
ಯಲ್ಲಾಪುರ : ರಾಜ್ಯದಲ್ಲಿ ಎಲ್ಲೆಲ್ಲು ಬಜೆಟ್ ನದ್ದೆ ಹವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು ಗ್ಯಾರಂಟಿ ಯೋಜನೆಗಳ ನಡುವೆ 4 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದು ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ.

ಕೆಲವರು ಅದ್ಬುತ ಜನಪರ ಉತ್ತಮ ಬಜೆಟ್ ಎಂದು ಹಾಡಿ ಹೊಗಳಿದರೆ ಮತ್ತೆ ಕೆಲವರು ಇದೊಂದು ಸಪ್ಪೆ ಮತ್ತು ದೂರದೃಷ್ಟಿ ಇಲ್ಲದ ಸಪ್ಪೆ ಅಭಿವೃದ್ಧಿ ವಿರೋದಿ ಬಜೆಟ್ ಎನ್ನುತ್ತಿದ್ದಾರೆ.

ಅದೇನೆ ಇರಲಿ ಯಲ್ಲಾಪುರ ತಾಲೂಕಿನ ಮಟ್ಟಕ್ಕೆ ಹಿರಿಯ ಬಿಜೆಪಿ ನಾಯಕ ರಾಮುನಾಯ್ಕ್ ಪಕ್ಷಬೇಧ ಮರೆತು ಬಜೆಟ್ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನಪರ ಬಜೆಟ್ ಇದಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ.ಎನ್ ಗಾಂವ್ಕರ್ ಬಡವರ ಜನಪರ ಆಡಳಿತಕ್ಕೆ ಹೆಸರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಸಹ ಜನರ ಪರವಾಗಿಯೆ ಇದೆ ಇಂತಹ ಯಶಸ್ವಿಪೂರ್ಣ ಬಜೆಟ್ ಇದಾಗಿದೆ ಎಂದರು.
Prathidvani Yellapura