Breaking News

ಮತಾಂತರಗೊಂಡ ಹಿಂದೂಗಳನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಕಾಯಕವಾಗಲಿ – ಚಕ್ರವರ್ತಿ ಸೂಲಿಬೆಲೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ಜಗತ್ತಿನ ಅತ್ಯಂತ ಶ್ರೇಷ್ಟ ಧರ್ಮ ಹಿಂದೂಧರ್ಮ ಸಂಕುಚಿತ ವ್ಯವಸ್ಥೆಯಲ್ಲಿರುವ ಧರ್ಮಗಳ ಮುಂದೆ ನನ್ನ ಹಿಂದೂ ಧರ್ಮ ವಿಶ್ವಧರ್ಮವಾಗಿದೆ. ನಾಬೊಬ್ಬ ಹಿಂದು ಎನ್ನುವ ಸಾತ್ವಿಕ ಅಹಂಕಾರವಿದೆ ಅದಕ್ಕಾಗಿ ನನಗೆ ಹೆಮ್ಮೆ ಇದೆ. ನಮ್ಮ ಬಹುದೊಡ್ಡ ವೈಪಲ್ಯವೆಂದರೆ ಮಕ್ಕಳಿಗೆ ಧರ್ಮ ಭೋದನೆ ಆಗದಿರುವುದು ವೈಪಲ್ಯವಾಗಿದೆ. ನಮ್ಮ ಜನ್ಮ ಭಾರತದಲ್ಲಿ ಮತ್ತು ಹಿಂದೂ ಧರ್ಮದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ. ಭಾರತ ಸರ್ಕಾರ ವಕ್ಫ್ ಆ್ಯಕ್ಟ್ ರದ್ದುಗೊಳಿಸಿದ ನಂತರ ಅಭಿನಂದನೆ ಸಲ್ಲಿಸುವ ಮೊದಲ ವೇದಿಕೆ ಇದಾಗಿದ್ದು ನನ್ನ ಪುಣ್ಯ ಎಂದು ಪ್ರಖರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.


ಅವರು ಪಟ್ಟಣದ ವೈಟಿಎಸ್ಎಸ್ ವಿದ್ಯಾ ಸಂಸ್ಥೆ ಆವಾರದಲ್ಲಿ ಯುಗಾದಿ ಉತ್ಸವ ಸಮಿತಿ ಹಮ್ಮಿಕೊಂಡ ” ಹಿಂದೂ ಸಮಾವೇಶ “ದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.


ಧರ್ಮದ ಪೋಷಣೆಗೆ ಮತ್ತು ರಕ್ಷಣೆಗೆ ಉತ್ತರ ಕನ್ಬಡ ಜಿಲ್ಲೆಯಲ್ಲಿ ನಮ್ಮ ತನ ಎಚ್ಚರಿಸುವವರು ಬೇಕಾಗಿದ್ದಾರೆ ಅಂತಹ ಪ್ರಕ್ರಿಯೆ ಇಲ್ಲಿಂದಲೆ ಪ್ರಾರಂಭವಾಗಲಿ ಯುಗಾದಿ ಉತ್ಸವ ಯಶಸ್ವಿಯಾಗಿ ನಡೆಸಿ ಹಿಂದುತ್ವ ಗಟ್ಟಿಯಾಗಲಿ ಎಂದು ಸಿದ್ದಾಪುರದ ಶಿರಳಗಿ ಕ್ಷೇತ್ರದ ಪರಮಪೂಜ್ಯ ಶ್ರೀ ಬಹ್ಮಾನಂದ ಭಾರತೀ ಸ್ವಾಮಿಜಿ ಆಶಿರ್ವಚನ ನೀಡಿದರು


ವೇದಿಕೆಗೆ ಹಿಂದುತ್ವದ ಪ್ರಖರ ಹೋರಾಟಗಾರ ದಿವಂಗತ ಯೋಗೇಶ ನಂಜಯ್ಯ ಹಿರೇಮಠ ಅವರ ಹೆಸರಿಟ್ಟು ಗೌರವಿಸಲಾಗಿತ್ತು. ಇದೇ ವೇದಿಕೆಯಲ್ಲಿ ಇತ್ತೀಚಿಗೆ ನಿಧನರಾದ ಮತ್ತೊಬ್ಬ ಹಿಂದುತ್ವದ ಹರಿಕಾರ ದಯಾಕಾರಂತ್ ಅವರ ಭಾವಚಿತ್ರವಿರಿಸಿ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ವೇದಿಕೆಯಲ್ಲಿ ದೈಹಿಕ ಶಿಕ್ಷಕ ತಾಂಡೂರಾಯನ್, ಗಿರೀಶ್ ಪೈ, ಮಾಚಣ್ಣಗವೇಗುಳಿ ಅವರನ್ನು ಗೌರವಿಸಲಾಯಿತು.
ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಚಾಲಕ ಪ್ರದೀಪ್ ಯಲ್ಲಾಪುರಕರ, ಹಿರಿಯರಾದ ಗಣಪತಿ ವೆಂಕಟರಮಣ ದೂಳಿ, ಹಿಂದಿನ ಯುಗಾದಿ ಉತ್ಸವ ಸಮಿತಿ ಸಂಚಾಲಜ ನಾಗರಾಜ ನಾಯಕ ಉಪಸ್ಥಿತರಿದ್ದರು.


ಪ್ರಾರಂಭದಲ್ಲಿ ಗೋ ಪೂಜೆಗೈದು ಮಾತೃಮಂಡಳಿ ಮಾತೆಯರಿಂದ ಭಗವದ್ಗೀತಾ ಪಠಣ ನಡೆಯಿತು
ಸುಜಲ್ ದುರಂದರ್ ಪ್ರಾರ್ಥಿಸಿದರು, ಸಂಘದ ಪ್ರಮುಖ ರಾಮಕೃಷ್ಣ ಕವಡಿಕೆರೆ ಸ್ವಾಗತಿಸಿದರು. ಪ್ರದೀಪ ಯಲ್ಲಾಪುರಕರ ಪ್ರಾಸ್ತಾವಿಕ ನುಡಿದರು. ಶಿಕ್ಷಕ ಚಂದ್ರಹಾಸ ನಾಯಕ ನಿರೂಪಿಸಿದರು.



ಹಿಂದು ಮಾತೆಯರು ಮಕ್ಕಳಿಗೆ ಧರ್ಮಪ್ರಜ್ಞೆ ಬೆಳೆಸಿ.ಉತ್ತಮ ಆಹಾರ ನೀಡಿ ಮಕ್ಕಳಿಗೆ ಆಂಜನೇಯನ ಶಕ್ತಿ ತುಂಬಬೇಕು ಮುಖ್ಯವಾಗಿ ಹಿಂದೂ ಧರ್ಮದಿಂದ ಅನಿವಾರ್ಯ ಕಾರಣಗಳಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗಿದ್ದರೆ ಅಂತಹವರನ್ನು ಮೂಲ ಧರ್ಮ ಹಿಂದೂ ಧರ್ಮಕ್ಕೆ ಕರೆತರುವ ಪ್ರಯತ್ನವಾಗಲಿ. ಧರ್ಮಕ್ಷೇತ್ರಗಳ ಮೇಲೆ ಸಂಚು ರೂಪಿಸುತಿದ್ದಾರೆ ಎಚ್ಚರವಿರಲಿ ಎಂದು ಧರ್ಮಸ್ಥಳ ಸೌಜನ್ಯ ಪ್ರಕರಣವನ್ನು ಮಾರ್ಮಿಕವಾಗಿ ನುಡಿದು ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರ ತಾಲೂಕಿನ ಗ್ರಾಮ ಒಂದರಲ್ಲಿ ಬಾಲಕಿಯೊಬ್ಬಳ ಮೇಲೆ ಅನ್ಯ ಧರ್ಮದ ಯುವಕ ನಡೆಸಿದ ಅತ್ಯಾಚಾರ ಅಮಾನವೀಯ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *