
ಯಲ್ಲಾಪುರ : ತಾನೊಬ್ಬ ಸಾಮಾಜಿಕ ಕಾರ್ಯಕರ್ತ ಎಂಬ ಸುಳ್ಳು ಹೇಳಿಕೊಂಡ ಧೀರಜ್ ತಿನೇಕರ್ ಎಂಬಾತ ದೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಮಂದಿಗೆ ಕಾಟ ಕೊಡುತ್ತಿದ್ದಾನೆ. ಸ್ಥಳೀಯ ಪಂಚಾಯತಕ್ಕೆ ಸಂಬಂಧವೇ ಇಲ್ಲದಿದ್ದರು ಜನಪ್ರತಿನಿಧಿಗಳ ಅಭಿವೃದ್ಧಿ ಕಾರ್ಯಗಳಿಗೆ ಕಂಟಕನಾಗಿದ್ದಾನೆ. ವಿನಾ ಕಾರಣ ಲೋಕಾಯುಕ್ತ ದೂರು ನೀಡಿ ಅನೇಕರನ್ನು ಬೆದರಿಸುವ ಕಾರ್ಯದಲ್ಲಿ ತೊಡಗಿದ್ದಾನೆ.
ಈತನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ದೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಸೇರಿದಂತೆ ನೂರಾರು ಗ್ರಾಮಸ್ಥರು ಪಟ್ಟಣದ ಪೊಲೀಸ್ ಠಾಣೆ ಆವಾರದಲ್ಲಿ ಜಮಾಯಿಸಿ ದೂರು ನೀಡಿದರು.

ಕಳೆದೆರಡು ದಿನಗಳ ಹಿಂದೆ ನಾವು ನಮ್ಮವರು ಎಂಬ ಸ್ಥಳೀಯ ವಾಟ್ಸಪ್ ಗುಂಪಿನಲ್ಲಿ ಲೋಕಾಯುಕ್ತರು ಬರುತ್ತಿದ್ದಾರೆ ಬನ್ನಿ ಎಂಬ ಸಂದೇಶವನ್ನು ವಿಶ್ವನಾಥ ಹಳೆಮನೆ ಎಂಬುವರು ಬಿತ್ತರಿಸಿದ್ದರು ಇದನ್ನು ಕಂಡ ಸ್ಥಳೀಯ ಜನರು ಲೋಕಾಯುಕ್ತ ಅಧಿಕಾರಿಗಳು ಬಂದಾಗ ಸೇರಿದ್ದೆವು ಅಲ್ಲಿಯು ಅಧಿಕಾರಿಗಳಿಗೆ ವಿಶ್ವನಾಥ ಹಳೆ ಮನೆ ಎಂಬಾತ ತಪ್ಪು ಮಾಹಿತಿ ನೀಡುತ್ತಿದ್ದುದು ನಮ್ಮ ಅರಿವಿಗೆ ಬಂದಿತು. ಜನರನ್ನು ತಪ್ಪು ದಾರಿಗೆಳೆವುದೆ ಇವರ ಉದ್ದೇಶವಾಗಿದೆ. ಧೀರಜ್ ತಿನೇಕರ್ ಎಂಬ ಸಮಾಜ ಘಾತುಕ ಹಲವು ಮಂದಿಗೆ ಲೋಕಾಯುಕ್ತ ದೂರಿನ ವಿಷಯ ಹೇಳಿ ಹಣಕ್ಕೆ ಪೀಡುಸುತ್ತಿದ್ದು ಇಂತಹ ಘಾತುಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು ನೂರಾರು ಮಂದಿ ಗ್ರಾಮಸ್ಥರು ಸಹಿಮಾಡಿ ಯಲ್ಲಾಪುರ ಪಿ.ಐ ರಮೇಶ್ ಹಾನಾಪುರ ಅವರಿಗೆ ದೂರು ಸಲ್ಲಿಸಿರುತ್ತಾರೆ.

ಇದೇ ಪ್ರಕರಣದ ಸಂಬಂಧ ಲೋಕಾಯುಕ್ತ ತನಿಖೆ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದ ನನ್ನ ಮೇಲೆ ಅಶ್ಲೀಲ ಸಂಜ್ಞೆ ಮಾಡಿ ಅಸಭ್ಯವಾಗಿ ವರ್ತಿಸಿದ್ದು ನನ್ನ ಮಾನಕ್ಕೆ ಕುಂದುಂಟಾಗಿದೆ ಅಲ್ಲದೆ ಧೀರಜ್ ತಿನೇಕರ್ ಎಂಬಾತ ನನಗೆ ಜೀವ ಬೆದರಿಕೆ ಹಾಕಿದ್ದು ಇಂತಹ ವ್ಯಕ್ತಿಗಳಿಂದ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಆತಂಕದ ವಾತವರಣ ಸೃಷ್ಟಿಯಾಗಿದೆ ಈತನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸ್ಥಳೀಯ ದೇಹಳ್ಳಿ ನಿವಾಸಿ ರಜನಿ ಚಂದ್ರಕಾಂತ ಕುಣಬಿ ಎಂಬ ವಿವಾಹಿತ ಮಹಿಳೆ ಗಂಭಿರ ಆರೋಪದೊಂದಿಗೆ ಯಲ್ಲಾಪುರ ಪೊಲೀಸರಿಗೆ ದೂರು ನೀಡಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಾರ್ಯಕರ್ತ, ಆರ್.ಟಿ.ಐ ಕಾರ್ಯಕರ್ತ ಎಂಬ ಹೆಸರಿನಲ್ಲಿ ಅನೆಕ ಮಂದಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುವುದಲ್ಲದೆ ಅಧಿಕಾರಿಗಳು,ಜನಪ್ರತಿನಿಧಿಗಳಿಗೆ ಕಾಟ ಕೊಡಲು ಪ್ರಾರಂಭಿಸಿದ್ದಾರೆ. ಕೆಲವೊಮ್ಮೆಅಮಾಯಕರನ್ನು ಬೆದರಿಸಿ ಹಣ ಪಡೆದ ಪ್ರಕರಣಗಳು ನಡೆದಿದ್ದು ಯಾರು ಹೇಳಿಕೊಳ್ಳುತ್ತಿಲ್ಲ. ಸರ್ಕಾರ ಜನರಿಗೆ ಅನುಕೂಲ ಆಗಲೆಂದು ತಂದಿರುವ ಕಾನೂನನ್ನೆ ಅಸ್ರ ಮಾಡಿಕೊಂಡು ಬೆದರಿಸಿ ಹಣಮಾಡುವ ಇಂತ ಸಮಾಜ ಘಾತುಕರಿಗೆ ಸಾಮಾಜಿಕ ಕಾರ್ಯಕರ್ತ ಎಂಬ ಸುಳ್ಳುಗಾರರಿಗೆ ತಕ್ಕ ಪಾಠ ಕಾನೂನಿನ ಅಡಿಯಲ್ಲಿ ಕಲಿಸಬೇಕು.
ಗಣೇಶ ಮೆಣಸುಮನೆ, ಗಣಪತಿ ಬಜ್ಜೆ ಮನೆ, ಸುರೇಶ್ ಹೆಗಡೆ ಸ್ಥಳೀಯ ಗ್ರಾಮಸ್ಥರು.
Prathidvani Yellapura