
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ ವರದಿ,
ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಆ,14 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬಾಲಗೋಪಾಲ ಮತ್ತು ರಾಧಾಕೃಷ್ಣ ವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ಸಭಾಭವನದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶೈಲಜಾ ಮಾಪ್ಸೇಕರ್ ಸ್ವಾಗತಿಸಿದರು.

ಶ್ರೀನಿಧಿ ಮಲ್ಯ ಮತ್ತು ಸಂಗಡಿಗರು ಸ್ವಾಗತ ನೃತ್ಯ ಮಾಡಿದರು.
ನಂತರ ವಿದ್ಯಾರ್ಥಿಗಳು ಬಾಲ ಗೋಪಾಲ ಮತ್ತು ಸುಂದರವಾದ ರಾಧಾ ಮತ್ತು ಕೃಷ್ಣ ವೇಷದಲ್ಲಿ ವೇದಿಕೆಗೆ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಬಣ್ಣಬಣ್ಣದ ಪರಿಕರಗಳು, ಆಭರಣಗಳು ಹಾಗೂ ಮುಖವರ್ಣಗಳಿಂದ ಮಕ್ಕಳು ಬೃಂದಾವನದ ರಾಧಾಕೃಷ್ಣರಂತೆ ಕಂಗೊಳಿಸಿದರು. ಪ್ರೇಕ್ಷಕರು ಪೋಷಕರು ಹರ್ಷದಿಂದ ಕರತಾಡನದ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು.
ಕೊನೆಯಲ್ಲಿ ವಿಜೇತರ ಹೆಸರುಗಳನ್ನು ಘೋಷಿಸಿ ಬಹುಮಾನಗಳನ್ನು ಪ್ರಧಾನ ಮಾಡಲಾಯಿತು. ಸಹ ಶಿಕ್ಷಕಿ ದೇವಕಿ ಕಾಮತ ವಂದಿಸಿದರು.
ರಂಗು ರಂಗಾದ ಬಾಲಗೋಪಾಲ ಮತ್ತು ರಾಧಾಕೃಷ್ಣ ರ ಚಿತ್ರಗಳು






Prathidvani Yellapura