾರಸಿಯ ಮೇಲೆ ನೀರಿನ ಸಣ್ಣ ಸಣ್ಣ ತೊಟ್ಟಿಗಳನ್ನು ನಿರ್ಮಿಸಿ ಗುಬ್ಬಚ್ಚಿಗಳಿಗೆ ಸಹಕರಿಸುವಂತೆ ವಿಧ್ಯಾರ್ಥಿಗಳಲ್ಲಿ ವಿನಂತಿಸಿದರು.

ನಂತರ ವಿಧ್ಯಾರ್ಥಿಗಳಿಗೆ ಗುಬ್ಬಚ್ಚಿಯ ಜೀವನ ಶೈಲಿಯ ಬಗ್ಗೆ ಒಂದು ವಿಡಿಯೋ ಪ್ರದರ್ಶನವನ್ನು ಮಾಡಿದರು.
ನಂತರ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಕೃತಕವಾಗಿ ಬಿದಿರಿನಿಂದ ತಯಾರಿಸಿದ ಪರಿಸರ ಸ್ನೇಹಿಯಾದ ಗೂಡುಗಳನ್ನು ಶಾಲೆಯ ಎಲ್ಲಾ ಶಿಕ್ಷಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ವಿತರಿಸಿದರು. ಈ ಸಂಧರ್ಭದಲ್ಲಿ ಹಿತ್ಲಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನೀತು ಹಬ್ಬು ಹಾಗೂ ಮಂಚಿಕೇರಿ ವಲಯ ಅರಣ್ಯಧಿಕಾರಿ ಬಸವರಾಜ್ ಬೋಚಳ್ಳಿ ಹಾಗೂ ಉಪವಲಯ ಅರಣ್ಯಧಿಕಾರಿಗಳಾದ ಬೀರಪ್ಪ, ಜ್ಯೋತಿ,ಸಲ್ಮಾನ್ ಹಾಗೂ ಸಿಬ್ಬಂದಿಗಳಾದ ವಿಶ್ವನಾಥ್, ಶಂಕರ್, ರಾಜಶೇಖರ್ ಹಾಜರಿದ್ದರು. ಶಿಕ್ಷಕ ಜೋಶಿ ಕಾರ್ಯಕ್ರಮ ನಿರೂಪಿಸಿದರು..



Prathidvani Yellapura