
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಮುರಾರ್ಜಿ ವಸತಿ ಶಾಲೆ ಹಿಂಬಾಗದ ನಿವಾಸಿಗಳ ಮನೆಗಳಿಗೆ ವಿದ್ಯುತ್ ಪೂರೈಕೆಗೆ .ಎಂ.ಎಲ್.ಸಿ ಶಾಂತಾರಾಮ್ ಸಿದ್ದಿ ವಿಧಾನ ಪರಿಷತ್ ನಲ್ಲಿ ಆಗ್ರಹಿಸಿದ್ದು, ವಿದ್ಯುತ್ ನೀಡುವುದಾಗಿ ಇಂಧನ ಸಚಿವರು ಭರವಸೆ ನೀಡಿದ್ದಾರೆ.

ಬಹು ವರ್ಷಗಳಿಂದ ಈ ಪ್ರದೇಶದಲ್ಲಿ ಜನವಸತಿ ಇದ್ದು ಹೆಚ್ಚಿನವರು ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರೇ ವಾಸಿಸುತ್ತಿದ್ದಾರೆ ಅವರ ಬಳಿ ಆದಾರ್ ಕಾಡ್೯,ಒಟರ್ ಐ.ಡಿ, ರೇಶನ್ ಕಾಡ್೯ ಹಾಗು ಪಟ್ಟಣ ಪಂಚಾಯತ ನೀರಿನ ವ್ಯವಸ್ಥೆಯು ಇದೆ ಇಷ್ಟೆಲ್ಲಾ ನೀಡಿರುವುದು ಸರ್ಕಾರವೆ ಆದಮೇಲೆ ವಿದ್ಯುತ್ ನೀಡಲು ಪುರಾವೆ ಏಕೆ ಬೇಕು ಎಂದು ಶಾಂತಾರಾಮ್ ಸಿದ್ದಿಯವರು ವಿಧಾನಪರಿಷತ್ ಕಲಾಪದಲ್ಲಿ ಇಂಧನ ಸಚಿವರಿಗೆ ಪ್ರಶ್ಞಿಸಿದರು.

ಇದಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ.ಜಾಜ್೯ ಈ ಸ್ಥಳದ ವಾರಸುದಾರರು ಎಂದು ಹೇಳಿಕೊಳ್ಳುವವರು ವಿದ್ಯುತ್ ನೀಡಬೇಡಿ ಎಂದು ಅರ್ಜಿ ನೀಡಿರುವುದರಿಂದ ವಿದ್ಯುತ್ ನೀಡಿಲ್ಲ ಮತ್ತು ಈ ಪ್ರಕರಣ ನನ್ನ ಗಮನಕ್ಕು ಬಂದಿರಲಿಲ್ಲ ಎಂದರು, ಅದಕ್ಕೆ ಪ್ರತಿಕ್ರಿಯಿಸಿದ ಶಾಂತಾರಾಮ್ ಸಿದ್ದಿ ಯವರು ವಾರಸುದಾರಿಕೆ ವಿಷಯ ನ್ಯಾಯಾಲಯದಲ್ಲಿದ್ದು ಅದಕ್ಕು ವಾಸಿಸುತ್ತಿರುವ ಕುಟುಂಬಗಳಿಗೆ ವಿದ್ಯುತ್ ನೀಡುವುದಕ್ಕು ಸಂಬಂಧವಿಲ್ಲ ಅಲ್ಲದೆ ಇಂತಹ ಪರಿಸ್ಥಿತಿ ಇಂದಿಗು ಇರುವುದು ನಾಚಿಕೆಗೇಡಿನ ಸಂಗತಿ ಎಂದರು.ಇದಕ್ಕೆ ಉತ್ತರಿಸಿದ ಸಚಿವರು ಇದೀಗ ಮಾಹಿತಿ ದೊರೆತಿದ್ದು ಹೆಸ್ಕಾಂ ಎಂಡಿ.ಅವರಿಗೆ ಸೂಚನೆ ನೀಡಿ ವಿದ್ಯುತ್ ನೀಡಲು ಸೂಚಿಸುತ್ತೇನೆ ಎಂದಿದ್ದಾರೆ.
ಈ ಮೂಲಕ ದಶಕಗಳ ಕಗ್ಗತ್ತಲು ಕಳೆದು ಬೆಳಕು ಮೂಡಿದಂತಾಗಿದೆ.
Prathidvani Yellapura