Breaking News

“ಮನೆಮನೆಗೆ ಪೊಲೀಸರು” ನೂತನ ನಗರ ಜಡ್ಡಿಯಲ್ಲಿ ಪಿ.ಐ.ರಮೇಶ್ ಮನೆಮನೆ ಬೇಟಿ.


ಯಲ್ಲಾಪುರ : ಪೊಲೀಸ್ ಇಲಾಖೆಯ ವಿನೂತನ ಕಾರ್ಯಕ್ರಮವಾದ ” ಮನೆಮನೆಗೆ ಪೊಲೀಸ್ ” ಯಶಸ್ವಿಯಾಗಿ ಜರುಗುತ್ತಿದ್ದು ಬುಧವಾರ ಬೀಟ್ ನಂ 3 ರ ನೂತನನಗರ ಜಡ್ಡಿಯಲ್ಲಿ ಪಿ.ಐ.ರಮೇಶ್ ಹಾನಾಪುರ ಹಲವು ಮನೆಗಳಿಗೆ ಭೇಟಿ ನೀಡಿ ಜಾಗೃತಿಯೊಂದಿಗೆ ಅವರ ಸಮಸ್ಯೆಗಳನ್ನು ಆಲಿಸಿದರು.


ಕೆಲವು ನಾಗರಿಕರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದು ತಪ್ಪು, ಕೆಟ್ಟದ್ದು ಎಂದು ತಿಳಿದುಕೊಂಡಿದ್ದಾರೆ ಅಲ್ಲದೆ ಕೆಲವು ಗಂಭೀರ ಸಮಸ್ಯೆಗಳನ್ನು ಪೊಲೀಸ್ ಠಾಣೆಗೆ ಬಂದು ಹೇಳಿಕೊಳ್ಳಲು ಭಯ ಹಾಗು ಮುಜುಗರ ಅನುಭವಿಸುವವರು ಇದ್ದಾರೆ ಅಂತಹ ಪ್ರಕರಣಗಳಿಗೆ ಇಲಾಖೆ ಮದ್ದು ಹುಡುಕಿದ್ದು ಪೊಲೀಸರೆ ಮನೆಮನೆಗೆ ತೆರಳಿ ಅವರಲ್ಲಿರುವ ಸಮಸ್ಯೆ ಮತ್ತು ಕಾನೂನಿನ ಪರಿಹಾರ ತಿಳಿಸಿಕೊಡುವುದಲ್ಲದೆ ನಾಗರಿಕರು ಅಪರಾಧ ಕೃತ್ಯಗಳನ್ನು ಕಡಿವಾಣ ಹಾಕುವ ಮತ್ತು ಮುಂಜಾಗ್ರತರಾಗುವ ಕುರಿತು ಅರಿವು ಮೂಡಿಸಲಾಗುತ್ತಿದೆ.


ಈ ಸಂದರ್ಭದಲ್ಲಿ ಬೀಟ್ ನಂ-3 ನೂತನನಗರ ಜಡ್ಡಿ ಉಸ್ತುವಾರಿ ಸಿಬ್ಬಂದಿ ಬಸವರಾಜ್ ಹಗರಿ ಮತ್ತು ರೇಖಾ ಜೊತೆಯಲ್ಲಿದ್ದು ಸಹಕರಿಸಿದರು.


ಇಲಾಖೆಯ ವಿನೂತನ ಕಾರ್ಯಕ್ರಮ ” ಮನೆಮನೆಗೆ ಪೊಲೀಸ್ ” ಉತ್ತಮ ಆಲೋಚನೆಯಾಗಿದ್ದು ಪ್ರತಿ ಮನೆಗಳಿಗು ತೆರಳಿ ಜಾಗೃತಿ ಮೂಡಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾರ್ಗೋಪಾಯಗಳನ್ನು ವಿಮರ್ಶಿಸಲಾಗುತ್ತಿದೆ. ಸಾರ್ವಜನಿಕರ ಪ್ರತಿಕ್ರಿಯೆ ಉತ್ತಮವಾಗಿದ್ದು ಕಾನೂನಿನ ಬಲ,ರಕ್ಷಣೆ ಸಾರ್ವಜನಿಕರೊಂದಿಗಿರುವುದನ್ನು ಕಂಡು ಪೊಲಿಸರೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ.
ರಮೇಶ್ ಹಾನಾಪುರ
ಪಿ.ಐ ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *