Breaking News

ಪುರಾತನ ಇತಿಹಾಸವಿರುವ ಭುವನೇಶ್ವರಿ ದೇವಾಲಯದ ನಿರ್ಮಾಣ ; ದೇಣಿಗೆ ಕೋರಿಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಕ್ರಿ.ಶ ೧೬೫೦ರಲ್ಲಿ ಛತ್ರಪತಿ ಶಿವಾಜಿ ಮಹಾರಾಜನ ಸೈನ್ಯದಲ್ಲಿದ್ದ ನಮ್ಮ ಹಿಂದೂ ಸಮಾಜಕ್ಕೆ ಮತ್ತು ನಮ್ಮ ಧರ್ಮದವರು ಪೂಜಿಸಲೆಂದೇ ಋಷಿಮುನಿಗಳಿಂದ  ದೇವಿಯ ವಿಗ್ರಹವನ್ನು ಬಳುವಳಿಯಾಗಿ ನೀಡಿದ್ದು ಇತಿಹಾಸ.

ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸರ್ವ ಸಮಾಜದ ಬಂಧುಗಳ ಸಹಕಾರದೊಂದಿಗೆ ಭುವನೇಶ್ವರಿ ದೇವಿಯ ಶಿಲಾಮಯ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು 25 ಲಕ್ಷಕ್ಕೂ ಅಧಿಕ ಮೊತ್ತವನ್ನು ಅಂದಾಜಿಸಲಾಗಿದೆ. ಈ ಮಹಾ ಸಾಹಸ ಕಾರ್ಯಕ್ಕೆ ಭಕ್ತ ಜನರು ತನು-ಮನ-ಧನ ಸಹಾಯಗಳಿಂದ ಸಹಕರಿಸಬೇಕೆಂದು ಭುವನೇಶ್ವರಿ ದೇವಿ ದೇವಸ್ಥಾನ ಸಮಿತಿ ಪತ್ರಿಕಾ ಹೇಳಿಕೆಯೊಂದಿಗೆ ಕೋರಿಕೆ ಸಲ್ಲಿಸಿದೆ.


ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ ವೆಚ್ಛ ಅಂದಾಜಿಸಲಾಗಿದ್ದು ವಿವಿಧ ರೂಪದಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ವಿವರವುಳ್ಳ ಪತ್ರಿಕೆಯನ್ನು ಯಲ್ಲಾಪುರದ ಶಕ್ತಿಪೀಠ ಗ್ರಾಮದೇವಿ ಸಾನಿಧ್ಯದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಈಶ್ವರ ಪರಶುರಾಮ ಪಾಟಣಕರ, ಅಧ್ಯಕ್ಷೆ ಶಾಮಿಲಿ ಪ್ರಭು ಪಾಟಣಕರ, ಉಪಾಧ್ಯಕ್ಷ ಸುರೇಶ ಬೋರಕರ, ಕಾರ್ಯದರ್ಶಿ ಘನಶ್ಯಾಮ ಮೋಹನ ರೇವಣಕರ, ಖಜಾಂಚಿ ಅಶೋಕ ಜಯರಾಮ ಪಾಟಣಕರ, ಸದಸ್ಯರಾದ ಗಣಪತಿ ಪಾಟಣಕರ, ಚಂದರಾಜ ಪಾಟಣಕರ, ಸ್ವಸ್ತಿಕ್ ಪಾಟಣಕರ, ವಿಜಯಲಕ್ಷ್ಮಿ ವಿಶ್ವನಾಥ ಪಾಟಣಕರ, ವಿಶ್ವನಾಥ ಪಾಟಣಕರ, ಪೂರ್ಣಿಮಾ ಅಶೋಕ ಪಾಟಣಕರ, ಪೂಜಾ ನೇತ್ರೇಕರ, ಸುನಂದಾ ಪಾಟಣಕರ, ಸುರೇಂದ್ರ ಮುರ್ಕುಂಬಿ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *