
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ದೇಶದ ಅನೇಕ ಕಡೆ ರಾಜಕಾರಣಿಗಳು, ಅಧಿಕಾರಿಗಳು ಬ್ರಾಹ್ಮಣರನ್ನು ಕನಿಷ್ಟವಾಗಿ ಕಾಣುವುದು, ಅವರ ಕುರಿತು ನಿಂದನಾತ್ಮಕ ಶಬ್ದಗಳನ್ನಾಡುವುದು ಸದಾ ಅಲ್ಲಿಲ್ಲಿ ನಡೆಯುತ್ತಲೇ ಇದೆ. ಈಗ ಇನ್ನೂ ಗಂಭೀರವಾಗಿ ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿದ್ದು, ಅಕ್ಷಮ್ಯ ಅಪರಾಧ. ಅಲ್ಲದೇ ಬೀದರಿನಲ್ಲಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಕೂಡ ತೀರಾ ಅಪರಾಧ. ಇವುಗಳನ್ನು ತೀವೃವಾಗಿ ತಾಲೂಕಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಶಿಕ್ಷಣ ಇಲಾಖೆಯ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಇದೊಂದು ಅಮಾನವೀಯ ಕೃತ್ಯ ಆಗಿರುವುದರಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.




Prathidvani Yellapura